ಕಿರುತೆರೆ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಪಾರು’ ಧಾರಾವಾಹಿಗೆ ಟ್ವಿಸ್ಟ್ ಸಿಕ್ಕಿದೆ. 

ಅಂದುಕೊಂಡಂಗಿಲ್ಲ ಹಳ್ಳಿ ಹುಡುಗಿ ಪಾರು; ಈ ಫೋಟೋಗಳನ್ನು ನೋಡಿ

ಗತ್ತು, ಗಮ್ಮತ್ತಿನಿಂದಲೇ ಗಮನ ಸೆಳೆದಿರುವ ಅರಸನ ಕೋಟೆ ಅಖಿಲಾಂಡೇಶ್ವರಿ ಹತ್ಯೆಗೆ ಸಂಚು ರೂಪಿಸಲಾಗಿದೆ. ಅಖಿಲಾಂಡೇಶ್ವರಿ ಮನೆಯ ಹೊರಗೆ ಹುಲ್ಲು ಹಾಸಿನ ಮೇಲೆ ಯೋಗ ಮಾಡುವ ವೇಳೆ ಆಗಂತುಕನೊಬ್ಬ ಅಖಿಲಾಂಡೇಶ್ವರಿ ಮೇಲೆ ಗುಂಡು ಹಾರಿಸಿದ್ದಾನೆ. ಸಾವಿನ ಸುಳಿಯಲ್ಲಿ ಅಖಿಲಾಂಡೇಶ್ವರಿ ಸಿಲುಕಿದ್ದಾರೆ. ಈ ದೃಶ್ಯವನ್ನು ಪಾರು ಬಾಲ್ಕನಿಯಿಂದ ನೋಡಿ ಆತಂಕಗೊಳ್ಳುತ್ತಾಳೆ. ಮುಂದೇನಾಗುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. 

ಅರಸನಕೋಟೆ ಅಖಿಲಾಂಡೇಶ್ವರಿಯಾಗಿ ವಿನಯಾ ಪ್ರಕಾಶ್ ನಟಿಸಿದ್ದಾರೆ. ಅವರ ಗತ್ತು, ಗೈರತ್ತುಗಳಿಂದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನೂ ಪಾರು ಪಾತ್ರದಲ್ಲಿ ಮೋಕ್ಷಿತಾ ಪೈ ನಟಿಸಿದ್ದಾರೆ. ಇಬ್ಬರ ಕಾಂಬಿನೇಶನ್ ಪ್ರೇಕ್ಷಕರ ಗಮನ ಸೆಳೆದಿದೆ.