Asianet Suvarna News Asianet Suvarna News

ಜಯಂತ್ ಬಂಗಾರದ ಪಂಜರದಿಂದ ಹೊರ ಬಂದ ಚಿನ್ನುಮರಿ; ಹಿಂದಿರುಗಿ ಬರ್ತಾಳಾ ಜಾಹ್ನವಿ? 

Lakshmi Nivasa Serial Update: ಮದುವೆಯಾದ ದಿನದಿಂದಲೂ ಜಯಂತ್ ನಿರ್ಮಿಸಿರುವ ಬಂಗಾರದ ಪಂಜರದಲ್ಲಿಯೇ ಇರೋ ಜಾಹ್ನವಿಗೆ ಇದೀಗ ಹೊರ ಬರುವ ಆಸೆ ಆಗ್ತಿದೆ. ಮನೆಯಿಂದ ಹೊರಗಡೆ ಅನುಮತಿ ಕೇಳಿದರೂ ಜಯಂತ್ ಒಪ್ಪಿಗೆ ನೀಡುತ್ತಿಲ್ಲ.

 Zee Kannada Serial Lakshmi Nivasa update Finally Jannavi came outside home mrq
Author
First Published Jun 3, 2024, 12:30 PM IST

ಜೀ ಕನ್ನಡದಲ್ಲಿ ಪ್ರಥಮ ಬಾರಿಗೆ ಧಾರಾವಾಹಿಯೊಂದು (Zee Kannada Serial) ಪ್ರತಿದಿನ ಒಂದು ಗಂಟೆ ಪ್ರಸಾರವಾಗುತ್ತಿದೆ. ಧಾರಾವಾಹಿ ಪ್ರತಿದಿನ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಲಕ್ಷ್ಮಿ ನಿವಾಸ ಧಾರಾವಾಹಿ (Lakshmi Nivasa Serial) ಕಥಾ ಸಂಗಮವಾಗಿದ್ದು, ಎಲ್ಲಾ ಪಾತ್ರಗಳು ತೆರೆಯ ಮೇಲೆ ಅಚ್ಚುಕಟ್ಟಾಗಿ ಮೂಡಿ ಬರುತ್ತಿವೆ. ಅದರಲ್ಲಿಯೂ ಜಯಂತ್ ಮತ್ತು ಜಾಹ್ನವಿ ನಡುವಿನ ಕಥೆ ಪ್ರತಿ ಸಂಚಿಕೆಯೂ ರೋಚಕದಿಂದ ಮೂಡಿ ಬರುತ್ತಿದೆ. ಇಷ್ಟು ಮಾತ್ರವಲ್ಲದೇ ಜಯಂತ್‌ ನಡೆಯ ಬಗ್ಗೆಯೂ ಜಾಹ್ನವಿ (Jayant And Jahnavi) ಕುಟುಂಬಸ್ಥರಲ್ಲಿಯೂ ಸಣ್ಣದಾದ ಅನುಮಾನ ಮೂಡಿದೆ. ಈ ಅನುಮಾನ ಲಕ್ಷ್ಮಿ ಗಂಡನ ಬಳಿ, ಅಜ್ಜಿ ವೆಂಕಿಯ ಬಳಿ ಹೇಳಿಕೊಂಡಿದ್ದಾರೆ. 

ಮದುವೆಯಾದ ದಿನದಿಂದಲೂ ಜಯಂತ್ ನಿರ್ಮಿಸಿರುವ ಬಂಗಾರದ ಪಂಜರದಲ್ಲಿಯೇ ಇರೋ ಜಾಹ್ನವಿಗೆ ಇದೀಗ ಹೊರ ಬರುವ ಆಸೆ ಆಗ್ತಿದೆ. ಮನೆಯಿಂದ ಹೊರಗಡೆ ಅನುಮತಿ ಕೇಳಿದರೂ ಜಯಂತ್ ಒಪ್ಪಿಗೆ ನೀಡುತ್ತಿಲ್ಲ. ಇನ್ನು ಜಯಂತ್ ಮೇನ್ ಡೋರ್‌ಗೆ ನಂಬರ್ ಲಾಕ್ ಮಾಡಿದ್ದು, ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ನೆಟ್‌ವರ್ಕ್ ಬರದಂತೆ ಮಾಡಿರೋದು ಜಾಹ್ನವಿ ಗಮನಕ್ಕೆ ಇನ್ನು ಬಂದಿಲ್ಲ. 

ಈ ಆಂಕರ್‌ಗೆ ಹಣದ ಹುಚ್ಚು, ದುಡಿದ ದುಡ್ಡೆಲ್ಲಾ ಏನ್ ಮಾಡ್ತೀರಿ ಎಂದು ಕೇಳಿದ ಫ್ಯಾನ್ಸ್

ಮನೆಯಿಂದ ಹೊರಬಂದ ಜಾಹ್ನವಿ

ಇಂದಿನ ಪ್ರೋಮೋದಲ್ಲಿ ಜಾಹ್ನವಿ ಮನೆಯಿಂದ ಹೊರ ಬಂದಿರೋ ದೃಶ್ಯವನ್ನು ತೋರಿಸಲಾಗಿದೆ. ಮನೆಯಲ್ಲಿ ತನ್ನ ಚಿನ್ನುಮರಿ ಕಾಣದೇ ಕಂಗಲಾಗಿರುವ ಜಯಂತ್ ಪತ್ನಿ ಮತ್ತೆ ಹಿಂದಿರುಗಿ ಬರ್ತಾಳಾ ಅಥವಾ ಇಲ್ಲವಾ ಅನ್ನೋ ಆತಂಕದಲ್ಲಿದ್ದಾನೆ. ನಿನ್ನ ಚಿನ್ನುಮರಿ ಮನೆಯಿಂದ ಜೂಟ್ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. 

ಜಾಹ್ಮವಿ  ಅಡುಗೆ ಮಾಡಲು ಫ್ರಿಡ್ಜ್ ತೆರೆದಾಗ ತರಕಾರಿ ಇರಲ್ಲ. ಪತಿಗೆ ಹೇಳಿದ್ರೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡೋದಾಗಿ ಹೇಳುತ್ತಾರೆ. ಅದರ ಬದಲಾಗಿ ನಾನೇ ಮಾರುಕಟ್ಟೆಗೆ ಹೋಗಿ ತರಕಾರಿ ತಂದ್ರೆ ಹೇಗೆ ಎಂಬ ಯೋಚನೆ ಜಾಹ್ನವಿಗೆ ಬಂದಿದೆ. ಬಾಗಿಲು ತೆರೆಯಲು ವಾಚ್‌ಮ್ಯಾನ್‌ನ್ನು ಕೂಗಿದ್ರೂ ಆತ ಕೇಳಿಸಿಕೊಳ್ಳಲ್ಲ. ಬೇಜಾರು ಆಗಿ ಮನೆಯಲ್ಲಿ ಅತ್ತಿಂದಿತ್ತ ಸುತ್ತಾಡುತ್ತಿರುವಾಗ ಹಿಂದಿನ ಬಾಗಿಲು ತೆಗೆದಿರೋದನ್ನು ನೋಡಿದ ಜಾಹ್ನವಿ ಜಯಂತ್‌ನ ಬಂಗಾರದ ಪಂಜರದಿಂದ ಹೊರ ಬಂದಿದ್ದಾಳೆ. 

ಅಭಿ ಅಹಂಕಾರಕ್ಕೆ ಕೊನೆಗಾಲ ಬಂದಾಯ್ತು; ಕೆಂಪಾಯ್ತು ಶಾರ್ವರಿ, ದೀಪಿಕಾ ಕಣ್ಣು

ಜಯಂತ್ ಬರೋವಷ್ಟರಲ್ಲಿ ಹೊರ ಬಂದ ಜಾಹ್ನವಿ

ಇತ್ತ ಹೊರಗಡೆ ಪತ್ನಿ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂದು ಮೊಬೈಲ್‌ನಲ್ಲಿ ನೋಡುತ್ತಾನೆ. ಜಾಹ್ನವಿ ಎಲ್ಲಿಯೂ ಕಾಣದಿದ್ದಾಗ ಎಲ್ಲಾ ಭಾಗದ ಸಿಸಿಟವಿ ಫೋಟೇಜ್ ನೋಡುತ್ತಾನೆ. ಕೊನೆಗೆ ಜಾಹ್ನವಿ ಹಿಂದಿನ ಬಾಗಿಲಿನಿಂದ ಹೊರಗೆ ಹೋಗುವುದನ್ನು ಗಮನಿಸಿ ಮನೆಗೆ ಜಯಂತ್ ದೌಡಾಯಿಸಿದ್ದಾನೆ. ಜಯಂತ್ ಬರೋವಷ್ಟರಲ್ಲಿ ಜಾಹ್ನವಿ ಮನೆಯಿಂದ ಹೊರಗೆ ಹೋಗಿದ್ದಾಳೆ.

Latest Videos
Follow Us:
Download App:
  • android
  • ios