ಉಡುಪಿ(ಅ.31): ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತವನ್ನು ಕೊಂದು ಹಾಕಿದ್ರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಲೋಕಾಯುಕ್ತ ಬಲಪಡಿಸಲು ಅವರ ಪಾತ್ರ ಮಹತ್ವದ್ದು, ಅವರು ಲೋಕಾಯುಕ್ತರಾಗಿ ನೀಡಿದ ಕಾನೂನಿನ ಕೊಡುಗೆ ಸರ್ಕಾರಗಳು ಪಾಲಿಸಬೇಕು ಎಂದಿದ್ದಾರೆ.

ಬಡತನ ನಿರ್ಮೂಲನೆಯೇ ಸರ್ಕಾರದ ಪ್ರಥಮ ಆದ್ಯತೆ: ನಿರ್ಮಲಾ ಸೀತಾರಾಮನ್

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತವನ್ನು ಕೊಂದು ಹಾಕಿದರು, ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿದರು, ಅವರ ಪ್ರಕರಣಗಳನ್ನೆಲ್ಲ ಎಸಿಬಿ ಮೂಲಕ ಮುಚ್ಚಿಹಾಕಿದರು. ಆದರೆ ಬಿಜೆಪಿ ಸರ್ಕಾರ ಲೋಕಾಯುಕ್ತವನ್ನು ಬಲಪಡಿಸಿದೆ. ಮುಂದಿನ ದಿನಗಳಲ್ಲಿ ಲೋಕಾಯುಕ್ತವನ್ನು ಇನ್ನಷ್ಟುಬಲಪಡಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ವಿಶ್ವದ ಅತಿ ಹಿರಿಯಜ್ಜಿ 123 ವರ್ಷದ ಟ್ಯಾಂಜಿಲ್ಯಾ ಇನ್ನಿಲ್ಲ