Asianet Suvarna News Asianet Suvarna News

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಬಂದ ನಟಿ ಮಾನ್ಸಿ?

ಜನಪ್ರಿಯತೆ ತಂದುಕೊಟ್ಟ ಧಾರಾವಾಹಿಯಿಂದ ಹೊರ ನಡೆದ ಮಾನ್ಸಿ. ಈ ನಿರ್ಧಾರಕ್ಕೆ ಕಾರಣವೇನು?

Zee Kannada Shilpa Iyer quits jothe jotheyalli daily soap vcs
Author
Bangalore, First Published Oct 11, 2021, 2:13 PM IST
  • Facebook
  • Twitter
  • Whatsapp

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyali) ಧಾರಾವಾಹಿ ಜನರ ಪ್ರೀತಿ ಗಿಟ್ಟಿಸಿಕೊಂಡಿದೆ. ಟಿಆರ್‌ಪಿಯಲ್ಲಿ (TRP) ಟಾಪ್ ಸ್ಥಾನ ಪಡೆದುಕೊಳ್ಳುವ ಈ ಧಾರಾವಾಹಿ ಪ್ರತಿಯೊಬ್ಬ ಪಾತ್ರಧಾರಿಗೂ ಜನಪ್ರಿಯತೆ ತಂದುಕೊಟ್ಟಿದೆ. ಅಲ್ಲದೇ ಇದರಿಂದ ಅನೇಕರು ಬೆಳ್ಳಿತೆರೆ ಮತ್ತು ಪರಭಾಷೆಗಳಲ ಕಿರು ತೆರೆ ಮೇಲೂ ಮಿಂಚುತ್ತಿದ್ದಾರೆ. ಇನ್ನೇನು ರಾಜನಂದಿನಿ (Rajanandini) ಪರಿಚಯ ಆಗುವ ಸಮಯ ಹತ್ತಿರ ಬರುತ್ತಿದೆ, ಎನ್ನುಷ್ಟರಲ್ಲಿ ಆರ್ಯ ಅತ್ತಿಗೆ ಪಾತ್ರಧಾರಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. 

ಹೌದು! ಅರ್ಯವರ್ಧನ್ (Aryavardhan) ಅತ್ತಿಗೆ ಮಾನ್ಸಿ ಪಾತ್ರದಲ್ಲಿ ಮಿಂಚುತ್ತಿದ್ದ ಶಿಲ್ಪಾ ಅಯ್ಯರ್ (Shilpa Iyer) ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆಂದು ಕೆಲವರು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಶಿಲ್ಪಾ ಸ್ಪಷ್ಟನೆ ನೀಡಿದ್ದಾರೆ. ಕಳೆದ 25 ದಿನಗಳಿಂದ ನನಗೆ ಹಲವು ಮೆಸೇಜ್ (Message) ಬರುತ್ತಲೇ ಇತ್ತು. ಹೌದು ನಾನು ಜೊತೆ ಜೊತೆಯಲಿ ಧಾರಾವಾಹಿಯಿಂದ ವೈಯಕ್ತಿಕ ಕಾರಣಗಳಿಗಾಗಿ ಹೊರ ಬಂದಿದ್ದೇನೆ. ವೈಯಕ್ತಿಕ ಕಾರಣ ಅನ್ನೋದು ಬಿಟ್ಟರೆ ಬೇರೆ ಯಾವುದೇ ಕಾರಣಗಳಾಗಲಿ ಅಥವಾ ಉದ್ದೇಶ ಆಗಲಿ ಇಲ್ಲ. ಇನ್ನುಂದೆ ನಾನು ಧಾರಾವಾಹಿಯಲ್ಲಿ ಮಾನ್ಸಿ (Mansi) ಪಾತ್ರಧಾರಿಯಾಗಿ ಮುಂದುವರಿಯುತ್ತಿಲ್ಲ. ಇಷ್ಟು ದಿನ ನೀವೆಲ್ಲರೂ ನನಗೆ ಪ್ರೀತಿ ಕೊಟ್ಟಿರೋದಕ್ಕೆ ಥ್ಯಾಂಕ್ಯು.  ಇನ್ನುಂದೆ ನಾನು ಮಾಡುವ ಕೆಲಸ ಹಾಗೂ ಪ್ರಾಜೆಕ್ಟ್‌ಗಳಿಗೂ ನಿಮ್ಮ ಪ್ರೀತಿ ಇರಲಿ. ನನ್ನ ಮುಂದಿನ ಜರ್ನಿ ಬಗ್ಗೆ ಸದ್ಯದಲ್ಲಿಯೇ ತಿಳಿಸುತ್ತೇನೆ ಎಂದು ಶಿಲ್ಪಾ ಹೇಳಿದ್ದಾರೆ.

Zee Kannada Shilpa Iyer quits jothe jotheyalli daily soap vcs

ಶಿಲ್ಪಾ ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಶೇಷಾದ್ರಿಪುರಂ ಕಾಲೇನ್‌ನಲ್ಲಿ (Seshadripuram College) ಬಿ.ಕಾಂ ಪದವಿ ಪಡೆದು, ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತವನ್ನು ಕಲಿತು, ಶಾಮಕ್ ದಾವರ್ ಅವರ ಬಳಿ ಬಾಲಿವುಡ್ ಡ್ಯಾನ್ಸ್‌ ಅನ್ನು ಕಲಿತಿದ್ದಾರೆ. ಸಿಂಗರ್ ಅಥವಾ ಡ್ಯಾನ್ಸರ್ ಆಗಬೇಕು ಎಂದು ಕನಸು ಕಂಡ ಶಿಲ್ಪಾ ಅವರಿಗೆ ಜೀವದಲ್ಲಿ ದೊಡ್ಡ ತಿರುವು ತಂದುಕೊಟ್ಟಿದ್ದು ಆ್ಯಕ್ಟಿಂಗ್.  ಬಹುಮುಖ ಪ್ರತಿಭೆ (multi talented) ಶಿಲ್ಪಾ ಅವರಿಗೆ ನಿರೂಪಣೆ (Annchoring) ಅಂದ್ರೆ ಮೊದಲಿನಿಂದಲೂ ಆಸಕ್ತಿ. ವಿದ್ಯಾಭ್ಯಾಸ ಮುಗಿಸಿದ ಬಳಿಕ ಪ್ರಜಾ ಟಿವಿಯಲ್ಲಿ ಆ್ಯಂಕರ್ ಆಗಿ ಕಾಲಸ ಮಾಡಿದ್ದಾರೆ. ಪ್ರಜಾ ಟಾಕೀಸ್ ಎನ್ನುವ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತುಂಬಾನೇ ಸ್ಟೇಜ್ ಆ್ಯಂಕರ್‌ ಸೇರಿದಂತೆ ಖಾಸಗಿ ವಾಹಿನಿಗಳಲ್ಲಿಯೂ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. 

ಸಿಂಗರ್ ಕನಸು ಕಂಡು ನ್ಯೂಸ್ ಆ್ಯಂಕರ್ ಆದ 'ಜೊತೆ ಜೊತೆಯಲಿ' ಬ್ರೋ -ಇನ್- ಲಾ ಮಾನ್ಸಿ!

ತೆರೆ ಮೇಲೆ ನೋಡುವ ಮಾನ್ಸಿಗೂ ಮತ್ತು ರಿಯಲ್ ಲೈಫ್‌ನಲ್ಲಿರುವ ಶಿಲ್ಪಾಗೂ ತುಂಬಾನೇ ವ್ಯತ್ಯಾಸವಿದೆಯಂತೆ. ಮಾನ್ಸಿ ಸಖತ್ ಟಿಪ್‌ಟಾಪ್‌ ಆಗಿ ಕಾಣಿಸಿಕೊಳ್ಳುವ ಹುಡುಗಿ. ಆದರೆ ಶಿಲ್ಪಾ ತುಂಬಾನೇ ಸಿಂಪಲ್, ಫ್ರೀ ಟೈಮ್ ಸಿಕ್ಕರೆ ಸಾಕು ತುಂಬಾನೇ ನಿದ್ರೆ ಮಾಡುತ್ತಾರಂತೆ. ಇಷ್ಟೆಲ್ಲಾ ಟ್ಯಾಲೆಂಟ್ ಇರುವ ಶಿಲ್ಪಾ ಅವರಿಗೆ ಸಿನಿಮಾ ಮತ್ತು ಪರಭಾಷೆಯಿಂದ ಆಫರ್‌ಗಳು ಬಂದಿವೆ. ಮೈಲಾಪುರಿ ಸಿನಿಮಾದಲ್ಲಿ ನಟಿಸಿದ್ದಾರೆ. ಕೈ ರುಚಿ ಎಂಬ ಅಡುಗೆ ಕಾರ್ಯಕ್ರವವನ್ನು ನಡೆಸಿಕೊಟ್ಟಿದ್ದಾರೆ. ತಮಿಳು ಮತ್ತು ತೆಲುಗಿನಿಂದಲೂ ಆಫರ್ಸ್‌ ಬರುತ್ತಿವೆ ಎಂದಿದ್ದಾರೆ.

"

Follow Us:
Download App:
  • android
  • ios