ಸೀತಾರಾಮ ಸೀರಿಯಲ್ ಚೆನ್ನಾಗಿದೆ, ಬೇಗನೇ ಸೀತಾ-ರಾಮನಿಗೆ ಮದುವೆ ಮಾಡಿಸಿ ಎಂದ ಫ್ಯಾನ್ಸ್!
ಜೀ ಕನ್ನಡ ವಾಹಿನಿಯ ಸೀತಾರಾಮ ಧಾರಾವಾಹಿ ತುಂಬಾ ಚೆನ್ನಾಗಿದೆ. ಎಳೆದು ಬೋರ್ ಮಾಡದೇ, ಸೀತಾ- ರಾಮನನ್ನು ಒಂದುಗೂಡಿಸಿ ಎಂದು ನಿರ್ದೇಶಕರಿಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಬೆಂಗಳೂರು (ಜ.08): ಕನ್ನಡ ಧಾರಾವಾಹಿಗಳಲ್ಲಿ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಗಳಲ್ಲಿ ಒಂದಾದ ಜೀ ಕನ್ನಡ ವಾಹಿನಿಯ ಸೀತಾರಾಮ ಧಾರಾವಾಹಿಯ ಬಗ್ಗೆ ಅಭಿಮಾನಿಗಳು ನಿರ್ದೇಶಕರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಈ ಸೀರಿಯಲ್ ತುಂಬಾ ಚೆನ್ನಾಗಿದೆ. ಅದನ್ನು ಸಿಕ್ಕಾಪಟ್ಟೆ ಎಳೆದು ಬೋರ್ ಮಾಡದೇ, ಸೀತಾ- ರಾಮನನ್ನು ಒಂದುಗೂಡಿಸಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.
ಹೌದು, ಧಾರಾವಾಹಿಗಳು ಮನೆಯಲ್ಲಿರುವ ಮನೆ ಮಮದಿಗೆಲ್ಲಾ ತಮ್ಮ ಜೀವನ ಅಥವಾ ತಮ್ಮ ಮನೆಯವರ ಜೀವನವೇ ಪರದೆ ಮೇಲೆ ನಡೆಯುತ್ತದೆ ಎಂಬಂತೆ ಭಾವಿಸತೊಡಗಿದ್ದಾರೆ. ಧಾರಾವಾಹಿಯ ನಾಯಕ, ನಾಯಕಿ, ವಿಲನ್ ಸೇರಿ ಕೆಲವು ಪಾತ್ರಗಳನ್ನು ನೋಡಿ ಅಭಿಮಾನಿಗಳೇ ಕಣ್ಣೀರು ಹಾಕುವುದು, ಖುಷಿ ಪಡುವುದು ಹಾಗೂ ಅವರನ್ನು ಹೊಡೆಯುವಷ್ಟರ ಮಟ್ಟಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇನ್ನು ಪ್ರೀತಿ-ಪ್ರೇಮದ ಪಾತ್ರಗಳನ್ನು ಹೊಂದಿರುವ ಧಾರಾವಾಹಿಗಳಿಗಂತೂ ಅಭಿಮಾನಿಗಳಿಂದ ಭರಪೂರ ಪ್ರೋತ್ಸಾಹ ಸಿಕ್ಕಿರುತ್ತದೆ.
ಬಿಗ್‌ಬಾಸ್ ಮನೆಗೆ ಒಂದೇ ಸಮುದಾಯದವರಿಗೇ ಹೆಚ್ಚಿನ ಅವಕಾಶವೇಕೆ? ಕಲರ್ಸ್ ಕನ್ನಡ ವಿರುದ್ಧ ಫ್ಯಾನ್ಸ್ ಆಕ್ರೋಶ!
ಅದೇ ರೀತಿ ಝೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುವ ಸೀತಾರಾಮ ಧಾರವಾಹಿಯೂ ಕೂಡ ಒಂದಾಗಿದೆ. ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಹಾಲಿ ಅತಿಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರಾವಾಹಿಗಳಲ್ಲಿ ಒಂದಾಗಿದೆ. ಇಲ್ಲಿ ಸೀತಾ, ರಾಮನ ಪ್ರೀತಿಗೆ ಹೆಚ್ಚಿನ ಅಭಿಮಾನಿಗಳು ಸಪೋರ್ಟ್ ಮಾಡುತ್ತಿದ್ದಾರೆ. ಸ್ವತಃ ಸೀತಾಳ ಮಗಳು ಸಿಹಿ ಕೂಡ ಇವರ ಪ್ರೀತಿಗೆ ಸಹಕಾರ ನೀಡುತ್ತಿದ್ದು, ಇವರಿಬ್ಬರೂ ಮದುವೆ ಮಾಡಿಕೊಳ್ಳಲೆಂದೇ ಹಾರೈಸುತ್ತಿದ್ದಾಳೆ. ಆದರೆ, ಧಾರಾವಾಹಿ ನಿರ್ದೇಶಶಕರು ಒಂದಲ್ಲಾ ಒಂದು ಸನ್ನಿವೇಶವನ್ನು ಸೃಷ್ಟಿಸಿ ಅವರ ಪ್ರೀತಿಯನ್ನು ದೂರ ಮಾಡುತ್ತಿದ್ದಾರೆ. ಆದ್ದರಿಂದ ಸ್ವತಃ ಅಭಿಮಾನಿಗಳೇ ಸೀತಾರಾಮ ಧಾರಾವಾಹಿ ನಿರ್ದೇಶಕರಿಗೆ ಪ್ರೇಮಿಗಳನ್ನು ಒಂದು ಮಾಡುವಂತೆ ಮನವಿ ಮಾಡಿದ್ದಾರೆ.
ಶ್ರೀರಾಮ ದೇಸಾಯಿ ತಾನು ದೊಡ್ಡ ಕಂಪನಿಯ ಮಾಲೀಕನಾಗಿದ್ದರೂ, ಅದನ್ನು ಮುಚ್ಚಿಟ್ಟು ಸಾಮಾನ್ಯ ಕೆಲಸಗಾರಳಾದ ಸೀತಾಳ ಸ್ನೇಹವನ್ನು ಸಂಪಾದಿಸುತ್ತಾನೆ. ಇವರಿಬ್ಬರ ಸ್ನೇಹದ ನಡುವೆಯೂ ರಾಮ, ಸೀತಾಳ ಸೌಂದರ್ಯ ಹಾಗೂ ಗುಣವನ್ನು ಮೆಚ್ಚಿ ಪ್ರೀತಿಸಲು ಆರಂಭಿಸಿದ್ದಾನೆ. ಆದರೆ, ಈಗಾಗಲೇ ಒಂದು ಮಗುವಿನೊಂದಿಗೆ ಜೀವನ ಮಾಡುತ್ತಿರುವ ಸೀತಾ ರಾಮನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೋ ಅಥವಾ ನಿರಾಕರಣೆ ಮಾಡುತ್ತಾಳೋ ಗೊತ್ತಿಲ್ಲ. ಈಗಾಗಲೇ ತಾನು ಕಂಪನಿಯ ಮಾಲೀಕನಾಗಿದ್ದರೂ ಅದನ್ನು ಮುಚ್ಚಿಟ್ಟು ಸುಳ್ಳು ಹೇಳಿರುವ ರಾಮನನ್ನು ಸೀತಾ ಯಾವಾಗ ಕ್ಷಮಿಸುತ್ತಾಳೆ ಎನ್ನುವುದರ ಮೇಲೆ ಇವರಿಬ್ಬರ ಪ್ರೀತಿ ನಿಂತುಕೊಂಡಿದೆ.
ಬರ್ತ್‌ಡೇ ಯಾಕಾದ್ರೂ ಬರುತ್ತೆ ಅನ್ಸುತ್ತೆ, ಪ್ಲೀಸ್ ಹೀಗೆಲ್ಲ ಮಾಡ್ಕೋಬೇಡಿ!
ಅಸಲಿ ಪ್ರೋಮೋ ದೃಶ್ಯಕ್ಕೆ ಬಂದ ಸೀತಾ ರಾಮ: ಜೀ ಕನ್ನಡ ವಾಹಿನಿಯಲ್ಲಿ ಸೀತಾರಾಮ ಧಾರಾವಾಹಿಯ ಜಾಹೀರಾತು ಪ್ರೋಮೋದಲ್ಲಿ ಸೀತಾ ಕೋಪಿಸಿಕೊಂಡು ಹೋಗುತ್ತಿರುವಾಗ ಆಕೆ ಬಹಳ ಘಾಟಿ, ನೀನೇ ಸಮಾಧಾನ ಮಾಡಿ ಆಕೆಯನ್ನು ಒಲಿಸಿಕೊಳ್ಳುವಂತೆ ಪುಟ್ಟ ಕಂದಮ್ಮ ಸಿಹಿ ಶ್ರೀರಾಮನಿಗೆ ಹೇಳುತ್ತಾಳೆ. ಆಗ ಶ್ರೀರಾಮ ಸೀತಾಳ ಹಿಂದೆ ಹೋಗಿ ಆಕೆಯನ್ನು ಒಲಿಸಿಕೊಳ್ಳಲು ಮುಂದಾಗುವ ಚಿತ್ರಣ ತೋರಿಸಲಾಗಿತ್ತು. ಈಗ ಸೀತಾ, ರಾಮನ ನಿಜ ಜೀವನದ ಬಗ್ಗೆ ತಿಳಿದುಕೊಂಡು ಕೋಪಗೊಂಡಿದ್ದಾಳೆ. ಆಕೆಯನ್ನು ಸಮಾಧಾನ ಮಾಡಲು ಸಿಹಿ, ರಾಮನಿಗೆ ಸಪೋರ್ಟ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಧಾರಾವಾಹಿಯ ಮೊದಲ ಪ್ರೋಮೋದ ಅಸಲಿ ವೀಡಿಯೋ ಇನ್ನುಮುಂದೆ ಪ್ರಸಾರವಾಗಲಿದೆ.