ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿ 100 ದಿನಗಳ ಸಂಚಿಕೆ ಪೂರೈಸಿದೆ. ಕೊರೋನಾ ಲಾಕ್‌ಡೌನ್‌ ಸಮಯದಲ್ಲೂ ಇಡಿ ತಂಡ ಸಂಭ್ರಮಿಸಲು ಒಂದು ಸಿಹಿ ವಿಚಾರ ಸಿಕ್ಕಿದೆ.  'ಹರಸಿ ಆರತಿ ಮಾಡ್ರಿ ಹೊಡ್ದವಳೇ 100 ಸತ್ಯ' ಎಂದು ನಿರ್ದೇಶಕ ಸ್ವಪ್ನ ಕೃಷ್ಣ ಬರೆದುಕೊಂಡಿದ್ದಾರೆ.

ಗೌತಮಿ ಜಾಧವ್ ತೆರೆದಿಟ್ಟ 'ಸತ್ಯ' ಸಮಾಚಾರ 

ಡಿಫರೆಂಟ್ ಆಗಿರುವ ಪೋಸ್ಟರ್ ರಿವೀಲ್ ಮಾಡುವ ಮೂಲಕ ಇಡೀ ತಂಡ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದೆ.  ಸತ್ಯ ಧಾರಾವಾಹಿ ವಿಭಿನ್ನ ಕಥೆವುಳ್ಳ ಧಾರಾವಾಹಿ. ಹುಡುಗನಂತೆ ಬೆಳೆದಿರುವ ಹುಡುಗಿ, ಹುಡುಗಿಯರಷ್ಟೇ ಸೂಕ್ಷ್ಮವಾಗಿ ಬೆಳೆದಿರುವ ಸಿರಿವಂತ ಹುಡುಗ. ಮಿಡಲ್‌ ಕ್ಲಾಸ್-ಹೈ ಕ್ಲಾಸ್‌ ಜನರ ನಡುವೆ ಪ್ರೀತಿ, ಆದರೆ ಎಷ್ಟೆಲ್ಲಾ  ಹೊಂದಾಣಿಕೆಗಳನ್ನು ಎದುರಿಸಬೇಕು ಎಂಬುದನ್ನು ಈ ಧಾರಾವಾಹಿಯಲ್ಲಿ ನೋಡಬಹುದು.

ನಿಜ ಜೀವನದ 'ಸತ್ಯ' ರೊಂದಿಗೆ ಮಾತನಾಡಿದ ಸತ್ಯ! 

ಇನ್ನು ಹೂ ಮಳೆ ಹಾಗೂ ಸರಸು ಧಾರಾವಾಹಿಯಲ್ಲಿ ಮಿಂಚುತ್ತಿರುವ ಸುಜಾತಾ ಅಕ್ಷಯ 'ಚಿಂದಂಗಿ ಬಾಯ್' ಪಾತ್ರದ ಮೂಲಕ ಸತ್ಯ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಲವು ಸಂಚಿಕೆಗಳ ಚಿತ್ರೀಕರಣದಲ್ಲಿ ಸುಜಾತ ಭಾಗಿಯಾಗಿದ್ದರು. ಕಿರುತೆರೆಯಲ್ಲಿ ವಿಲನ್ ಪಾತ್ರಗಳ ಮೂಲಕ ಹೆಚ್ಚಾಗಿ ಗುರುತಿಸಿಕೊಂಡಿರುವ ಸುಜಾತಾ ಸೋಷಿಯಲ್ ಮೀಡಿಯಾದಲ್ಲೂ ತುಂಬಾನೇ ಫೇಮಸ್‌. ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳುವ ಕಾರಣ ಗೃಹಿಣಿಯರು ಅವರ ಸೀರೆ ಹಾಗೂ ಆಭರಣ ಸೆಲೆಕ್ಷನ್ ಬಗ್ಗೆ ಮಾಡುವ ವಿಡಿಯೋಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ.