ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸುಪ್ರಸಿದ್ಧ ಸಂಗೀತ ರಿಯಾಲಿಟಿ ಶೋ ಸರಿಗಮಪ ಸೀಸನ್‌ 17ರ ಗ್ರ್ಯಾಂಡ್‌ ಫಿನಾಲೆ ಡಿಸೆಂಬರ್ 20ಕ್ಕೆ ಮುಗಿದಿದೆ. ಫಿನಾಲೆ ಹಂತ ತಲುಪಿದ ಐವರು ಸ್ಪರ್ಧಿಗಳು, ವಿಜೇತರು ಮೂವರು. ಯಾರಿಗೆ ಯಾವ ಸ್ಥಾನ ಇಲ್ಲಿದೆ ನೋಡಿ...

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಆರ್ಯವರ್ಧನ್? 

ಜೀವನ ಚೈತ್ರಾ ಚಿತ್ರದ 'ನಾದಮಯ' ಹಾಗೂ 'ನಟನವಿ ಶಾರದೆ ನಟಶೇಖರ' ಹಾಡನ್ನು ಹಾಡಿ ಶ್ರೀನಿಧಿ ಶಾಸ್ತ್ರಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀನಿಧಿಗೆ ಟ್ರೋಫಿ ಜೊತೆಗೆ 10 ಲಕ್ಷ ರೂ ಬಹುಮಾನ ನೀಡಲಾಗಿದೆ. ಅಶ್ವಿನ್ ಶರ್ಮಾ ಎರನಡೇ ಸ್ಥಾನ ಪಡೆದು, 5 ಲಕ್ಷ ರೂ ಪಡೆದರು ಹಾಗೂ ಕಂಬದ ರಂಗಯ್ಯ ಮೂರನೇ ಸ್ಥಾನ ಪಡೆದು 2 ಲಕ್ಷ ರೂ. ಗೆದ್ದಿದ್ದಾರೆ.

"

ಶಾರದಿ ಪಾಟೀಲ್, ಅಶ್ವಿನ್ ಶರ್ಮಾ, ಕಿರಣ್ ಪಾಟೀಲ್, ಶ್ರೀನಿಧಿ ಶಾಸ್ತ್ರಿ ಹಾಗೂ ಕಂಬದ ರಂಗಯ್ಯ  ಫಿನಾಲೆ ತಲುಪಿದ್ದರು. ಫಿನಾಲೆ ಕಾರ್ಯಕ್ರಮದಲ್ಲಿ ರತ್ನಮ್ಮ ಹಾಗೂ ಮಂಜಮ್ಮ ಅವರ ವಿಶೇಷ ಕಾರ್ಯಕ್ರಮಿತ್ತು. ದಿವಂಗತ ಗಾಯಕ ಎಸ್‌ಪಿಬಿಯನ್ನು ನೆನೆದು ಕಾರ್ಯಕ್ರಮ ಆಂಭಿಸಲಾಗಿತ್ತು.

ಮನೆಯಲ್ಲಿ ಹಣ ಕದ್ದು ಶಾಪಿಂಗ್ ಮಾಡಿದ ಪ್ರಿಯಾಂಕ; ಇದೇ 'ಸತ್ಯ' ಕತೆ! 

ಪ್ರತಿ ಸೀಸನ್‌ 3 ತಿಂಗಳೊಳಗೆ ಮುಕ್ತಾಯವಾಗುತ್ತದೆ. ಆದರೆ ಈ ಬಾರಿ ಲಾಕ್‌ಡೌನ್‌ ಇದ್ದ ಕಾರಣ ಅತಿ ಹೆಚ್ಚು ಅವಧಿ ತೆಗೆದುಕೊಂಡ ರಿಯಾಲಿಟಿ ಶೋ ಸೀಸನ್‌ ಇದಾಯಿತು.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)