ಇದ್ದಕ್ಕಿದ್ದಂತೆ ಮತ್ತೊಂದು ಯುಟ್ಯೂಬ್ ಚಾನೆಲ್ ಆರಂಭಿಸಿದ ವೈಷ್ಣವಿ. ಸಂಭಾವನೆ ಕೇಳಿ ಶಾಕ್ ಆದ ನೆಟ್ಟಿಗರು ಮೊಬೈಲ್ ನಂಬರ್ ಗೆಸ್ ಮಾಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ವೈಷ್ಣವಿ ತಮ್ಮ ಹೊಸ ಯುಟ್ಯೂಬ್ ಚಾನೆಲ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಆರಂಭದಿಂದಲ್ಲೂ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರಾವಹಿಯಲ್ಲಿ ಸೈಲೆಂಟ್ ಪಾತ್ರದ ಮೂಲಕ ಗಮನ ಸೆಳೆದಿರುವ ವೈಷ್ಣವಿ ಬಗ್ಗೆ ಗೂಗಲ್‌ನಲ್ಲಿ ಜನರು ಏನೆಂದು ಹುಡುಕಿದ್ದಾರೆ. ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ..? ಜನರ ಪ್ರಶ್ನೆಗಳಿಗೆ ವೈಷ್ಣವಿ ಉತ್ತರ ಕೊಟ್ಟಿದ್ದಾರೆ.
ವೈಷ್ಣವಿ ಗೌಡ ಎಂಗೇಜ್‌ಮೆಂಟ್?
ಈಗಾಗಲೆ ಸಾಕಷ್ಟು ಮಾತನಾಡಿದ್ದೀನಿ. ಅದೊಂದು ಬ್ಯಾಡ್ ಫೇಸ್ ಅಷ್ಟೆ. ಅದರಿಂದ ಹೊರ ಬಂದು ಮುಂದುವರೆದಿರುವೆ ಸಾಕಷ್ಟು ರೀತಿಯಲ್ಲಿ ಕ್ಲಾರಿಫೈ ಮಾಡಿದ್ದೀನಿ . ಅದರಿಂದ ಮುಂದಕ್ಕೆ ಏನಾಗುತ್ತದೆ ನೋಡಬೇಕು..ನಿಶ್ಚಿತಾರ್ಥ ಆಗಲಿಲ್ಲ ...ಆಗದೇ ಇದ್ದಿದ್ದು ಒಳ್ಳೆಯದಾಯ್ತು.
ವೈಷ್ಣವಿ ಗೌಡ ಇನ್‌ಸ್ಟಾಗ್ರಾಂ
ಬಹುಷ ನನ್ನ ಅಕೌಂಟ್ ಹುಡುಕಿರಬೇಕು. ನನ್ನ ಅಕೌಂಟ್ ನನ್ನ ಹೆಸರಿನಲ್ಲಿದೆ.
ಹೆಸರು-ಹಣ ಮಾಡ್ಬೇಕು ಅಂತ ಡಾನ್ ಆಗೋ ಪ್ಲ್ಯಾನ್?; ಅಸಲಿ ಕನಸು ಬಿಚ್ಚಿಟ್ಟ ಮಂಜು ಮಾಸ್ಟರ್
ಡೇಟ್ ಆಫ್ ಬರ್ತ್
20.2.199......ಅಲ್ಲಿಗೆ ನಿಲ್ಲಿಸಿದ್ದೀನಿ. ಎಷ್ಟು ವರ್ಷ ಅಂತ ಗೊತ್ತಿದ್ದರೆ ಕಾಮೆಂಟ್ ಮಾಡಿ ತಿಳಿಸಿ.
ವೈಷ್ಣವಿ ಗೌಡ ಮದುವೆ
ನನಗೆ ಮದುವೆ ಆಗಿಲ್ಲ. ನಾನು ಸಿಂಗಲ್ ಆಗಿರುವೆ. ಮದುವೆ ಫಿಕ್ಸ್ ಆಗಿದ ತಕ್ಷಣ ತಿಳಿಸುವೆ.
ವೈಷ್ಣವಿ ಗೌಡ ಹೈಟ್
ನನ್ನ ಹೈಟ್ 6' 2''....( ಸುಳ್ಳು ಹೇಳಿ ನಕ್ಕಿದ್ದಾರೆ)
ವೈಷ್ಣವಿ ಗೌಡ ಸಂಬಳ...
ಅಂಬಾರಿ ದುಡಿಯುತ್ತಿರುವುದಕ್ಕಿಂತ ಏನ್ ಒಂದೆರಡು ಲಕ್ಷ ಕಡಿಮೆ ಇರಬಹುದು. ನಾನು ಯಾವತ್ತೂ ದುಡ್ಡಿನ ಬಗ್ಗೆ ಮಾತನಾಡುವುದಿಲ್ಲ ಮಾತನಾಡಲು ಇಷ್ಟವಿಲ್ಲ ಎಂದು ನಕ್ಕಿದ್ದಾರೆ.
ವೈಷ್ಣವಿ ಯುಟ್ಯೂಬ್ ಚಾನೆಲ್..
ನನ್ನ ಹಳೆ ಯುಟ್ಯೂಬ್ ಚಾನೆಲ್‌ನಲ್ಲಿದ್ದ ಹಳೆ ವಿಡಿಯೋಗಳು ಮಿಸ್ ಆಗಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದೀನಿ. ಹಳೆ ಖಾತೆಯನ್ನು ಏಜೆನ್ಸಿ ನೋಡಿಕೊಳ್ಳುತ್ತಿತ್ತು ಅವರು ಹೇಳಿದ ಹಾಗೆ ವಿಡಿಯೋ ಮಾಡಲು ನನಗೆ ಆಗುವುದಿಲ್ಲ ಒತ್ತಾಯ ಅನಿಸುತ್ತದೆ. ಹೀಗಾಗಿ ಅವರಿಂದ ಹೊರ ಬಂದು ನಾನು ಸ್ವಂತ ಚಾನೆಲ್ ಓಪನ್ ಮಾಡಿ ಮತ್ತೊಮ್ಮೆ ಶುರು ಮಾಡಿದೆ.
ಅಬ್ಬಬ್ಬಾ! ಟಗರು ಪುಟ್ಟಿ ಎಷ್ಟು ಚೇಂಜ್ ಆಗಿದ್ದಾರೆ ನೋಡಿ; ನಟಿ ಮಾನ್ವಿತಾ ಹೊಸ ಅವತಾರ ವೈರಲ್!
ಹೊಸ ಸೀರಿಯಲ್?
ಸೀತಾ ರಾಮಾ.
ವೈಷ್ಣವಿ ಗೌಡ ಫೋನ್ ನಂಬರ್
ಖಂಡಿತಾ ಜನರ ಜೊತೆ ಸಂಪರ್ಕದಲ್ಲಿ ಇರುವುದಕ್ಕೆ ಇಷ್ಟ ಪಡುತ್ತೀನಿ. 0 ಯಿಂದ 9 ವರೆಗೂ ಸೇರಿಸಿದರೆ ನನ್ನ ಮೊಬೈಲ್ ನಂಬರ್ ಆಗುತ್ತದೆ ನನಗೆ ಕರೆ ಮಾಡಿ ಮಾತನಾಡುತ್ತೀನಿ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ..

