ಸಪ್ನಾ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸತ್ಯ ಧಾರಾವಾಹಿ ದಿನೆ ದಿನೇ ಸಖತ್ ಮನೋರಂಜನೆ ನೀಡುತ್ತಿದೆ. ರೌಡಿ ಹುಡುಗಿ, ಅಮೂಲ್ ಬೇಬಿ ಹುಡುಗ ಸಿರಿವಂತ ಕುಟುಂಬಕ್ಕೆ ಸೊಸೆ ಹುಡುಕಾಟ....ಸ್ಟೋರಿ ಇಂಟ್ರೆಸ್ಟಿಂಗ್ ಮಾಡಲು ಆಗಾಗ ಸ್ಪೆಷಲ್ ಪಾತ್ರಧಾರಿಗಳ ಪರಿಚಯ. ಇತ್ತೀಚಿನ ಎಪಿಸೋಡ್‌ನಲ್ಲಿ ಕಾಣಿಸಿಕೊಂಡ ಈ ಇಬ್ಬರು ವ್ಯಕ್ತಿಗಳ ಬಗ್ಗೆ ಸಾಗರ್ ಬರೆದಿರುವ ಸಾಲುಗಳಿವು...

ಸೀರೆಯಲ್ಲಿ ರೌಡಿ 'ಸತ್ಯ', ಫ್ಯಾನ್ಸ್ ಫಿದಾ; ಹೇಗಿದೆ ಬದಲಾವಣೆ? 

ಕಷ್ಟ ಅಂದ್ರೆ ಸಾಕು ಅಲ್ಲಿ ಸತ್ಯ ಇರ್ತಾಳೆ. ಅಲ್ಲಿ ಸತ್ಯ ಇದ್ಮೇಲೆ ಕಾರ್ತಿಕ್ ಇರಲೇಬೇಕು. ಸತ್ಯ ಮಾಡುವ ಎಲ್ಲಾ ಒಳ್ಳೆ ಕೆಲಸಗಳಿಗೆ ಕಾರ್ತಿಕ್‌ನನ್ನು ಅಚಾನಕ್ಕಾಗಿ ಆದರೂ ಎಳೆದುಕೊಳ್ಳುತ್ತಾಳೆ. ತಮ್ಮ ಏರಿಯಾದಲ್ಲಿ ಪೋಸ್ಟರ್ ಕೆಲಸ ಮಾಡುತ್ತಿದ್ದ ಹಿರಿಯ ವ್ಯಕ್ತಿ ಬಿದ್ದು ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಸತ್ಯ ಕಾರ್ತಿಕ್‌ನನ್ನು ಎಳೆದುಕೊಂಡು ರಾತ್ರಿ ಇಡೀ ಪೋಸ್ಟರ್ ಅಂಟಿಸಿ ಅವರಿಗೆ 500 ರೂ. ದುಡಿಮೆ ಮಾಡಿ ಕೊಡುತ್ತಾಳೆ.  ಈ ಹಿರಿಯ ವ್ಯಕ್ತಿ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ ನಟಿಸಿದ್ದಾರೆ. 

'ಹಿರಿಯ ಕಲಾವಿದರ ಜೊತೆ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಸಪ್ನಾ ಮೇಡಂ, ಕೃಷ್ಣ ಸರ್, ದೇವರಾಜ್‌ ಸುಬ್ಬಣ್ಣ ಹಾಗೂ ಜೀ ಕನ್ನಡ ವಾಹಿನಿಗೆ ನನ್ನ ಧನ್ಯವಾದಗಳು. ಇದು ಒಂದು ದಿನದ ಸಂಚಿಕೆ ಆಗಿರಬಹುದು. ಆದರೆ ಅವರ ಜೊತೆ ಕೆಲಸ ಮಾಡಿ ಕಲಿತದ್ದು ಸುಮಾರಿದೆ,' ಎಂದು ಸಾಗರ್ ಬರೆದುಕೊಂಡಿದ್ದಾರೆ.