Asianet Suvarna News Asianet Suvarna News

ವೀರೇಂದ್ರ ಹೆಗ್ಗಡೆ ಕಾರ್ಯಕ್ಕೆ ನಿರ್ಮಲಾ ಸೀತಾರಾಮನ್ ಮೆಚ್ಚುಗೆ

ಬಡತನ ನಿರ್ಮೂಲನೆ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸ್ವಾವಲಂಬಿಗಳಾಗಿ ಕಾರ್ಯ ನಿರ್ವಹಿಸುವವರಿಗೆ ಬ್ಯಾಂಕುಗಳು ನೆರವು ನೀಡುತ್ತವೆ. ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

 

Eradication of Poverty is our first priority says Nirmala Sitharaman
Author
Bangalore, First Published Oct 31, 2019, 9:40 AM IST

ದೇವನಹಳ್ಳಿ(ಅ.31): ದೇವನಹಳ್ಳಿ ಸಮೀಪವಿರುವ ಕ್ಲಾರ್ಕ್ಸ್‌ ಎಕ್ಸಾಟಿಕಾ ರೆಸಾರ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸ್ವಸಹಾಯ ಸಂಘ ಚಳುವಳಿಯಿಂದ ಸುಸ್ಥಿರ ಗುರಿಗಳನ್ನು ವಿವಿಧ ಯೋಜನೆಗಳ ಮೂಲಕ ಬಡತನ ನಿವಾರಣೆ ಬಗ್ಗೆನಾಲ್ಕು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಚಾಲನೆ ನೀಡಿದ್ದಾರೆ.

ಅವರು ಮಾತನಾಡಿ, ಬಡತನ ನಿರ್ಮೂಲನೆ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಸ್ವಾವಲಂಬಿಗಳಾಗಿ ಕಾರ್ಯ ನಿರ್ವಹಿಸುವವರಿಗೆ ಬ್ಯಾಂಕುಗಳು ನೆರವು ನೀಡುತ್ತವೆ. ಸರ್ಕಾರದ ಯೋಜನೆಗಳಿಗೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದಿದ್ದಾರೆ.

ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೆರವೇರಿಸಿ ಮಾತನಾಡಿ, ಹಲವಾರು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ವೀರೇಂದ್ರ ಹೆಗ್ಗಡೆಯವರ ಕಾರ್ಯ ಅನುಕರಣೀಯ. ಅವರ ಎಲ್ಲ ಕಾರ್ಯಗಳು ಸಮುದಾಯಗಳ ಏಳಿಗೆಗೆ ಮೀಸಲಾಗಿವೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕನಸುಗಾರರಾದ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಣ್ಣದಾಗಿ ಆರಂಭವಾದ ಸಾಮಾಜಿಕ ಕಾರ್ಯ ಅಪಾರ ಆತ್ಮ ಸಂತೋಷ ಉಂಟು ಮಾಡಿದೆ. ಸರ್ಕಾರಗಳ ನೆರವು ಎಂದಿಗೂ ಸ್ಮರಣಾರ್ಹ ಎಂದಿದ್ದಾರೆ.

ತೆರಿಗೆ ವಂಚಕರಿಗೆ ಅಧಿಕಾರಿಗಳೇ ಸಾಥ್‌, ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ

ಅಮೆರಿಕ ಚಿಕಾಗೋ ನಗರದ ಪ್ರೊ. ಲ್ಯಾರಿ ರೀಡ್‌ ಪ್ರಧಾನ ಭಾಷಣ ಮಾಡಿದರು. ನಬಾರ್ಡ್‌ ಸಂಸ್ಥೆ ಅಧ್ಯಕ್ಷ ಡಾ. ಹಷ್‌ರ್‍ ಕುಮಾರ್‌ ಭಾನ್ವಾಲ ಯೋಜನೆಯ ಸಾಧನಾ ಪುಸ್ತಕ ಬಿಡುಗಡೆ ಮಾಡಿದರು,ಸಮಾರಂಭದಲ್ಲಿ ಧರ್ಮಸ್ಥಳದ ಜನವಿಕಾಸ ಯೋಜನೆಯ ಮುಖ್ಯಸ್ಥೆ ಡಿ. ವೀರೇಂದ್ರಹೆಗ್ಗಡೆ ರವರ ಪತ್ನಿ ಹೇಮಾವತಿ ವಿ.ಹೆಗ್ಗಡೆ, ಮುಂಬಯಿನ ಬ್ಯಾಂಕ್‌ ಆಫ್‌ ಇಂಡಿಯಾ ಮುಖ್ಯಸ್ಥ ಮೊಹಮದ್‌ ಮುಸ್ತಾಫ, ಎಲ್‌ ಐಸಿ ವಿಮಾ ಕಂಪನಿಯ ಮ್ಯಾನೇಜಿಂಗ್‌ ಡೈರಕ್ಟರ್‌ ಟಿ.ಸಿ. ಸುಶೀಲ್‌ ಕುಮಾರ್‌, ಸಿಂಡಿಕೇಟ್‌ ಬ್ಯಾಂಕಿನ ಮ್ಯಾನೇಜಿಂಗ್‌ ಡೈರಕ್ಟರ್‌ ಮೃತ್ಯುಂಜಯ ಮಹಾಪತ್ರ ಹಾಗೂ ಬ್ಯಾಂಕ್‌ ಆಫ್‌ ಬರೋಡ ನಿರ್ದೇಶಕ ಮುರಳಿ ರಾಮಸ್ವಾಮಿ ಉಪಸ್ಥಿತರಿದ್ದರು.

ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌. ಮಂಜುನಾಥ್‌ ಸ್ವಾಗತ ಕೋರಿದರು. ಈ ಸಮ್ಮೇಳನಕ್ಕೆ ಅಮೆರಿಕ,ಆಸ್ಪ್ರೇಲಿಯಾ, ಯುರೋಪ್‌, ಆಫ್ರಿಕಾ ಮತ್ತು ಏಷ್ಯಾ ಖಂಡದ ಸುಮಾರು 90ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಶ್ವದ ಅತಿ ಹಿರಿಯಜ್ಜಿ 123 ವರ್ಷದ ಟ್ಯಾಂಜಿಲ್ಯಾ ಇನ್ನಿಲ್ಲ..

Follow Us:
Download App:
  • android
  • ios