ಗಂಡಿನ ಸಹವಾಸವಿಲ್ಲದೇ ಈ ಹಾವು ಮರಿ ಮಾಡುತ್ತಂತೆ! ಹಾವಿನ ಜಗತ್ತಿನ ಇಂಟರೆಸ್ಟಿಂಗ್ ಕಹಾನಿ

ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. 

snake shyam says about snake world secrets at bigg boss kannada season 10 srb

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ನಡೆಯುತ್ತಿರುವುದು ಗೊತ್ತಿದೆ. ಇದೀಗ 7ನೇ ದಿನಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಸಂಚಿಕೆ, ವೀಕ್ಷಕರಿಗೆ ಸಖತ್ ಮಜಾ ಜತೆಗೆ ಹಲವು ತರದ ಮಾಹಿತಿ-ಜ್ಞಾನವನ್ನು ಕೂಡ ಕೊಡುತ್ತಿದೆ ಎನ್ನಬಹುದು. ಅದಕ್ಕೆ ತಾಜಾ ಉದಾಹರಣೆ ಅಲ್ಲಿ ಕೇಳಿ ಬಂದ ಸ್ನೇಕ್ ಶ್ಯಾಮ್ ಮಾತುಗಳು. ಹಾಗಿದ್ದರೆ ಸ್ನೇಕ್ ಶ್ಯಾಮ್ ತಮ್ಮ ಅನುಭವದ ಮೂಲಕ ಬಿಗ್ ಬಾಸ್ ಮನೆಯಲ್ಲಿ ಏನು ಹೇಳಿದ್ದಾರೆ ನೋಡಿ..

ಹಲವು ಸಾವಿರ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿರುವ ಅನುಭವ ಇರುವ ಸ್ನೇಕ್‌ ಶ್ಯಾಮ್‌ ಈ ಸಲ ಬಿಗ್‌ಬಾಸ್‌ ಮನೆಯಲ್ಲಿ ‘ಅಸಮರ್ಥ’ರ ಗುಂಪಿನಲ್ಲಿರುವ ಸ್ಪರ್ಧಿ. ದೊಡ್ಮನೆಯಲ್ಲಿ ಅವರು ಅಸಮರ್ಥರ ಗುಂಪಿನಲ್ಲಿ ಕುಳಿತಿರಬಹುದು,  ಆದರೆ ಪ್ರಾಣಿಪ್ರಪಂಚದ, ಅದರಲ್ಲಿಯೂ ಹಾವುಗಳ ಕುರಿತಾದ ಜ್ಞಾನದಲ್ಲಿ ಅವರೆಂಥ ಸಮರ್ಥರು ಎಂಬುದನ್ನು ತಿಳಿದುಕೊಳ್ಳಬೇಕಾದರೆ JioCinemaದ ಬಿಗ್‌ಬಾಸ್‌ ಕನ್ನಡದ ‘Live Shorts’ ಸೆಗ್ಮೆಂಟ್‌ನಲ್ಲಿರುವ ಈ ವಿಡಿಯೊ ನೋಡಲೇಬೇಕು.

ಸ್ಪರ್ಧಿಗಳೆಲ್ಲ ಈಜುಕೊಳದ ಬಳಿ ರಿಲ್ಯಾಕ್ಸ್ ಮೂಡ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್‌ ಹಾವುಗಳ ಕುರಿತಾದ ಹಲವು ರೋಚಕ ಸಂಗತಿಗಳನ್ನು ನಿರರ್ಗಳವಾಗಿ ತೆರೆದಿಟ್ಟಿದ್ದಾರೆ. ಅವರು ಹೇಳಿದ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆಕ್ಕಸ ಬೆರಗಾಗಿದ್ದಾರೆ. ಓವರ್ ಟು ಸ್ನೇಕ್ ಶ್ಯಾಮ್: "ಹಾವುಗಳಲ್ಲಿ 45-65 ದಿನಗಳ ಒಳಗೆ ಮೊಟ್ಟೆಬೆಳವಣಿಗೆಯಾಗುತ್ತದೆ. ಪ್ರಾಣಿಗಳಲ್ಲಿ ಫೈಟಿಂಗ್ ಆಗೋದು ಈಟಿಂಗ್ ಮತ್ತು ಮೀಟಿಂಗ್ ಎರಡಕ್ಕೇನೇ. ನಮ್ ಥರ ಅಲ್ಲ… ನಾವು ಎಲ್ಲದಕ್ಕೂ ಹೊಡೆದಾಡುತ್ತೇವೆ. 

ಮೀಟಿಂಗ್ ಮುಗಿದ ಮೇಲೆ ಗಂಡು ಹಾವು ಅದರ ಪಾಡಿಗೆ ಅದು ಹೋಗುತ್ತದೆ. ಹೆಣ್ಣು ಹಾವು ಮೊಟ್ಟೆ ಡೆವಲೆಪ್ ಆದಮೇಲೆ ಸರಿಯಾಗಿರುವ ಜಾಗ ಹುಡುಕಿಕೊಂಡು ಹೋಗಿ ಮೊಟ್ಟೆಗಳನ್ನು ಇಡುತ್ತದೆ. ಅದೂ ಟೆಂಪರೇಚರ್ ಸರಿಯಾಗಿರುವ ಜಾಗ ಸಿಗುವತನಕ ಕಾಯುತ್ತದೆ. ನಮ್ ಥರ ಒಂಬತ್ತು ತಿಂಗ್ಳಾಯ್ತು, ಹೊಟ್ಟೆ ನೋವು ಶುರುವಾಯ್ತು, ಡಾಕ್ಟರ್ ಹತ್ರ ಹೋಗ್ಬೇಕು ಅಂತೆಲ್ಲ ಮಾಡಲ್ಲ… ಸರಿಯಾದ ಜಾಗ ಸಿಗುವ ತನಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರತ್ತೆ. 

ಮೊಟ್ಟೆ ಇಟ್ಟಮೇಲೆ ಕೆಲವು ಜಾತಿ ಹಾವುಗಳು ಸುರುಳಿ ಸುತ್ಕೊಂಡು ಮೊಟ್ಟೆ ಮೇಲೆ ಕಾವು ಕೊಡ್ತವೆ. ಇನ್ನು ಕೆಲವು ಜಾತಿ ಹಾವುಗಳು ಮೊಟ್ಟೆಗಳನ್ನಿಟ್ಟು ಕಾಯುತ್ತವೆ. ಮೊಟ್ಟೆ ಇಟ್ಟ 45-65ದಿನಗಳಲ್ಲಿ ಮರಿಗಳು ಈಚೆ ಬರುತ್ತವೆ. ಎಲ್ಲ ಜಾತಿಯ ಹಾವುಗಳು ಮೊಟ್ಟೆಗಳನ್ನು ಇಟ್ಟರೆ ಮೂರು ಜಾತಿಯ ಹಾವುಗಳು ಮರಿಗಳನ್ನು ಹಾಕತ್ತೆ. ಅವು ಯಾವವೆಂದರೆ, ಹಸಿರು ಹಾವು, ಮಣ್ಣುಮುಕ್ಕ ಹಾವು ಮತ್ತೆ ಮಂಡಲ ಹಾವು -ಈ ಮೂರು ಜಾತಿಯ ಹಾವುಗಳು ಮರಿ ಹಾಕತ್ತೆ. 

ಆದರೆ ಇವು ಸಸ್ತನಿ ಅಲ್ಲ. ಸಸ್ತನಿ ಅಂದ್ರೆ ಮರಿಗಳನ್ನು ಹಾಕಿ ಮೊಲೆಯೂಡಿಸಬೇಕು. ಈ ಹಾವುಗಳು ಹಾಗೆ ಮಾಡಲ್ಲ. ಒಂದು ವಿಷಯ ಹೇಳ್ಬೇಕು, ಹಾವಿನ ಪ್ರತಿಯೊಂದು ಮರಿಗಳೂ ಸಂಪೂರ್ಣ ಸ್ವಾವಲಂಬಿಗಳಾಗಿರ್ತವೆ. ನಮ್ಮ ಥರ ಹುಟ್ಟಿದ ಮೇಲೆ ಬೇರೆಯವರ ಮೇಲೆ ಡಿಪೆಂಡ್ ಆಗಿರುವುದಿಲ್ಲ. ಅವರ ಪಾಡಿಗೆ ಅವು ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತಿರುತ್ತವೆ. ತಾಯಿ-ತಂದೆಯ ಮೇಲೆ ಅವಲಂಬನೆ ಮಾಡುವುದೇ ಇಲ್ಲ. 

ಎಲ್ಲ ಜಾತಿಯ ಹಾವುಗಳಲ್ಲಿಯೂ ಗಂಡು ಹಾವು ಇದೆ. ಆದರೆ ಒಂದು ಜಾತಿಯ ಹಾವುಗಳಲ್ಲಿ ಗಂಡುಹಾವು ಇಲ್ಲ. ಹೆಣ್ಣು ಹಾವೇ ಸೆಲ್ಫ್‌ ರಿಪ್ರೊಡಕ್ಷನ್ ಮಾಡಿಕೊಳ್ಳುತ್ತದೆ. ಆ ಜಾತಿಯ ಹಾವುಗಳನ್ನು ನೀವೆಲ್ಲರೂ ನೋಡಿರ್ತೀರಾ… ಎಲ್ಲರ ಮನೆಯ ಅಡುಗೆ ಮನೆ, ಬಚ್ಚಲ ಮನೆ, ಟಾಯ್ಲೆಟ್‌ನಲ್ಲೆಲ್ಲ ಓಡಾಡ್ತಿರತ್ತೆ, ಪಿಣಿಪಿಣಿಪಿಣಿ ಅಂತ… ಎರೆಹುಳದ ಥರ ಇರತ್ತೆ. ಅದು ಭಾರತದಲ್ಲಿನ ಅತಿಸಣ್ಣ ಹಾವು. ಅದು ರಿಪ್ರೊಡಕ್ಷನ್‌ ಅನ್ನು ಅದೇ ಮಾಡಿಕೊಳ್ಳುತ್ತದೆ. 

ಎಲ್ಲ ಜಾತಿಯ ಹಾವುಗಳೂ ಬಿಲಗಳಲ್ಲಿ, ಪೊಟರೆಗಳಲ್ಲಿ ಮೊಟ್ಟೆ ಇಟ್ಟರೆ, ಒಂದೇ ಒಂದು ಜಾತಿಯ ಹಾವು ಗೂಡನ್ನು ಕಟ್ಟಿ ಮೊಟ್ಟೆ ಇಡುತ್ತದೆ. ಎಲೆಗಳಿಂದ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ. ಅದು ಕಿಂಗ್ ಕೋಬ್ರಾ!!' ಇಷ್ಟೆಲ್ಲ ಮಾಹಿತಿಗಳನ್ನು ಸ್ನೇಕ್ ಶ್ಯಾಮ್ ಹೇಳುತ್ತಿದ್ದರೆ, ಅಲ್ಲಿದ್ದ ಮಿಕ್ಕ ಸ್ಪರ್ಧಿಗಳು ಕಿವಿಕಣ್ಣು ಫುಲ್ ಬಿಟ್ಟುಕೊಂಡು ಕೇಳಿಸಿಕೊಂಡರು.

ಇಂದಿನ ಸಂಚಿಕೆಯಲ್ಲಿ 'ಕಿಚ್ಚನ ಪಂಚಾಯಿತಿ' ಬಗ್ಗೆ ಕುತೂಹಲವಂತೂ ಬೆಟ್ಟದಷ್ಟಿದೆ... ಅದನ್ನು ತಣಿಸಿಕೊಳ್ಳಲು ರಾತ್ರಿ 9.00 ಗಂಟೆವರೆಗೆ ಕಾಯಲೇಬೇಕು. ಅಲ್ಲಿಯವರೆಗೆ ಬೇಸರ ಮಾಡಿಕೊಳ್ಳುವುದಾಗಲೀ ಸುಮ್ಮನೇ ಕಾಲಾಹರಣ ಮಾಡುವ ಅಗತ್ಯವಾಗಲೀ ಇಲ್ಲ. ಏಕೆಂದರೆ, ಬೇಕಾದಾಗಲ್ಲೆಲ್ಲ'ಬಿಗ್ ಬಾಸ್ ಶೋವನ್ನು, 'JioCinema'ದಲ್ಲಿ ಉಚಿತ 24ಗಂಟೆ ನೇರಪ್ರಸಾರವನ್ನು ವೀಕ್ಷಿಸಬಹುದು. 

Latest Videos
Follow Us:
Download App:
  • android
  • ios