ಬಾಲ್ಯದಿಂದಲೂ ನಟನೆ ಎಂದರೆ  ಪ್ರೀತಿ. ಅದಕ್ಕೆ ಸರಿಯಾಗಿ ಆಫರ್ಸ್‌ಗಳೂ  ಅರಸಿ ಬರುತ್ತಿತ್ತು.  ಆದರೆ ಇವರ ತಂದೆ ಟೀಚರ್‌ ಅಗಿದ್ದ ಕಾರಣ ಪಿಯುಸಿ ಮುಗಿಯದೆ ಇಂಡಸ್ಟ್ರಿಗೆ ನೋ ಎಂಟ್ರಿ ಎಂದಿದ್ದರಂತೆ.

ಆರ್ಕಿಟೆಕ್ಚರ್‌ ಇಂಜಿನಿಯರ್ :

ಮೂಲತಃ ಬೆಂಗಳೂರಿನವರಾದ ಇವರು ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಪ್ರವೃತ್ತಿಯಾಗಿ ನಟನೆಯ ಜೊತೆಗೆ ವೃತ್ತಿಯಲ್ಲಿ ಆರ್ಕಿಟೆಕ್ಚರ್‌ ಇಂಜಿನಿಯರ್‌ ಕೂಡಾ ಹೌದು.ತಂದೆ ತಾಯಿ ಮತ್ತು ಅಕ್ಕ ಇವರ ಎಲ್ಲಾ ಸಾಧನೆಗೂ ಬೆನ್ನೆಲುಬು. ಸದ್ಯ ನಾಗಿಣಿ ಪಾತ್ರವನ್ನೂ ಮಾಡುತ್ತಲೇ ತಮ್ಮ ಪ್ರೊಫೆಷನ್ ಲೈಫನ್ನು ನಿಭಾಯಿಸುತ್ತಿದ್ದಾರೆ. ಬಿಡುವು ಸಿಕ್ಕಾಗೆಲ್ಲಾ ಆರ್ಕಿಟೆಕ್ಚರ್‌ ಫೀಲ್ಡ್‌ನಲ್ಲಿ ಕಾಲ ಕಳೆಯುತ್ತಾರೆ ಗೌತಮಿ.

ಪೊಲೀಸ್ ಕನಸು ಕಂಡ ನಟಿ ಈಗ ಆಗಿದ್ದು ಮಾತ್ರ ವಿಲನ್!

ನಾಗಿಣಿ ಪ್ರಾಣಿ ಪ್ರೇಮಿ:

ಹೌದು, ಈ ನಾಗಿಣಿ ಪ್ರಾಣಿ ಪ್ರೇಮಿ. ದಿನವೂ ಬೆಳಗ್ಗೆ ಎದ್ದು ಜಿಮ್‌ಗೆ  ಹೋಗೋ ಮೊದಲು ಅಥವಾ ಹೋಗಿ ಬಂದ ನಂತರ ತಮ್ಮ ಮುದ್ದಾದ ಬೆಕ್ಕು ಮತ್ತು ನಾಯಿಗಳ ಜೊತೆ ಒಂದಿಷ್ಟು ಸಮಯವನ್ನು ಕಳೆದೇ ಆ ದಿನವನ್ನು ಪ್ರಾರಂಭಿಸುತ್ತಾರೆ.

ಪ್ರೇಕ್ಷಕನ ಮನಗೆದ್ದ ನಾಗಿಣಿ:

ಮೊದಲಿಗೆ ತಮ್ಮ ನಟನಾ ಜರ್ನಿಯನ್ನು 'ಪಂಚರಂಗಿ ಪಾಂಪಾಂ'ನಲ್ಲಿ ಪ್ರಾರಂಭಿಸಿದ ಇವರು ನಂತರ ಮಹಾಕಾಳಿ, ಅಕ್ಕ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಆ ಮೇಲೆ ನಾಗಿಣಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡುತ್ತಲೇ ಒಂದೇ ಧಾರಾವಾಹಿಯಲ್ಲಿ ಐದು ಪಾತ್ರವನ್ನು ನಿರ್ವಹಿಸುತ್ತಿದ್ದರು. ಸದ್ಯ ನೆಗಟಿವ್‌ ರೋಲ್‌ನಿಂದ ಪಾಸಿಟಿವ್ ರೋಲ್‌ಗೆ ಎಂಟ್ರಿ ಕೊಟ್ಟಿರುವ ಇವರು ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಜನರು ಹೊಸ ನಾಗಿಣಿಯನ್ನು ಜನ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬ ಭಯ ಇವರಲ್ಲಿತ್ತಂತೆ. ಆದರೆ ಪ್ರೇಕ್ಷಕರು ಈ ನಾಗಿಣಿಯ ಪಾತ್ರವನ್ನು ನೋಡಿ ಫುಲ್‌ ಖುಷ್‌ ಆಗಿದ್ದಾರೆ ಎಂಬ ಸಂತಸ ಇವರದ್ದು.

'ಜೊತೆ ಜೊತೆಯಲಿ' ಝೆಂಡೆಗೆ ಟಾಂಗ್ ಕೊಡುವ ಮೀರಾ ಜೀ ರಿಯಲ್ ಲೈಫ್ ಹೀಗಿದ್ಯಾ!?
 
ನೆಕ್ಸ್ಟ್‌ ಫ್ಲಾನ್?

ಸದ್ಯ ಇಂಡಸ್ಟ್ರಿಯಿಂದ ಸಾಕಷ್ಟು ಆಫರ್‌ಗಳು ಬರುತ್ತಿದೆ. ಉತ್ತಮ ಕಥೆ ನೋಡಿ ಮುಂದಿನ ಯೋಚನೆ ಮಾಡೋ ಫ್ಲಾನ್‌ ಇವರದ್ದು. ತಮ್ಮ ಪ್ರೊಫೆಷನಲ್ ಲೈಫ್‌ನಲ್ಲಿ ಆಂಟ್ರಪ್ರೀನರ್‌ ಜೊತೆಗೆ ಈವೇಂಟ್‌ ಮ್ಯಾನೇಜ್ಮೆಂಟ್‌ ಅನ್ನು ಮಾಡಬೇಕೆಂಬ ಕನಸಿದೆ. ಉತ್ತಮ ಸ್ಕ್ರೀಪ್ಟ್‌  ಮತ್ತು ವಿಭಿನ್ನ ಪಾತ್ರದಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕರೆ ಅದಕ್ಕೂ ಸಿದ್ದ ಅನ್ನುತ್ತಾರೆ ಗೌತಮಿ.