ಹಳ್ಳಿ ಹುಡುಗಿ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುವುದು ಪ್ರತಿ ಧಾರಾವಾಹಿಯಲ್ಲಿಯೂ ಕಾಣಬಹುದಾಗ ಕಾಮನ್ ದೃಶ್ಯ. ಆದರೆ ಸಿಟಿಗೆ ಬಂದು ತನಗೆ ಮತ್ತೊಂದು ಕುಟುಂಬವಿದೆ, ಅವಳಿ ಅಕ್ಕ ಇದ್ದಾಳೆ, ಸಿಕ್ಕಾಪಟ್ಟೆ ಸಿರಿವಂತ ಕುಟುಂಬದ ಮೊಮ್ಮಗಳು ಎಂದೆಲ್ಲಾ ಟ್ವಿಸ್ಟ್‌ ಪಡೆದುಕೊಂಡರೆ ಹೇಗಿರುತ್ತದೆ? ಹೌದು ಇದು ಕಮಲಿ ಧಾರಾವಾಹಿಯ ಇಂಟ್ರೆಸ್ಟಿಂಗ್ ಸ್ಟೋರಿ. ಹಾಗಾದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಸುಳ್ಳಾ?

ಈಜು ಕೊಳದಲ್ಲಿ ಮಿಂದೆದ್ದು ಬಿಸಿ ಹೆಚ್ಚಿಸಿದ ಕನ್ನಡದ ನಂಬರ್ 1 ಸೀರಿಯಲ್ ನಾಯಕಿ! 

ಕಿರುತೆರೆ ಟಾಪ್‌ 10 ಧಾರಾವಾಹಿಗಳಲ್ಲಿ ಕಮಲಿ ಧಾರಾವಾಹಿಯೂ ಸ್ಥಾನ ಪಡೆದುಕೊಂಡಿದೆ. ಪ್ರತಿ ವಾರವೂ ಉತ್ತಮ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಆದರೂ ಧಾರಾವಾಹಿ ಶೀಘ್ರದಲ್ಲಿಯೇ ಅಂತ್ಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದು ಕೇವಲ ನೆಟ್ಟಿಗರು ಹಾಗೂ ವೀಕ್ಷಕರ ಮಾತುಗಳು.

ಕೊರೋನಾ ಲಾಕ್‌ಡೌನ್‌ ವೇಳೆ ಚಿತ್ರೀಕರಣ ಮಾಡಲಾಗದೆ ನಷ್ಟದಲ್ಲಿ ಅದೆಷ್ಟೋ ಧಾರಾವಾಹಿಗಳು ಅಂತ್ಯ ಕಂಡವು. ಈಗ ಚಿತ್ರೀಕರಣವೂ ನಡೆಯುತ್ತಿದೆ ಆದರೂ ಈ ರೀತಿ ವಿಚಾರ ಹರಿದಾಡುತ್ತಿರುವುದು ತುಂಬಾನೇ ಶಾಕಿಂಗ್. ಇತ್ತೀಚಿನ ದಿನಗಳಲ್ಲಿ ಪರಭಾಷಾ ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗುತ್ತಿರುವುದನ್ನು ಕಾಣಬಹುದು, ಅಲ್ಲದೇ ಅವು ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಿದೆ.  ಕನ್ನಡಿಗರ ಕನ್ನಡ ಧಾರಾವಾಹಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಹಲವರು ಧ್ವನಿ ಎತ್ತಿದ್ದರು.

ಬೈಗುಳ ತಿಂದ ಕಿರುತೆರೆ ನಟಿ ಅನಿಕಾ; ಸೋಷಿಯಲ್‌ ಮೀಡಿಯಾದಿಂದ 6 ತಿಂಗಳು ಔಟ್? 

ಒಟ್ಟಿನಲ್ಲಿ ನಮ್ಮ ಹಳ್ಳಿ ಹುಡುಗಿ ಕಮಲಿ ಹಾಗೂ ರಿಷಿ ಸರ್ ರೊಮ್ಯಾನ್ಸ್‌ ನೋಡೋಕೆ ಸಖತ್ ಮಜಾ ಇರುತ್ತದೆ. ಇಬ್ಬರೂ ಆದಷ್ಟು ಬೇಗ ಮದುವೆಯಾಗಲಿ, ವಿಲನ್ ಅನಿಕಾಗೆ ಪಾಠ ಕಲಿಸುವುದನ್ನು ನೋಡಬೇಕು ಎನ್ನುತ್ತಿದ್ದಾರೆ.