ಕನ್ನಡ ರಿಯಾಲಿಟಿ ಶೋನಲ್ಲಿ ವೀಕೆಂಡ್ ವಿತ್ ರಮೇಶ್ ಭಾರೀ ಜನಪ್ರಿಯ ರಿಯಾಲಿಟಿ ಶೋ. ಅನೇಕ ಸಾಧಕರು ಹಾಟ್ ಚೇರ್ ನಲ್ಲಿ ಕುಳಿತಿದ್ದಾರೆ. ಇನ್ನೂ ಅನೇಕ ಸಾಧಕರು ಈ ಸೀಸನ್ ನಲ್ಲಿ ಬರಲಿದ್ದಾರೆ. 

ಕ್ರಿಕೆಟಿಗರ ಆರಾಧ್ಯ ದೈವ ರಾಹುಲ್ ದ್ರಾವಿಡ್ ರನ್ನು ಈ ಬಾರಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಕರೆಸಲು ಪ್ಲಾನ್ ಮಾಡಲಾಗುತ್ತಿದೆ. ಇದಕ್ಕಾಗಿ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆದರೆ ಸಾಧ್ಯವಾಗುತ್ತಿಲ್ಲ. ಈ ಬಾರಿ ಜೀ ಕನ್ನಡ ಹೊಸ ಪ್ಲಾನ್ ಮಾಡಿದೆ. ಟ್ವಿಟರ್ ಮೂಲಕ ಅಭಿಯಾನ ಶುರು ಮಾಡಿದೆ. ವೀಕ್ಷಕರ ಸಹಕಾರವನ್ನು ಕೋರಿದೆ. 

ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್'ರವರನ್ನು ಸಾಧಕರ ಸೀಟ್'ಗೆ ಕರೆತರುವ ಪ್ರಯತ್ನ ಮಾಡೋಣ" ಎಂದು ಟ್ವೀಟ್ ಮಾಡಿದ್ದಾರೆ.