ಯುಟ್ಯೂಬ್ ಚಾನೆಲ್‌ನಲ್ಲಿ ಬಾಲಿ ಟ್ರಿಪ್ ಬಗ್ಗೆ ತೋರಿಸಿದ ನಮ್ರತಾ ಗೌಡ. ಇಮಿಗ್ರೇಷನ್‌ನಲ್ಲಿ ಎದುರಿಸಿದ ಸಂಕಷ್ಟ ವಿವರಿಸಿದ ನಟಿ... 

ಕನ್ನಡ ಕಿರುತೆರೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಕಾಣಿಸಿಕೊಂಡು ಆನಂತರ ನಾಗಿಣಿ ಧಾರಾವಾಹಿಯಲ್ಲಿ ಶಿವಾನಿಯಾಗಿ ಮಿಂಚಿದ ನಮ್ರತಾ ಗೌಡ ಇತ್ತೀಚಿಗೆ ಸಿಕ್ಕಾಪಟ್ಟೆ ಪ್ರಯಾಣ ಮಾಡುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ಆರಂಭಿಸಿರುವ ನಟಿ ತಮ್ಮ ಜರ್ನಿ ಹೇಗಿರುತ್ತೆ ಎಂದು ಅಭಿಮಾನಿಗಳಿಗೆ ವಿಡಿಯೋ ಮಾಡಿ ತೋರಿಸುತ್ತಾರೆ. ಅಲ್ಲದೆ ಸಿಕ್ಕಾಪಟ್ಟೆ ಸದ್ದು ಮಾಡಿದ ಬಾಲಿ ಟ್ರಿಪ್‌ ಜರ್ನಿ ಆರಂಭದಲ್ಲಿ ಎದುರದಾರ ಸಂಕಷ್ಟವನ್ನು ವಿವರಿಸಿದ್ದಾರೆ. 

ನಮ್ರತಾ ಗೌಡ ಜೊತೆ ಐಶ್ವರ್ಯ ಕೂಡ ಪ್ರಯಾಣ ಆರಂಭಿಸಿದ್ದಾರೆ. ಇಬ್ಬರೂ ನಟಿಯರು ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ ಅಲ್ಲಿ ಪ್ರವೇಶಿಸುವಾಗ ಪಾಸ್‌ಪೋರ್ಟ್‌ ಮತ್ತು ವೀಸಾ ಚೆಕ್ ಮಾಡುತ್ತಾರೆ. ಐಶ್ವರ್ಯ ಅವರಿಗೆ ಯಾವ ಸಮಸ್ಯೆನೂ ಆಗಿಲ್ಲ ಆದರೆ ನಮತ್ರಾಗೆ ಒಂದು ಅಕ್ಷಯದಿಂದ ಇಡೀ ಟ್ರಿಪ್ ಕ್ಯಾನ್ಸಲ್ ಆಗುವ ಪರಿಸ್ಥಿತಿ ಎದುರಾಗಿತ್ತು. ನಮ್ರತಾ ಗೌಡ ಎಲ್ಲೆಡೆ ನಮ್ರತಾ ಶ್ರೀನಿವಾಸ್‌ ಎಂದು ಹೆಸರು ಕೊಟ್ಟಿದ್ದರು ಆದರೆ ಫ್ಲೈಟ್‌ನವರು ಬುಕ್ಕಿಂಗ್ ಸಮಯದಲ್ಲಿ ನಮ್ರತಾ ಶ್ರೀನಿವಾಸಾ ಅಂತ ಬದಲಾಯಿಸಿಬಿಟ್ಟಿದ್ದರು. ಇದರಿಂದ ಏರ್‌ಪೋರ್ಟ್‌ ಆರಂಭದಲ್ಲಿಯೇ ಸಂಕಷ್ಟ ಶುರುವಾಯ್ತು. 

ಕನ್ನಡತಿಯರು ಬಿಕಿನಿ ಹಾಕ್ಬಾರ್ದು; ಕಾಮೆಂಟ್ ಅಫ್ ಮಾಡಿದ ನಮ್ರತಾ, ನೆಟ್ಟಿಗರು ಗರಂ

ಅಲ್ಲಿಗೆ ಸುಮ್ಮನಾಗದ ನಟಿ ಇಂಟರ್‌ನ್ಯಾಷನಲ್ ಕರೆನ್ಸಿ ಹಾಕಿಸಿಕೊಂಡು ಅಂದ್ರೆ 800 ರೂಪಾಯಿ ಮೊಬೈಲ್ ರೀ-ಚಾರ್ಜ್ ಮಾಡಿಕೊಂಡು ಸಂಬಂಧ ಪಟ್ಟಿರುವ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಸರಿ ಮಾಡಿಕೊಂಡು ಆನಂತರ ಬಾಲಿ ಕಡೆ ಮುಖ ಮಾಡಿದ್ದಾರೆ. ನನಗೆ ತಲೆ ಬಿಸಿ ಆಗಿತ್ತು ವರ್ಷಗಳಿಂದ ಪ್ಲ್ಯಾನ್ ಮಾಡುತ್ತಿದ್ದ ಟ್ರಿಪ್ ಕೈ ಕೊಟ್ಟಿತ್ತು ಎಂದು ಬೇಸರ ಅಗಿತ್ತು ಆನಂತರ ಮಾತನಾಡಿ ಸರಿ ಮಾಡಿಕೊಂಡೆವು. 800 ರೂಪಾಯಿ ಕರೆನ್ಸ್‌ ಹಾಕಿಸಿ ಮಾತನಾಡುತ್ತಿದ್ದೆ ಆದರೆ 20 ನಿಮಿಷ ನನ್ನ ಕಾಲ್‌ನ ಹೋಲ್ಡ್‌ಗೆ ಹಾಕಿಬಿಟ್ಟರು. ಹುಡುಗರು ಮಾತನಾಡಲು ಕಾಯುತ್ತಿರುತ್ತಾರೆ ಹೀಗಿರುವಾಗ ನನ್ನ ಕಾಲ್‌ನ ವೇಟ್ ಮಾಡಿಸಿದ್ದಾರೆ ಎಂದು ಇಡೀ ಘಟನೆಯನ್ನು ಐಶ್ವರ್ಯ ಮತ್ತು ನಮ್ರತಾ ವಿವರಿಸಿದ್ದಾರೆ.

ಈ ಸ್ಟೋರಿ ಎಲ್ಲ ಹೇಳಿದ್ಮೇಲೆ ನಮ್ರತಾ ಗೌಡ ಬಾಲಿಗೆ ಎಂಟ್ರಿ ಕೊಡುತ್ತಾರೆ. ಬಾಲಿ ಏರ್‌ಪೋರ್ಟ್‌ ನೋಡಿ ಫುಲ್ ಖುಷಿಯಲ್ಲಿ ತಮ್ಮ ರೂಮ್‌ ಕಡೆ ಪ್ರಯಾಣ ಮಾಡುತ್ತಾರೆ. ಪಕ್ಕಾ ಬಾಲಿ ಸ್ಟೈಲ್‌ನಲ್ಲಿರುವ ರೂಮ್ ಬುಕ್ ಮಾಡಿಕೊಂಡಿರುವ ನಟಿಯರು ಪ್ರಿನ್ಸೆಸ್‌ ಬೆಡ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅಬ್ಬ ನನಗೆ ಈ ಹುಳಗಳನ್ನು ನೋಡಿದರೆ ತುಂಬಾ ಭಯ ಆಗುತ್ತೆ ನನ್ನ ಪುಣ್ಯಕ್ಕೆ ಸೊಳ್ಳೆ ನೆಟ್ ಕೊಟ್ಟಿದ್ದಾರೆ ಎಂದು ನಿಮ್ಮಿ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲ ಓಪನ್ ಸ್ಕೈ ಬಾತ್‌ರೂಮ್‌ನ ನೋಡಿ ರೂಮ್‌ ಬುಕ್ ಮಾಡಿರುವುದು ಎಂದು ಇಡೀ ಬಾತ್‌ರೂಮ್ ಹೇಗಿದೆ ಎಂದು ತೋರಿಸಿದ್ದಾರೆ. ಅಲ್ಲಿಂದ ಮೊದಲ ದಿನವೇ ಎರಡು ಪಬ್‌ಗಳಿಗೆ ಎಂಟ್ರಿ ಕೊಟ್ಟರು. ನಮ್ರತಾಗೆ ತುಂಬಾ ಸುಸ್ತು ಆಗಿದ್ದ ಕಾರಣ ಬೇಗ ರೂಮಿಗೆ ಬಂದು ಸ್ಕಿನ್ ಕೇರ್ ಮಾಡಿಕೊಂಡು ಮಲಗಿದ್ದಾರೆ. 

YouTube video player