ಚಿನ್ನದಂಥ ಮಡದಿಗೆ ಚಿನ್ನದುಂಗುರ ಉಡುಗೊರೆ; 'Jodi No 1'ನಲ್ಲಿ ಗಣೇಶ್-ವಿದ್ಯಾ ರೊಮ್ಯಾಂಟಿಕ್ ಟಾಕ್!
ನಿರೂಪಣೆ ಮಾಡುತ್ತಿರುವ ನೆನಪಿರಲಿ ಪ್ರೇಮ್, ಜಡ್ಜ್ ಆಗಿರುವ ಮಾಳವಿಕಾ ಮೊದಲಾದವರು ಗಣೇಶ್-ವಿದ್ಯಾ ಜೋಡಿಯ ಮಾತುಕತೆಗೆ ಕಿವಿಯಾದರು, ಸಾಕ್ಷಿಯಾದರು ಮತ್ತು ಕೆಲವೊಮ್ಮೆ ನಗುವಿನ ಅಲೆಯಲ್ಲಿ ತೇಲಿಹೋದರು. ಈ ಜೋಡಿಯ ಮಾತುಕತೆ ವೀಕ್ಷಕರಿಗೆ ಖಂಡಿತ ಕಚಗುಳಿ ನೀಡಲಿದೆ ಎನ್ನಬಹುದು.

ಜೀ ಕನ್ನಡದಲ್ಲಿ ಮೂಡಿಬರುತ್ತಿರುವ 'ಜೋಡಿ ನಂ.1' ರಿಯಾಲಿಟಿ ಶೋನಲ್ಲಿ ಗಣೇಶ್ ಕಾರಂತ್ ತಮ್ಮ ಮಡದಿಗೆ ಎಂಥಾ ಒಳ್ಳೇ ಗಿಫ್ಟ್ ಕೊಟ್ರು ಗೊತ್ತಾ? ಗಣೇಶ್ ಕಾರಂತ್ ತಮ್ಮ ಮಡದಿಗೆ ಚಿನ್ನದುಂಗರ ಕಾಣಿಕೆ ನೀಡಿದ್ದಾರೆ. ಆದರೆ ಅದಕ್ಕೂ ಮೊದಲು, ಗಣೇಶ್‌ಗೆ ಮಡದಿ ಏನು ಗಿಫ್ಟ್ ಕೊಟ್ರು ಗೊತ್ತಾ? ಇಂದು ಸಂಜೆ 6.00ಕ್ಕೆ ಮೂಡಿಬರುತ್ತಿರುವ ಜೀ ಕನ್ನಡದ 'ಜೋಡಿ ನಂ.1' ಶೋದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಅಬ್ಬಬ್ಬಾ, ಆ ಗಿಫ್ಟ್ ನೋಡಿದರೆ ನೀವು ಕಣ್ಣು ಬಾಯಿ ಬಿಡ್ತೀರಾ..
ಗಣೇಶ್ ಕಾರಂತ್ ಹಾಗೂ ಮಡದಿ ವಿದ್ಯಾ ಗಣೇಶ್ ಇಬ್ಬರೂ ಜೀ ಕನ್ನಡದ 'ಜೋಡಿ ನಂ.1' ರಿಯಾಲಿಟಿ ಶೋ ಅತಿಥಿಗಳಾಗಿ ಭಾಗಿಯಾಗಿದ್ದರು. ಅಲ್ಲಿ ಅವರಿಬ್ಬರಿಗೆ ಅರೇಂಜ್ ಮಾಡಿದ್ದ ರೊಮ್ಯಾಂಟಿಕ್ ಸೆಟ್‌ಅಪ್, ಅವರಿಬ್ಬರ ಮುಗುಳ್ನಗು, ಹರಟೆ ಅಲ್ಲಿದ್ದವರ ಮುಖದಲ್ಲಿ ಮಂದಹಾಸ, ನಗು ಮೂಡಲು ಕಾರಣವಾಯ್ತು. ವಿದ್ಯಾ ಗಣೇಶ್ ತಮ್ಮ ಮೊದಲ ಭೇಟಿ, ಕಾಂಟಾಕ್ಟ್ ನೆನಪು ಮಾಡಿಕೊಟ್ಟರೆ ಅದರ ನೆನಪಿಲ್ಲದ ಗಣೇಶ್, ಮುಂದೆ ನೆನಪಿಟ್ಟುಕೊಳ್ಳುವುದಾಗಿ ಭರವಸೆ ಕೊಟ್ಟರು. ವಿದ್ಯಾ ಖುಷಿಯಾದರು.
ಗಂಡಿನ ಸಹವಾಸವಿಲ್ಲದೇ ಈ ಹಾವು ಮರಿ ಮಾಡುತ್ತಂತೆ! ಹಾವಿನ ಜಗತ್ತಿನ ಇಂಟರೆಸ್ಟಿಂಗ್ ಕಹಾನಿ
ನಿರೂಪಣೆ ಮಾಡುತ್ತಿರುವ ನೆನಪಿರಲಿ ಪ್ರೇಮ್, ಜಡ್ಜ್ ಆಗಿರುವ ಮಾಳವಿಕಾ ಮೊದಲಾದವರು ಗಣೇಶ್-ವಿದ್ಯಾ ಜೋಡಿಯ ಮಾತುಕತೆಗೆ ಕಿವಿಯಾದರು, ಸಾಕ್ಷಿಯಾದರು ಮತ್ತು ಕೆಲವೊಮ್ಮೆ ನಗುವಿನ ಅಲೆಯಲ್ಲಿ ತೇಲಿಹೋದರು. ಈ ಜೋಡಿಯ ಮಾತುಕತೆ ವೀಕ್ಷಕರಿಗೆ ಖಂಡಿತ ಕಚಗುಳಿ ನೀಡಲಿದೆ ಎನ್ನಬಹುದು. ಹೆಚ್ಚಿನ ವೀಕ್ಷಕರಿಗೆ ತಿಳಿದಿರುವಂತೆ, ಗಣೇಶ್ ಕಾರಂತ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಿನಿಮಾ ಹಿನ್ನೆಲೆ ಗಾಯಕ, ಜತೆಗೆ ಕಾಮಿಡಿ ವಿಡಿಯೋಗಳನ್ನು ಮಾಡುವುದರಲ್ಲಿ ಫೇಮಸ್. ಇವುಗಳ ಜತೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕ್ರಿಕೆಟ್, ಸಿನಿಮಾ ರಿವ್ಯೂ ಕೂಡಾ ಮಾಡ್ತಾರೆ.
ಗೀತಾ ಸೀರಿಯಲ್ ಮುಗಿತಿದೆ, ಇಲ್ಲ.. ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ ನೋಡಿ..!
ಅಂದಹಾಗೆ, ಜೀ ಕನ್ನಡದಲ್ಲಿ ಈ ಜೋಡಿ ನಂ.1 ರಿಯಾಲಿಟಿ ಶೋ ಇಂದು ಸಂಜೆ 6.00ಕ್ಕೆ ಮೂಡಿ ಬರಲಿದೆ. 'ಚಿನ್ನದಂಥ ಮಡದಿಗೆ ಚಿನ್ನದುಂಗುರದ ಉಡುಗೊರೆ ಕೊಟ್ಟ ಗಣೇಶ್!' ಜೋಡಿ ನಂ.1 'ಒಲವಿನ ಉಡುಗೊರೆ'. ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ Zee5..