ಉಡುಪಿ(ನ.02): ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಕಾರ್ಯಪಡೆಯೊಂದನ್ನು ಸಿದ್ಧ ಪಡಿಸಲಾಗಿದೆ. ಮುಂದಿನ 2 ತಿಂಗಳಲ್ಲಿ ಅದು ವರದಿಯನ್ನು ಸಲ್ಲಿಸಲಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಕೋಸ್ಟಲ್ ಟೂರಿಸಂ ಮತ್ತು ಟೆಂಪಲ್ ಟೂರಿಸಂಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅವುಗಳನ್ನು ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ ಎಂದು ಎಂದು ರಾಜ್ಯ ಗೃಹಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಅವರು ಶುಕ್ರವಾರ ಜಿಲ್ಲಾ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿ ಸಂದೇಶ ನೀಡುತ್ತಿದ್ದರು. ಉಡುಪಿ ಜಿಲ್ಲೆ ಕನ್ನಡ ಮತ್ತು ತುಳು ಭಾಷೆಗಳ ಸಂಗಮ, ಈ ಎರಡೂ ಸಂಸ್ಕೃತಿಗಳನ್ನು ಜೊತೆಯಾಗಿ ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದ ಅವರು, ಜಿಲ್ಲೆಗೆ ಕೃಷಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಉದ್ಯಮಗಳನ್ನು ತರಿಸಲಾಗುವುದು ಎಂದಿದ್ದಾರೆ.

ಕರ್ನಾಟಕದ ಮೀನುಗಾರರಿಗೆ 'ಮಹಾ' ಸಮಸ್ಯೆ..! ಸಮುದ್ರದಲ್ಲೂ ಶುರುವಾಯ್ತು ಗಡಿ ಪ್ರಾಬ್ಲಮ್

ಇದಕ್ಕೆ ಮೊದಲು ಸಚಿವರು ರಾಷ್ಟ್ರಧ್ವಜವನ್ನು ಅರಳಿಸಿ, ವಿವಿಧ ತಂಡಗಳ ಪಥಸಂಚಲನವನ್ನು ವೀಕ್ಷಿಸಿ, ಗೌರವ ರಕ್ಷೆಯನ್ನು ಸ್ವೀಕರಿಸಿದರು. ನಂತರ 30 ಮಂದಿ ಸಾಧಕರಿಗೆ ಮತ್ತು 2 ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂತಾಯಿತಿ ಅಧ್ಯಕ್ಷೆ ನೀತಾ ಗುರುರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಕರಾವಳಿ ರಕ್ಷಣಾ ಪೊಲೀಸ್ ಎಸ್‌ಪಿ ಚೇತನ್ ಆರ್., ಜಿಲ್ಲಾ ಎಸ್‌ಪಿ ನಿಷಾ ಜೇಮ್ಸ್, ಎಡಿಸಿ ಸದಾಶಿವ ಪ್ರಭು ವೇದಿಕೆಯಲ್ಲಿದ್ದರು.

ಉಡುಪಿ: ಪಿಕ್‌ ಅಪ್ ಗೂಡ್ಸ್‌ನಲ್ಲಿತ್ತು 17 ಜಾನುವಾರು..! ಕರು ಸಾವು

ಮೀನುಗಾರರಿಗೆ ಪ್ರಕೃತಿ ವಿಕೋಪ ಪರಿಹಾರ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಮೀನುಗಾರರಿಗೂ ಪರಿಹಾರ ನೀಡುವುದಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಅವರೇ ಇನ್ನ ಕೆಲ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.