Asianet Suvarna News Asianet Suvarna News

ಫೈನಲೀ ಪುಟ್ಟಕ್ಕನ ಮಡಿಲು ಸೇರೇ ಬಿಟ್ಲು ಸಹನಾ, ಆದ್ರೆ ಇದು ರಿಯಲ್ಲಾ, ಕನಸಾ?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಮತ್ತು ಪುಟ್ಟಕ್ಕ ಒಂದಾಗಿರುವ ಪ್ರೋಮೋ ವೈರಲ್ ಆಗಿದ್ದು, ವೀಕ್ಷಕರು ಇದನ್ನು ಕನಸು ಎಂದು ನಂಬಲು ನಿರಾಕರಿಸಿದ್ದಾರೆ. ಧಾರಾವಾಹಿಯಲ್ಲಿ ಇನ್ನೂ ಹಲವು ತಿರುವುಗಳು ಬಾಕಿ ಇವೆ ಎಂದು ಅವರು ನಂಬುತ್ತಾರೆ.

zee kannada puttakkana makkalu serial puttakka and sahana reunion
Author
First Published Aug 24, 2024, 11:59 AM IST | Last Updated Aug 26, 2024, 9:09 AM IST

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಸಹನಾ ಸ್ಟೋರಿ ನಡೀತಾ ಇದೆ. ಈ ಪುಟ್ಟಕ್ಕನ ಮಕ್ಕಳು ಸೀರಿಯಲ್ ಶುರುವಾಗಿ ವರ್ಷಗಳೇ ಉರುಳುತ್ತಿವೆ. ಕಳೆದ ವಾರದವರೆಗೂ ಟಿಆರ್‌ಪಿಯಲ್ಲಿ ಕೊಂಚವೂ ಇಳಿಕೆ ಕಾಣದೇ ನಂ.೧ ಸ್ಥಾನದಲ್ಲೇ ಇತ್ತು. ಇದಕ್ಕೆ ಕಾರಣ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಟ್ವಿಸ್ಟ್ ಗಳು ಆ ರೀತಿ ಇರುವುದು. ಸದ್ಯ ನಾಲ್ಕು ಸಂಕಷ್ಟಗಳು ಚಾಲ್ತಿಯಲ್ಲಿವೆ. ಒಂದು ಕಡೆ ಬಂಗಾರಮ್ಮ ಕಿಡ್ನ್ಯಾಪ್ ಆಗಿದ್ದಾರೆ. ಇನ್ನೊಂದು ಕಡೆ ಸಹನಾ ಮನೆ ಬಿಟ್ಟು ಹೋಗಿದ್ದಾಳೆ. ಸುಮನಾ ಅವ್ವನಿಗೆ ಕೊಟ್ಟ ಮಾತು ತಪ್ಪಿ ಲವ್ವಲ್ಲಿ ಬಿದ್ದಿದ್ದಾಳೆ. ಅತ್ತ ಪುಟ್ಟಕ್ಕ ಮಗಳನ್ನು ಹುಡುಕಿಕೊಂಡು ಸಿಟಿಗೆ ಹೊರಟಿದ್ದಾಳೆ. ಈ ಮಹಾನಗರ ಬೆಂಗಳೂರಲ್ಲಿ ಮಗಳನ್ನು ಹುಡುಕಿ ಹುಡುಕಿ ಸೋತು ಹೈರಾಣಾಗಿದ್ದಾಳೆ. ಕಡೆಗೂ ಮಗಳು ಸಿಕ್ಕಳು ಅನ್ನುವಾಗ ಇಬ್ಬರೂ ವಿರುದ್ಧ ದಿಕ್ಕಿಗೆ ನಡೆದು ಹೋಗಿದ್ದಾರೆ. ಈ ಹಿಂದೆಯೇ ಸಹನಾ ತಾನು ದುಡಿದ ಹಣದಲ್ಲಿ ಅವ್ವನಿಗೆ ಏನಾದರೂ ಕೊಡಬೇಕೆಂದುಕೊಂಡಳು.

ಅದಕ್ಕೆಂದೆ ಒಂದೊಳ್ಳೆ ಸೀರೆ ತೆಗೆದುಕೊಂಡು, ಮ್ಯಾಕ್ಸಿ ಬಳಿ ಕೊಟ್ಟು ಕಳುಹಿಸಿದಳು. ಮ್ಯಾಕ್ಸಿ ಮೊದಲೇ ಪುಟ್ಟಕ್ಕನ ಮೆಸ್‌ಗೆ ಹೋಗಿ, ವಿಡಿಯೋ ಮಾಡಿ ಬಂದಿದ್ದ. ಮುಂದೆ ತಡೆಯಲಾಗದೇ ಪುಟ್ಟಕ್ಕನೇ ಮಗಳನ್ನು ಹುಡುಕಿ ಸಿಟಿಗೆ ಬಂದಿದ್ದಳು.

Puttakkana Makkalu: ಪುಟ್ಟಕ್ಕನ ಮಕ್ಕಳಿಗೆ ಸಂಕಷ್ಟ: ಸಮಯ ಬದಲಾವಣೆಯ ಪರಿಣಾಮವೇ?

ಇದೀಗ ಸಹನಾ ಪುಟ್ಟಕ್ಕ ಒಂದಾಗಿರೋ ಪ್ರೊಮೋವನ್ನು ಜೀ ಕನ್ನಡ ಪ್ರಸಾರ ಮಾಡಿದೆ. ಆದರೆ ವೀಕ್ಷಕರು ಇದನ್ನು ನಂಬಲು ರೆಡಿ ಇಲ್ಲ. ಇದೆಲ್ಲ ಕನಸು ಅಂತಾನೇ ಹೇಳ್ತಿದ್ದಾರೆ. ಯಾಕೆಂದರೆ ಅವರ ಊಹೆ ಪ್ರಕಾರ ಪುಟ್ಟಕ್ಕ ಮತ್ತು ಸಹನಾ ಇಷ್ಟು ಬೇಗ ಒಂದಾಗೋದು ಸಾಧ್ಯ ಆಗಲಿಕ್ಕಿಲ್ಲ. ಇನ್ನೂ ಏನೇನೋ ಡ್ರಾಮಾಗಳೆಲ್ಲ ನಡೀಬೇಕಿದೆ. ಸಹನಾಗೆ ಹಣಕಾಸಿನ ಸಹಾಯ ನೀಡಿರೋ ವ್ಯಕ್ತಿಯಿಂದ ಕಿರುಕುಳ ಶುರುವಾಗಬೇಕಿದೆ. ಇಲ್ಲವಾದರೆ ಆ ಸೀನ್ ಅಲ್ಲಿ ತರೋ ಸಾಧ್ಯತೆನೇ ಇರಲಿಲ್ಲ. ಪುಟ್ಟಕ್ಕ ಸಿಟಿಗೆ ಬಂದರೆ ಅವಳು ಮಗಳನ್ನು ವಾಪಾಸ್ ಕರ್ಕೊಂಡು ಹೋಗದೇ ಬಿಡೋದಿಲ್ಲ. ಹಾಗಿರುವಾಗ ಈ ಬಡ್ಡಿಗಾಗಿ, ಹಣ ಕಟ್ಟದಿರುವ ಕಾರಣಕ್ಕೆ ಕಿರುಕುಳ ಕೊಡೋ ಸೀನ್ ಇರೋಕೆ ಚಾನ್ಸ್ ಇಲ್ಲ. ಇದರ ಜೊತೆಗೆ ಸಹನಾ ಗಾಡಿಯಿಂದ ಹೊಟೇಲ್ ನಡೆಸೋ ತನಕ ಬೆಳೀಬೇಕಿದೆ. ಪುಟ್ಟಕ್ಕ ಮತ್ತು ಸಹನಾ ಭೇಟಿ ಆದ್ರೆ ಇದೆಲ್ಲ ಸಾಧ್ಯ ಆಗಲಿಕ್ಕಿಲ್ಲ ಅನ್ನೋದು ಸದ್ಯದ ಲೆಕ್ಕಾಚಾರ.

ಸೋ ಈಗ ವೀಕ್ಷಕರ ಲೆಕ್ಕಾಚಾರದ ಪ್ರಕಾರ ಪುಟ್ಟಕ್ಕನಿಗೆ ಸಹನಾ ಸಿಗೋದಿಲ್ಲ. ಪುಟ್ಟಕ್ಕ ಊರಿಗೆ ವಾಪಾಸ್ ಹೋಗ್ತಾಳೆ. ಸಹನಾಳಾ ಲೈಫು ಮತ್ತೊಂದು ಟರ್ನ್ ತಗೊಳುತ್ತೆ. ಅವಳ ಮತ್ತು ಮ್ಯಾಕ್ಸ್ ನಡುವಿನ ಸಂಬಂಧ ಹೇಗಾಗುತ್ತೆ ಅನ್ನೋದನ್ನೂ ನೋಡೋದಿದೆ. ಇದು ಕನಸೇ ಆಗಲಿ, ರಿಯಲ್ಲೇ ಆಗಲಿ. ಕೆಲವು ವೀಕ್ಷಕರಂತೂ ಕಣ್ತುಂಬಿಕೊಂಡು ಈ ಸೀರಿಯಲ್ ಕಥೆಯನ್ನು ತಮ್ಮ ಲೈಫಿಗೆ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ತಾಯಿ ಕರುಳಿನ ನೋವು, ವೇದನೆಗಳನ್ನು ಹಂಚಿಕೊಂಡಿದ್ದಾರೆ.

ರಾಮಾಚಾರಿಯನ್ನು ಕಾಪಾಡಿದ ಕಿಟ್ಟಿ: ಧರ್ಮೋ ರಕ್ಷತಿ ರಕ್ಷಿತಃ!

ಇನ್ನೊಂದೆಡೆ ಕೆಲವರು ಇದನ್ನು ದಯಮಾಡಿ ಕನಸು ಅಂತ ತೋರಿಸಬೇಡಿ ಅಂತ ಅಂಗಾಲಾಚ್ತಿದ್ದಾರೆ.

ಸದ್ಯಕ್ಕೆ ಈ ಪ್ರೋಮೋ ಪ್ರಸಾರವಾದ ಕೆಲವೇ ನಿಮಿಷಕ್ಕೆ 14 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಅಂದರೆ ಜನ ಎಮೋಶನಲೀ ಈ ಸೀನ್‌ಗಾಗಿ ಎಷ್ಟು ಕಾದಿದ್ದಾರೆ ಅನ್ನೋದು ಅರ್ಥ ಆಗುತ್ತೆ. ಈ ಸೀರಿಯಲ್‌ನಲ್ಲಿ ಅಮ್ಮ ಪುಟ್ಟಕ್ಕನಾಗಿ ಉಮಾಶ್ರೀ ನಟನೆಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಹನಾ ಪಾತ್ರದಲ್ಲಿ ಅಕ್ಷರ ಅವರ ಪ್ರಬುದ್ಧ ನಟನೆಯನ್ನೂ ಜನ ಹೊಗಳುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios