ಉಡುಪಿ(ನ.02): ಬ್ರಹ್ಮಾವರದ 34ನೇ ಕುದಿ ಗ್ರಾಮದ ಹಳ್ಳಿಉಬ್ಬು ಎಂಬಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 17 ಜಾನುವಾರುಗಳನ್ನು ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

4 ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ. ಬ್ರಹ್ಮಾವರ ಎಸಐ ರಾಘವೇಂದ್ರ ಸಿ. ಸಿಬ್ಬಂದಿಯೊಂದಿಗೆ ಶುಕ್ರವಾರ ಮುಂಜಾನೆ 3 ಗಂಟೆಗೆ ಬ್ರಹ್ಮಾವರ- ಕೊಕ್ಕರ್ಣೆ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕೋಟಂಬೈಲು ಕಡೆಯಿಂದ ಬಂದ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು: ಅಕ್ರಮ ಗೋಸಾಗಣೆ, ಇಬ್ಬರ ಬಂಧನ

ವಾಹನವನ್ನು ಸ್ವಲ್ಪ ಹಿಂದೆಯೇ ನಿಲ್ಲಿಸಿ, ಆರೋಪಿ ಚಾಲಕ ಹಾಗೂ ಚಾಲಕನ ಎಡಬದಿಯಲ್ಲಿದ್ದ ಇಬ್ಬರು ಹಾಗೂ ವಾಹನದ ಟಾಟ್‌ನಲ್ಲಿ ಕುಳಿತಿದ್ದ ಇನ್ನೊಬ್ಬ ಆರೋಪಿ ವಾಹನದಿಂದ ಕೆಳಗಿಳಿದು ಕತ್ತಲೆಯಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಜಾನುವಾರುಗಳನ್ನು ಹಗ್ಗದಿಂದ ಕಾಲುಗಳನ್ನು ಒಂದಕ್ಕೊಂದು ಒಟ್ಟು ಮಾಡಿ ಹಿಂಸೆಯಾಗುವ ರೀತಿಯಲ್ಲಿ ಕಟ್ಟಿ ತುಂಬಿಸಲಾಗಿತ್ತು. ಈ ಜಾನುವಾರುಗಳ ಅಂದಾಜು ಮೌಲ್ಯ 52000 ರು. ಆಗಿದ್ದು, ಅದರಲ್ಲಿದ್ದ ಒಂದು ಕರು ಮೃತಪಟ್ಟಿತ್ತು. ಈ ಜಾನುವಾರುಗಳನ್ನು ಆರೋಪಿಗಳು ಕಳವು ಮಾಡಿ, ಮಾಂಸಕ್ಕಾಗಿ ಕಡಿದು ಮಾರಾಟ ಮಾರುಲು ಸಾಗಿಸುತ್ತಿದ್ದರೆಂದು ಶಂಕಿಸಲಾಗಿದ್ದು, ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರು ಸಾಗಾಟ ಸುರಕ್ಷೆಗೆ ಹೊಸ ಆ್ಯಪ್‌