'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು' ಈ ಒಂದು ಸಾಂಗ್ ಕೇಳಿದ್ರೆ ಸಾಕು ಜನರ ಕಣ್ಣುಗಳು ಅರಳಲು ಪ್ರಾರಂಭಿಸುತ್ತದೆ. ಕನ್ನಡದ ನಂ. 1 ಸೀರಿಯಲ್ ಎಂದೇ ಖ್ಯಾತಿಯಾದ 'ಜೊತೆ ಜೊತೆಯಲಿ' ಧಾರಾವಾಹಿ ಪ್ರೇಕ್ಷಕರ ಟಾಪ್ ಫೇವರೆಟ್ ಸೀರಿಯಲ್. ತನ್ನ ಗಂಡನ ಒಂದಲ್ಲಾ ಒಂದು ಕಿತಾಪತಿಗಳಿಂದ ಬೇಸತ್ತು ಹೋಗಿರುವ ಮಾನ್ಸಿ ಯಾರಿಗೆ ಗೊತ್ತಿಲ್ಲ ಹೇಳಿ! ಬ್ರದರ್ -ಇನ್ - ಲಾ ಅನ್ನೋ ಡೈಲಾಗ್‌ ಮೂಲಕವೇ  ಫೇಮಸ್ ಆಗಿದ್ದಾರೆ ಈಕೆ.

ಅನು ಸಿರಿಮನೆ ಪ್ರೀತಿ ಒಪ್ಪಿಕೊಂಡ ಆರ್ಯವರ್ಧನ್!

ಯೂ ಟರ್ನ್ ಪಡೆದ ಸಿಂಗರ್ ಬದುಕು:

ಶಿಲ್ಪಾ ಬೆಳೆದಿದ್ದೆಲ್ಲಾ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ. ಪಕ್ಕಾ ಸಿಟಿ ಹುಡುಗಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ. ಕಾಂ ವಿದ್ಯಾಭ್ಯಾಸ ಮುಗಿಸಿದ ಇವರಿಗೆ ಕರ್ನಾಟಕ ಸಂಗೀತವೆಂದರೆ ಅಪಾರ ಒಲವು. ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತವನ್ನು ಕಲಿತ ಇವರು ಶಾಮಕ್ ದಾವರ್ ಅವರ ಬಳಿ ಬಾಲಿವುಡ್ ಡ್ಯಾನ್ಸ್ ಅನ್ನು ಕಲಿತಿದ್ದಾರೆ. ಜೀವನದಲ್ಲಿ ಮುಂದೆ ಒಂದು ದೊಡ್ಡ ಸಿಂಗರ್ ಅಥವಾ ಡ್ಯಾನ್ಸರ್ ಆಗ್ತೀನಿ ಎಂದು ಅಂದುಕೊಂಡಿದ್ದರು. ಆದ್ರೆ ಇವರ ಜೀವನಕ್ಕೆ ಯೂ ಟರ್ನ್ ಕೊಟ್ಟಿದ್ದು ಆ್ಯಕ್ಟಿಂಗ್. 

ನ್ಯೂಸ್ ಆ್ಯಂಕರ್ ಕಮ್ ಆ್ಯಕ್ಟರ್:

ಶಿಲ್ಪಾಗೆ ನಿರೂಪಣೆ ಅಂದ್ರೆ ಮೊದಲಿನಿಂದಲೂ ಆಸಕ್ತಿ . ವಿದ್ಯಾಭ್ಯಾಸ ಮುಗಿದ ಬಳಿಕ ಪ್ರಜಾ ಟಿವಿಯಲ್ಲಿ ಆ್ಯಂಕರ್ ಆಗಿ ಕಾಣಿಸಿಕೊಂಡ ಇವರು 'ಪ್ರಜಾ ಟಾಕೀಸ್' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂತರ ಅಲ್ಲಿಯೇ ನ್ಯೂಸ್ ರೀಡರ್ ಆಗಿ ಕಾಣಿಸಿಕೊಳ್ಳುವ ಅವಕಾಶ ಕೂಡ ಇವರದ್ದಾಗಿತ್ತು. ಇದರ ಜೊತೆಗೆ ಸಾಕಷ್ಟು ಸ್ಟೇಜ್ ಆ್ಯಂಕರಿಂಗ್ ಸೇರಿದಂತೆ ಈಗಲೂ ಖಾಸಗಿ ವಾಹಿನಿಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ಜೊತೆ ಜೊತೆಯಲಿ ಆರ್ಯವರ್ಧನ್ ಫಸ್ಟ್ ಕ್ರಶ್ ಯಾರು?

ಸ್ಟ್ರೇಯ್ಟ್ ಫಾರ್ವರ್ಡ್ ಮಾನ್ಸಿ:

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನೇರಾ ನೇರಾ ಮಾತನಾಡುವ ಮಾನ್ಸಿ, ತಾನು ಯಾವತ್ತೂ ನಟನೆ ಮಾಡುತ್ತೇನೆ ಎಂದು ಅಂದುಕೊಂಡವರಲ್ಲ. ಆಕಸ್ಮಿಕವಾಗಿ 'ಶಾಂತಂ ಪಾಪಂ' ಎಂಬ ಸೀರೀಸ್‍ಗೆ ಅವಕಾಶ ಇವರನ್ನು ಹುಡುಕಿ ಬಂದಿತ್ತು. ಅಲ್ಲಿ ತನ್ನ ಮೊದಲ ನಟನೆಯನ್ನು ಮಾಡಿದ ಶಿಲ್ಪಾ ನಂತರ 'ಬ್ರಹ್ಮಗಂಟು', 'ನಾಗಮಂಡಲ', 'ಮಹಾದೇವಿ'ಯಲ್ಲಿ ಕಾಣಿಸಿಕೊಂಡರು.  ಸದ್ಯ 'ಕಸ್ತೂರಿ ನಿವಾಸ' ಮತ್ತು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರೀಲ್ ಲೈಫ್‍ಗೂ ರಿಯಲ್ ಲೈಫ್‍ಗೂ ಅಜಗಜಾಂತರ ವ್ಯತ್ಯಾಸ:
 
ರೀಲ್ ನಲ್ಲಿ ಕಾಣುವ ಮಾನ್ಸಿಗೂ ರಿಯಲ್ ಲೈಫ್ ನಲ್ಲಿರುವ ಶಿಲ್ಪಾಗೂ ಸಾಕಷ್ಟು ವ್ಯತ್ಯಾಸವಿದೆಯಂತೆ. ಮಾನ್ಸಿ ತುಂಬಾ ಟಿಪ್ ಟಾಪ್ ಆಗಿ ಕಾಣಿಸಿಕೊಂಡರೆ ಶಿಲ್ಪಾ ತುಂಬಾ ಸಿಂಪಲ್ ಹುಡುಗಿ. ಫ್ರೀ ಟೈಮ್‌ನಲ್ಲಿ ಸಿಕ್ಕಾಪಟ್ಟೆ ನಿದ್ದೆ ಮಾಡೋ ಶಿಲ್ಪಾ ನಿದ್ರಾಪ್ರೇಮಿ ಕೂಡಾ ಹೌದು.

'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

ಸಿನಿಮಾದಲ್ಲೂ ಛಾಪು:

ಇಷ್ಟೆಲ್ಲಾ ಟಾಲೆಂಟ್ ಇರುವ ಶಿಲ್ಪಾಗೆ ಸಿನೆಮಾ ಆಫರ್ ಹಾಗೂ ಪರಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿದೆ. ಸದ್ಯ 'ಮೈಲಾಪುರ' ಎಂಬ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಸಿನೆಮಾ ತೆರೆ ಕಾಣಲಿದೆ. ಇಷ್ಟು ಮಾತ್ರವಲ್ಲದೇ 'ಕೈರುಚಿ' ಎಂಬ ಅಡುಗೆ ಕಾರ್ಯಕ್ರಮವನ್ನು ಇವರು ನಡೆಸಿಕೊಡುತ್ತಿದ್ದಾರೆ.  ತಮಿಳು ಮತ್ತು ತೆಲುಗಿನಿಂದಲೂ ಆಫರ್ಸ್‍ಗಳು ಬಂದಿದ್ದು, ಎರಡು ಕನಸು ಸಿನೆಮಾದಲ್ಲಿ ಕಲ್ಪನಾ ನಿರ್ವಹಿಸಿದ ಪಾತ್ರದಂತಹ ರೋಲ್ ಮತ್ತು ಸೈಲೆಂಟ್ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ಈಕೆಯದು.

'ಜೊತೆ ಜೊತೆಯಲಿ' ಝೆಂಡೆಗೆ ಟಾಂಗ್ ಕೊಡುವ ಮೀರಾ ಜೀ ರಿಯಲ್ ಲೈಫ್ ಹೀಗಿದ್ಯಾ!?