Asianet Suvarna News Asianet Suvarna News

70 ಆದರೂ ಯಂಗ್ ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡ ಗಿರಿಜಾ ಲೋಕೇಶ್‌ಗೆ ವೀಕ್ಷಕರು ಫಿದಾ!

ಮಾಡ್ರನ್ ಗಿರಿಜಾ ಲೋಕೇಶ್ ಲುಕ್‌ನಲ್ಲಿ ವೀಕ್ಷಕರು ಫಿದಾ. ಗಗನ ಮುಟ್ಟುತ್ತಿದೆ 'ಸತ್ಯ' ಟಿಆರ್‌ಪಿ...
 

Zee Kannada Sathya Girija Lokesh takes tomboy look goes viral vcs
Author
Bangalore, First Published Sep 21, 2021, 3:32 PM IST
  • Facebook
  • Twitter
  • Whatsapp

ಜೀ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನ ಮಾಡುತ್ತಿರುವ 'ಸತ್ಯ' ಧಾರಾವಾಹಿ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. ಸತ್ಯ ಪ್ರೀತಿ ಅಮೂಲ್ ಬೇಬಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಹೊಸ ಪಾತ್ರಧಾರಿ ರಾಹುಲ್ ಪ್ರೀತಿ ಅಂದರೆ ಏನೆಂದು ಅರ್ಥ ಮಾಡಿಸುತ್ತಿದ್ದಾನೆ....

ರಾಹುಲ್ ಮತ್ತು ಸತ್ಯ ಇಬ್ಬರೂ ಒಟ್ಟಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಸತ್ಯ ತಾಯಿ ಹಾಗೂ ಅಜ್ಜಿ ಗಿರಿಜಮ್ಮರನ್ನು ಭೇಟಿ ಮಾಡುತ್ತಾನೆ. ರಾಹುಲ್‌ಗೆ ಸತ್ಯ ಅಂದ್ರೆ ತುಂಬಾ ಇಷ್ಟ, ಹೀಗಾಗಿ ಯಾರೇ ಸಿಕ್ಕರೂ ಸತ್ಯ ತನ್ನ ಪ್ರೇಯಸಿ ಎಂದು ಪರಿಚಯ ಮಾಡಿಕೊಡುತ್ತಾರೆ. ಗಿರಿಜಮ್ಮ ರಾಹುಲ್ ಮಾತಿನ ಶೈಲಿಗೆ ಫಿದಾ ಆಗಿದ್ದಾರೆ. ಸತ್ಯ ನೋಡಲು ಸೇಮ್ ಗಿರಜಮ್ಮನ ರೀತಿ ಇದ್ದಾರೆ, ಎಂದು ರಾಹುಲ್  ಹೊಗಳಿದ ತಕ್ಷಣ ಗಿರಿಜಮ್ಮ ಸತ್ಯಳ ಟಾಮ್‌ ಬಾಯ್‌ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

'ಓದು ಓದು ಅಂತ ಒತ್ತಡ': ಸತ್ಯ ಸೀರಿಯಲ್‌ನ ಹ್ಯಾಂಡ್ಸಂ ಸಾಗರ್ ಬಿಳಿ ಗೌಡ ನಟನಾಗಿದ್ದು ಹೇಗೆ ?

ಜೀನ್ಸ್‌ ಪ್ಯಾಂಟ್, ಟೀ ಶರ್ಟ್ ಮೇಲೆ ಶರ್ಟ್‌. ಅದಕ್ಕೂಂದು ಬಾಯ್ ಕಟ್‌ನಲ್ಲಿ ಗಿರಿಜಮ್ಮ ಕಾಣಿಸಿಕೊಂಡಿದ್ದಾರೆ. 70 ಆದರೂ ಎಲ್ಲ ಪಾತ್ರಕ್ಕೂ ಸೈ ಎನ್ನುವ ಗಿರಿಜಾ ಲೋಕೇಶ್ ಅವರು ನಿಜವಾದ ಕಲಾವಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸ್ವಪ್ನ ಕೃಷ್ಣ ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಸತ್ಯ ಧಾರಾವಾಹಿಯಲ್ಲಿ ಮಾತ್ರವಲ್ಲದೇ ಪುತ್ರ ಸೃಜನ್ ಲೋಕೇಶ್ ಯುಟ್ಯೂಬ್‌ ಚಾನೆಲ್‌ನಲ್ಲಿಯೂ ಗಿರಿಜಾ ಲೋಕೇಶ್ ನಟಿಸುತ್ತಿದ್ದಾರೆ. ಡಿಫರೆಂಟ್ ಅಡುಗೆ ರೆಸಿಪಿ, ಮೊಮ್ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂದೆಲ್ಲಾ ಸಣ್ಣ ಪುಟ್ಟ ಟಿಪ್ಸ್ ನೀಡುತ್ತಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios