Asianet Suvarna News Asianet Suvarna News

ನನ್ನನ್ನು ಅತಿ ಕೆಟ್ಟ ವಿಲನ್‌ ತರ ತೋರಿಸಿದ್ದಾರೆ, ಒಂದೂ ಅವಾರ್ಡ್‌ ಕೊಟ್ಟಿಲ್ಲ: ನಟಿ ರಚಿತಾ ರಾಮ್

11 ವರ್ಷಗಳ ಹಿಂದೆ ನಡೆದ ಸೀರಿಯಲ್ ಅವಾರ್ಡ್ ಕಾರ್ಯಕ್ರಮವನ್ನು ನೆನಪಿಸಿಕೊಂಡ ರಚಿತಾ ರಾಮ್. ಕಲಾವಿದರಿಗೆ ಕಿವಿ ಮಾತು...

Zee Kannada Rachita Ram in Zee Kutumba awards vcs
Author
First Published Nov 14, 2023, 4:23 PM IST

ಜೀ ಕನ್ನಡ ವಾಹಿನಿ ಪ್ರತಿ ವರ್ಷ ಅದ್ಧೂರಿಯಾಗಿ ನಡೆಸುವ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಭಾಗಿಯಾಗಿದ್ದರು. ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೂನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಕುಲ್ ಬಾಲಾಜಿ ಜೊತೆ ಕಾಣಿಸಿಕೊಳ್ಳುತ್ತಿರುವ ಗುಳಿ ಕೆನ್ನೆ ಚೆಲುವೆ ರಚ್ಚು. 11 ವರ್ಷಗಳ ಹಿಂದೆ ಇದೇ ಜೀ ವಾಹಿನಿಯಲ್ಲಿ ಅರಸಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇಂದು ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. 

ಅವಾರ್ಡ್ ವಿತರಣೆ ಮಾಡಲು ವೇದಿಕೆ ಮೇಲೆ ಬಂದ ರಚ್ಚು ತಮ್ಮ ಸೀರಿಯಲ್ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. ಹಾಗೂ ಕಲಾವಿದರಿಗೆ ಸಲಹೆ ಕೊಟ್ಟಿದ್ದಾರೆ.  'ಜೀ ಕುಟುಂಬದವರು ಅಂತ ಹೇಳಿದ ತಕ್ಷಣ ಹಾಗೆ ಹಿಂದೆ ನೋಡಿದರೆ ನನಗೆ ನೆನಪಾಗುವುದು ಈ ತರಹದ ವೇದಿಕೆ. ಅವಾರ್ಡ್‌ ತಗೊಂಡಿಲ್ಲ ಆದರೆ ಇನ್ನಿತ್ತರ ಕಲಾವಿದರ ಜೊತೆ ಪರ್ಫಾರ್ಮ್ ಮಾಡಿದೆ. ಪ್ರತಿಯೊಬ್ಬರು ಬಂದು ಇಲ್ಲಿ ಅವಾರ್ಡ್ ತೆಗೆದುಕೊಳ್ಳುತ್ತಿರುವಾಗ ಅಯ್ಯೋ ಒಂದಾದರೂ ಅವಾರ್ಡ್ ಬರ್ಬಾರದಾ? ಮೂರು ಕ್ಯಾಟಗರಿಯಲ್ಲಿ ನಾನು ನಾಮಿನೇಟ್ ಆಗಿದ್ದೆ. ಈ ಸಲ ವಿನ್ ಆಗಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ. ನಾನು ಹೇಳುತ್ತಿರುವುದು ವಿಚಿತ್ರ ಅನಿಸಬಹುದು ಆದರೆ ಇದೇ ಸತ್ಯ. ಒಂದು ಮಾತು ಹೇಳುತ್ತೀನಿ...ಅವಾರ್ಡ್ ಒಂದು ತೆಗೆದುಕೊಳ್ಳುವುದು ದೊಡ್ಡ ವಿಚಾರ ಅದಕ್ಕಿಂತ ದೊಡ್ಡದು ಜನರ ಮನಸ್ಸು ಗೆಲ್ಲುವುದು. ಪ್ರತಿ ದಿನ ಟಿವಿ ಮುಂದೆ ಕೂತ್ಕೊಂಡು ಸೀರಿಯಲ್ ನೋಡುವಂತ ವೀಕ್ಷಕರಿಗೆ ನಾವು ದೊಡ್ಡ ಮಟ್ಟದಲ್ಲಿ ಥ್ಯಾಂಕ್ಸ್ ಹೇಳಬೇಕು' ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ಸಂತೋಷ್; ತಾಯಿ ಕೊಟ್ಟ ಧೈರ್ಯದಿಂದ 'ಈಗ ಗೇಮ್ ಸ್ಟಾರ್ಟ್‌' ಎಂದ ವರ್ತೂರ್!

'ಯಾಕೆ ಈ ಮಾತುಗಳನ್ನು ಹೇಳುತ್ತಿರುವೆ ಅಂದ್ರೆ...ಇದಕ್ಕೆ ನಾನು ಉದಾಹರಣೆ..ಅವತ್ತು ಅರಸಿ ಅನ್ನೋ ಧಾರಾವಾಹಿಯಲ್ಲಿ ವಿಲನ್ ಆಗಿ ಮಾಡುತ್ತಿದ್ದೆ..ಎಲ್ಲೇ ಹೋದರು ಜನರು ನನ್ನನ್ನು ರಶ್ಮಿ ಎಂದು ಕರೆಯುತ್ತಿದ್ದರು. ಪುಟ್ಟ ಪುಟ್ಟ ಮಕ್ಕಳು ನನ್ನ ಜೊತೆ ಮಾತನಾಡಲು ಹೆದರಿಕೊಳ್ಳುತ್ತಿದ್ದರು ಅಷ್ಟು ಕೆಟ್ಟದಾಗಿ ತೋರಿಸಿದ್ದಾರೆ ಅದು ನನಗೆ ಖುಷಿ ಇದೆ. ನನ್ನ ಅಕ್ಕ ಕೂಡ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ..ಬೆಂಕಿಯಲ್ಲಿ ಅರಳಿದ ಹೂ ಅಂತ ಸಂಜೆ 7 ರಿಂದ 7.30 ಅಕ್ಕ ಸೀರಿಯಲ್, 7.30ಯಿಂದ 8ರ ವರೆಗೂ ನನ್ನ ಸೀರಿಯಲ್ ಬರುತ್ತಿತ್ತು. ನಮ್ಮ ತಂದೆ ತಾಯಿ ಖುಷಿಯಿಂದ 1 ಗಂಟೆ ಟಿವಿ ಮುಂದೆ ಕುಳಿತು ನಮ್ಮನ್ನು ನೋಡುತ್ತಿದ್ದರು. ಇಂದಿಗೂ ನನ್ನ ಮೇಲೆ ಅಷ್ಟೇ ಪ್ರೀತಿ ಮತ್ತು ಅಷ್ಟೇ ಅಭಿಮಾನ ಇಟ್ಟಿರುವುದಕ್ಕೆ ವಂದನೆಗಳು' ಎಂದು ರಚಿತಾ ರಾಮ್ ಹೇಳಿದ್ದಾರೆ. 

 

Follow Us:
Download App:
  • android
  • ios