ಬಿಗ್‌ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋಗೆ ಒಂದೇ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. 

ಬೆಂಗಳೂರು (ಜ.08): ಬಿಗ್‌ಬಾಸ್‌ಕನ್ನಡ ಸೀಸನ್ 10 ಆರಂಭವಾಗಿ ಇನ್ನು ಮೂರ್ನಾಲ್ಕು ವಾರಗಳಲ್ಲಿ ರಿಯಾಲಿಟಿ ಶೋ ಮುಕ್ತಾಯವಾಗಲಿದೆ. ಆದರೆ, ಪ್ರತಿ ಬಾರಿ ಬಿಗ್‌ಬಾಸ್‌ ಮನೆಗೆ ಒಂದು ಸಮುದಾಯಕ್ಕೆ ಸೇರಿದವರನ್ನೇ ಹೆಚ್ಚಾಗಿ ಯಾಕೆ ಕರೆಸಿಕೊಳ್ಳುತ್ತೀರಿ. ಮನರಂಜನೆಯಲ್ಲಿಯೂ ಜಾತೀಯತೆ ಇದೆಯೇ ಎಂಬ ಅರ್ಥದಲ್ಲಿ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಬಿಗ್‌ಬಾಸ್‌ ಎಂದರೆ ಸೆಲೆಬ್ರಿಟಿಗಳಿಗಾಗಿ ಇರುವ ರಿಯಾಲಿಟಿ ಶೋ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದ್ದರೂ ಅವರು ಯಶಸ್ವಿ ಆಗಿರುವುದು ತುಂಬಾ ಕಡಿಮೆ ಪ್ರಮಾಣದಲ್ಲಿವೆ. ಇನ್ನು ಪ್ರಸ್ತುತ ನಡೆಯುತ್ತಿರುವ ರಿಯಾಲಿಟಿ ಶೋನಲ್ಲಿ ಒಂದು ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಗ್‌ಬಾಸ್‌ ಮನೆಗೆ ಆ ಗೌಡ, ಈ ಗೌಡ, ಅಲ್ಲಿಗೌಡ, ಇಲ್ಲಿಗೌಡ ಅಂತಾ ಗೌಡರಿಗೆ ಮಾತ್ರ ತೆಗೆದುಕೊಂಡರೆ ನಾವೆಲ್ಲಿಗೆ ಹೋಗಬೇಕ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಿನಯ್‌ ಜೊತೆ ಸೇರಿದವರಿಗೆಲ್ಲಾ ಗೇಟ್‌ಪಾಸ್‌..' ಆನೆಗೆ ಮಾತಿನ ಡಿಚ್ಚಿ ಹೊಡೆದ ಡ್ರೋನ್‌ ಪ್ರತಾಪ್‌!

ಕಂಬಾರ, ಕುಂಬಾರ, ಬಡಿಗೇರ, ಪತ್ತಾರು, ಐಗೋಳು, ಸ್ವಾಮ್ಗೋಳು, ಈಳಿಗರು, ಮಠಪತಿಯವರು ಎಲ್ಲಿಗೆ ಹೋಗಬೇಕ್ರಿ. ನಮ್ಮಲ್ಲಿ ಉತ್ತರ ಕರ್ನಾಟಕದಲ್ಲಿಯೂ ಮಿಲಿಯನ್‌ ಹೋದವರು ಬಹಳ ಜನ ಇದ್ದಾರೆ. ಇದ್ಯಾಕ ಅನ್ಯಾಯ ಮಾಡ್ತೀರಿ ಎಂದು ಅಭಿಮಾನಿ ವಿನೀತ ಧಾರವಾಡ ಎನ್ನುವವರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇವರ ವಿಡಿಯೋಗೆ 31 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ಆದರೆ, ಈ ವಿಡಿಯೋ ಅಕ್ಟೋಬರ್ ತಿಂಗಳದ್ದಾಗಿದ್ದು, ಬಿಗ್‌ಬಾಸ್‌ ಮುಗಿಯುತ್ತಿರುವ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿಗಳು (Bigg Boss Season 10 Contestants)

  1. ನಮ್ರತಾ ಗೌಡ 
  2. ಸ್ನೇಹಿತ್‌ 
  3. ರ್‍ಯಾಪರ್‌ ಇಶಾನಿ 
  4. ವಿನಯ್‌ ಗೌಡ 
  5. ಸಂತೋಷ್‌ ಕುಮಾರ್‌ (ತುಕಾಲಿ ಸಂತೋಷ್‌) 
  6. ನೀತು ವನಜಾಕ್ಷಿ 
  7. ಸಿರಿ 
  8. ಸ್ನೇಕ್‌ ಶ್ಯಾಮ್‌
  9. ಭಾಗ್ಯಶ್ರೀ
  10. ಗೌರೀಶ್ ಅಕ್ಕಿ
  11. ಮೈಕೆಲ್ ಅಜಯ್
  12. ಡ್ರೋನ್ ಪ್ರತಾಪ್
  13. ತನಿಶಾ ಕುಪ್ಪಂಡ
  14. ರಕ್ಷಕ್ ಬುಲೆಟ್
  15. ಸಂಗೀತಾ ಶೃಂಗೇರಿ
  16. ವರ್ತೂರು ಸಂತೋಷ್
  17. ಕಾರ್ತಿಕ್ ಮಹೇಶ್
  18. ಪವಿ ಪೂವಪ್ಪ (ವೈಲ್ಡ್ ಕಾರ್ಡ್‌ ಎಂಟ್ರಿ) 
  19. ಅವಿನಾಶ್‌ ಶೆಟ್ಟಿ (ವೈಲ್ಡ್ ಕಾರ್ಡ್‌ ಎಂಟ್ರಿ) 
View post on Instagram

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋ ಈಗಾಗಲೇ 13 ವಾರಗಳತ್ತ ಸಾಗುತ್ತಿದೆ. ಆದರೆ, ಇನ್ನು ಮೂರ್ನಾಲ್ಕು ವಾರಗಳಲ್ಲಿ ಬಿಗ್‌ಬಾಸ್‌ ರಿಯಾಲಿಟಿ ಶೋ ಮುಕ್ತಾಯವಾಗಲಿದೆ. ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆಯಾಗಿದೆ. ವಿನಯ್‌ಗೌಡ, ನಮ್ರತಾಗೌಡ, ಕಾರ್ತಿಕ್ ಮಹೇಶ್, ಡ್ರೋನ್‌ ಪ್ರತಾಪ್, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಶೃಂಗೇರಿ ಇದ್ದಾರೆ, ಮುಂದಿನ ವಾರ ಡಬಲ್‌ ಎಲಿಮಿನೇಷನ್ ಆಗಲಿದ್ದು, ಇನ್ನು 6 ಜನ ಉಳಿಯಲಿದ್ದಾರೆ. ಫೈನಲ್‌ ವೇಳೆಗೆ ಇನ್ನೊಬ್ಬರನ್ನು ಎಲಿಮಿನೇಟ್ ಮಾಡಿ 5 ಜನರನ್ನು ಉಳಿಸಿಕೊಳ್ಳಲಿದ್ದಾರೆ.

ಹೆಣ್ಣುಮಕ್ಕಳ ಬಗ್ಗೆ ಕೇವಲವಾಗಿ ಮಾತಾಡಿದ್ರೆ ಕೆರಳಿ ಕೆಂಡವಾಗೋ ಸುದೀಪ್‌, ಕಿಚ್ಚನಿಗೆ ಹೆಚ್ಚಾಗ್ತಿದ್ದಾರೆ ಮಹಿಳಾ ಫ್ಯಾನ್ಸ್‌

ಬಿಗ್‌ಬಾಸ್‌ ಸೀಸನ್ 10 ರಿಯಾಲಿಟಿ ಶೋಗೆ ಈ ಹಿಂದಿನ ಎಲ್ಲ ಶೋ ಗಳಿಗಿಂತಲೂ ಹೆಚ್ಚಿನ ಟಿಆರ್‌ಪಿ ಲಭ್ಯವಾಗಿದೆ. ಇನ್ನು ಕಂಟೆಸ್ಟೆಂಟ್‌ಗಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಳ್ಳದೇ ಪರಸ್ಪರ ಕಾಲೆಳೆದುಕೊಂಡೇ ತಮ್ಮ ಬಿಗ್‌ಬಾಸ್‌ ಅಭಿಯಾನವನ್ನು ಮುಗಿಸುತ್ತಾ ಬಂದಿದ್ದಾರೆ. ಪರಸ್ಪರ ಕೆಸರೆರಚಾಟದಿಂದಲೇ ಆಟವಾಡುತ್ತಿದ್ದು, ಆರೋಪಗಳ ಸುರಿಮಳೆಯೇ ಆಗುತ್ತಿದೆ. ಜೊತೆಗೆ, ಹಲವರು ವೈಯಕ್ತಿಕ ನಿಂದನೆಯನ್ನೂ ಮಾಡುತ್ತಿದ್ದು, ಅಭಿಮಾನಿಗಳು ಜಗಳವನ್ನು ನೋಡುವುದಕ್ಕಾಗಿಯೇ ಬಿಗ್‌ಬಾಸ್‌ ನೋಡುವಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.