ಶ್ರಾವಣಿ ಬ್ಲಡ್ ಕೊಡ್ತಿದ್ರೆ ಸುಬ್ಬು ಹಿಂಗ್ಯಾಕೆ ಮಾಡ್ತಿದ್ದಾನೆ! ನಿಮ್ಗೂ ಈ ಅನುಭವ ಆಗಿದ್ಯಾ?

 ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಸಾವಿತ್ರಿಗೆ ಗುಂಡೇಟು ತಗುಲಿ ಅವಳು ಅಪಾಯದಲ್ಲಿದ್ದಾಳೆ. ಅವಳಿಗೆ ಶ್ರಾವಣಿ ಬ್ಲಡ್ ಕೊಡ್ತಿದ್ದಾಳೆ. ಆದರೆ ಅದನ್ನು ಕಂಡು ಸುಬ್ಬು ಹಿಂಗ್ಯಾಕೆ ಆಡ್ತಿದ್ದಾನೆ..

zee kannada shravani subramanya serial shravani giving blood to savitri subbu scared

ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ನಲ್ಲಿ ಸುಬ್ಬು ಅನ್ನೋ ಚಲಾಕಿ ಹುಡುಗ ಮತ್ತು ಶ್ರಾವಣಿ ಅನ್ನೋ ಕಚಗುಳಿ ಇಡೋ ಹುಡುಗಿ ಜೋಡಿ ಎಲ್ಲರಿಗೂ ಇಷ್ಟ. ಅಮೋಘ ಮತ್ತು ಆಸಿಯಾ ಫಿರ್ದೋಸ್ ಈ ಪಾತ್ರವನ್ನು ಸಖತ್ ಮಜವಾಗಿ ಅಭಿನಯಿಸ್ತಾ ಇದ್ದಾರೆ. ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರೂ, ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಶ್ರಾವಣಿ. ಆದರೆ ಸುತ್ತಲಿನವರು ಅಪ್ಪನ ತಲೆಯಲ್ಲಿ ಮಗಳ ಬಗ್ಗೆ ವಿಷ ತುಂಬಿದ್ದಾರೆ. ಆ ವಿಷ ಒಳಗಿರುವ ತನಕ ಅಪ್ಪ ಮಗಳ ನಡುವೆ ಕಂದಕ ಇದ್ದೇ ಇರುತ್ತೆ. ಆದರೆ ಈ ಕೆಟ್ಟತನದ ವಿಷವನ್ನು ಮುಗ್ಧ ಮಗಳು ಶ್ರಾವಣಿಯ ಪ್ರೀತಿ ಇಷ್ಟಿಷ್ಟಾಗಿ ಹೊರ ತೆಗೆಯುತ್ತಿದೆ. ಇಲ್ಲೀವರೆಗೆ ಅಪ್ಪ ಮಗಳನ್ನು ದೂರ ಮಾಡಿದ್ದ ವಿಧಿಯೂ ಇದೀಗ ಶ್ರಾವಣಿಗೆ ಫಾರ್ ಆಗಿ ನಿಂತ ಹಾಗಿದೆ. ಏಕೆಂದರೆ ಎಲ್ಲ ಘಟನೆಗಳೂ ಅವಳ ಮತ್ತು ಅವಳ ಅಪ್ಪನ ನಡುವಿನ ಅಂತರವನ್ನು ಕಡಿಮೆ ಮಾಡುವ ಹಾಗೆ ಕಾಣುತ್ತಿದೆ. ಇತ್ತೀಚೆಗೆ ರಿವೀಲ್ ಆಗಿರೋ ಒಂದು ಅಂಶ ಅಂದರೆ ಶಿಕ್ಷಣ ಸಚಿವ ವೀರೇಂದ್ರನಾಥ್ ಅಂದರೆ ಶ್ರಾವಣಿ ಅಪ್ಪ ವೀರು ಮತ್ತು ಅವಳ ಅಮ್ಮಂದು ಲವ್‌ ಸ್ಟೋರಿ ಆಗಿತ್ತು.

ಶ್ರಾವಣಿ ಅಮ್ಮನ ಕಡೆಯವರು ಸರ್ಕಾರವನ್ನೇ ನಡುಗಿಸುವಷ್ಟು ದೊಡ್ಡ ಕುಟುಂಬವಾಗಿದ್ದು, ಆ ಕುಟುಂಬದ ಮುಖ್ಯಸ್ಥರ ಪರ್ಸನಲ್ ಸೆಕ್ರೆಟರಿ ಆಗಿದ್ದ ವೀರು ಆ ಮನೆಯ ಮಗಳನ್ನೇ ವಿವಾಹ ಆಗ್ತಾನೆ. ಅವರ ಮಗಳೇ ಶ್ರಾವಣಿ. ಆದರೆ ಇದೀಗ ಶ್ರಾವಣಿ ಮತ್ತು ಸುಬ್ರಹ್ಮಣ್ಯನ ಕಥೆಯೂ ಹಾಗೇ ಸಾಗ್ತಿದೆ. ಸುಬ್ರಹ್ಮಣ್ಯ ಶ್ರಾವಣಿ ಅಪ್ಪ ವೀರೇಂದ್ರನ ಪರ್ಸನಲ್ ಸೆಕ್ರೆಟರಿ. ಅವನನ್ನು ಇದೀಗ ಶ್ರಾವಣಿ ಪ್ರೀತಿ ಮಾಡ್ತಿದ್ದಾಳೆ.

lakshmi nivasa Serial: ಮತ್ತೆ ಜಯಂತ್ ನಾಗವಲ್ಲಿ ಆಗೋ ಟೈಮ್‌ ಬಂತು! ದಿಲೀಪನ ಕಥೆ ಮುಗೀತು ಅಂತಿರೋ ನೆಟ್ಟಿಗರು

ಅಂದಹಾಗೆ ಶ್ರಾವಣಿಗೆ ಸುಬ್ರಹ್ಮಣ್ಯನಲ್ಲಿ ಪ್ರೀತಿ ಹುಟ್ಟೋ ಹಾಗೆ ಮಾಡಿದ್ದು ವಿಲನ್‌ಗಳೇ. ಶ್ರಾವಣಿ ಅತ್ತೆ ಅಂದರೆ ವೀರೇಂದ್ರನ ಅಕ್ಕನಿಗೆ ಸ್ವಂತ ತಮ್ಮ ಮತ್ತು ಅವನ ಮಗಳ ಬಗ್ಗೆಯೇ ದ್ವೇಷ. ಅವರ ಆಸ್ತಿಯನ್ನು ತಾನು ಹೊಡೆಯಬೇಕು ಅನ್ನುವ ಕುತಂತ್ರ. ಅದಕ್ಕಾಗಿ ಅವಳು ಈಗಾಗಲೇ ಅಪ್ಪ ವೀರೂ ಮತ್ತು ಮಗಳು ಶ್ರಾವಣಿ ನಡುವೆ ದೊಡ್ಡ ಕಂದಕ ತಂದಿದ್ದಾಳೆ. ಇದೀಗ ಸಾಲಿಗ್ರಾಮದಲ್ಲಿ ಮೊದಲಿಗೆ ಮಗಳು ಶ್ರಾವಣಿ ಬೆಂಕಿಗೆ ಬಿದ್ದು ಸಾಯುವ ಹಾಗೆ ತಂತ್ರ ಮಾಡಿದ್ದಳು. ಆದರೆ ಸುಬ್ಬು ಎಂಟ್ರಿಯಿಂದ ಅದು ಸಾಧ್ಯ ಆಗಲಿಲ್ಲ. ಇನ್ನೊಂದು ಕಡೆ ತಮ್ಮ ವೀರೇಂದ್ರನಿಗೆ ಶಾರ್ಪ್ ಶೂಟರ್ ಕಡೆಯಿಂದ ಶೂಟ್ ಮಾಡಿಸಿದ್ದಾಳೆ. ಆದರೆ ಇಲ್ಲಿ ತನ್ನ ಜೀವ ಒತ್ತೆ ಇಟ್ಟು ಆ ಊರಿನ ಹುಡುಗಿ ಸಾವಿತ್ರಿ ವೀರೇಂದ್ರನ ಜೀವ ಕಾದಿದ್ದಾಳೆ.

ಇದೀಗ ಸಾವಿತ್ರಿ ಆಸ್ಪತ್ರೆಯಲ್ಲಿದ್ದಾಳೆ. ಬುಲೆಟ್ ತಾಗಿರುವ ಅವಳಿಗೆ ಆಪರೇಶನ್ ನಡೀತಿದೆ. ಶ್ರಾವಣಿಯೇ ಬ್ಲಡ್ ಕೊಡ್ತಿದ್ದಾಳೆ. ಆದರೆ ಸುಬ್ಬುಗೆ ಶ್ರಾವಣಿ ಬ್ಲಡ್‌ ಕೊಡೋದನ್ನು ನೋಡಕ್ಕಾಗ್ತಿಲ್ಲ. ಹಾಗಂತ ಅವಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗೋದಕ್ಕೂ ಆಗ್ತಿಲ್ಲ. ಅವನ ಅವಸ್ಥೆ ನೋಡಿ ನರ್ಸ್‌ಗೆ ನಗು ಬರೋ ಹಾಗಾಗಿದೆ. ಆದರೆ ಇಲ್ಲಿ ಅವಳೊಂದು ಮಾತು ಹೇಳ್ತಾಳೆ. 'ಯಾರಾದ್ರೂ ಬ್ಲಡ್ ಕೊಡ್ತಿದ್ರೆ ನಾವು ಯಾರನ್ನೂ ಒಳಗೆ ಬಿಡಲ್ಲ. ರಕ್ತಸಂಬಂಧಿಗಳಷ್ಟೇ ಇಲ್ಲಿರಬಹುದು' ಅಂತ. ಆಗ ಟಪ್ಪಂತ ಶ್ರಾವಣಿ ಬಾಯಲ್ಲಿ ಬಂದಿರೋ ಮಾತು, 'ಸುಬ್ಬುನೂ ಒಂಥರ ನಂಗೆ ರಕ್ತಸಂಬಂಧಿ ಥರನೇ. ಅವ್ನು ನನ್ನೋನೆ ' ಅನ್ನೋದು. ಅದನ್ನು ಕೇಳಿ ಸುಬ್ಬು ಶಾಕ್ ಆದ್ರೆ ಶ್ರಾವಣಿ ಮುಖದಲ್ಲಿ ತುಂಟತನವಿದೆ.

ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡಗೆ ಊಸರವಳ್ಳಿ ಪಟ್ಟ, ಗೌತಮಿ ಮೇಲೆ ಸಾಫ್ಟ್ ಕಾರ್ನ್

ಅಂದಹಾಗೆ ಈ ಸೀರಿಯಲ್‌ ಜೀ ಕನ್ನಡದಲ್ಲಿ ರಾತ್ರಿ ಒಂಭತ್ತಕ್ಕೆ ಪ್ರಸಾರ ಆಗುತ್ತೆ. ಹಿರಿಯ ನಟ ಮೋಹನ್ ಮಿನಿಸ್ಟರ್ ವೀರೇಂದ್ರನಾಗಿ ನಟಿಸಿದ್ರೆ ಮಾಡೆಲಿಂಗ್ ಹಿನ್ನೆಲೆಯ ಆಸಿಯಾ ನಾಯಕಿಯಾಗಿದ್ದಾರೆ. ಅಮೋಘ್ ನಾಯಕನಾಗಿ ನಟಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

Latest Videos
Follow Us:
Download App:
  • android
  • ios