ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಗಳು ಈಕೆ. ಜೀವನದಲ್ಲಿ ಪೊಲೀಸ್ ಆಗಬೇಕೆಂಬ ಕನಸನ್ನು ಹೊಂದಿದ್ದ ಮುಗ್ದಮನಸ್ಸು. ಮನೆಯಲ್ಲಿ ವಿದ್ಯಾಭ್ಯಾಸದ ಖರ್ಚಿಗೆ ಕಷ್ಟವಾಗುತ್ತಿದೆ ಎಂದರಿತಾಗ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಿ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಮುನ್ನುಗ್ಗುತ್ತಾಳೆ. ಒಂದು ಕಡೆಯಲ್ಲಿ ಮನೆಯನ್ನು ನಿಭಾಯಿಸಬೇಕು ಇನ್ನೊಂದೆಡೆ ಸಾಧಿಸಬೇಕೆಂಬ ಹಠ. ಅಂತಹ ಸಂದರ್ಭದಲ್ಲಿ ಈಕೆಯನ್ನು ಕೈ ಬೀಸಿ ಕರೆದಿದ್ದು ಬಣ್ಣದ ಲೋಕ.

ಗಟ್ಟಿಮೇಳ 'ಜಗಳ ಗಂಟಿ' ನಿಶಾ ರವಿಕುಮಾರ್ ಗ್ಲಾಮರಸ್ ಫೋಟೋ!

ಕೈ ಹಿಡಿದ ರಂಗಭೂಮಿ:

ಭವ್ಯಶ್ರೀ ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯವರು. ರಂಗಭೂಮಿ ಕಲಾವಿದೆ ಕೂಡಾ ಹೌದು. ಬಾಲ್ಯದಲ್ಲಿ ಕಲಿತ ಯಕ್ಷಗಾನ ಮತ್ತು ಭರತನಾಟ್ಯ ಈಕೆಗೆ ನಟನೆಗೆ ವರಪ್ರಸಾದವಾಗಿ ಪರಿಣಮಿಸಿತು. ರಂಗಭೂಮಿ ಕಲಾವಿದೆಯಾಗಿದ್ದರಿಂದ ಇವರಿಗೆ ನಟನೆ ಎಂದರೆ ಬಹಳ ಅಚ್ಚುಮೆಚ್ಚು. ಬಾಲ್ಯದಲ್ಲೇ ನಟನೆಯ ಕುರಿತು ಒಲವಿದ್ದರಿಂದ ಬಣ್ಣದಲೋಕ ಇವರ ಸಂಕಷ್ಟಕ್ಕೆ ಆಸರೆಯಾಗಿ ನಿಂತಿತು.

ರೀಲ್‌ನಲ್ಲಿ ಕಾಟ ಕೊಡೋ ವಿಲನ್:

ರೀಲ್‌ನಲ್ಲಿ ಸಿಕ್ಕಾಪಟ್ಟೆ ಟಾರ್ಚರ್‌ ಪಾರ್ಟಿ. ಆದ್ರೆ ನಿಜ ಜೀವನದಲ್ಲಿ ತುಂಬಾ ಇನೋಸೆಂಟ್ ಹುಡುಗಿ. ಮೊದಲಿನಿಂದಲೂ ವಿಲನ್ ರೋಲ್‌ಗಳ್ನು ಮಾಡುತ್ತಾ ಬಂದಿರುವ ಇವರು 'ಅವಳು', 'ಇಂತಿ ನಿನ್ನ ಪ್ರೀತಿಯ', 'ಅಣ್ಣಯ್ಯ', 'ಕಿನ್ನರಿ' ಮತ್ತು 'ಶಾಂತಂ ಪಾಪಂ', ಕಮಲಿ' ಧಾರಾವಾಹಿಗಳು ಸೇರಿದಂತೆ 'ತೋತಾಪುರಿ ಮತ್ತು ಕೆಕೆ' ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣದಲ್ಲಿ  ಪ್ರಸಾರವಾಗುತ್ತಿರುವ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ರಾಣಿ ಎಂಬ ವಿಲನ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಪರ್ಫೆಕ್ಟ್‌ ಗರ್ಲ್‌ ಎಂದೆನಿಸಿಕೊಂಡಿರುವ ದೀಪಿಕಾ ದಾಸ್ ಬ್ಯಾಗ್‌ನಲ್ಲಿ ಏನಿಟ್ಟವ್ರೇ ಗುರು!

ಪರಭಾಷೆಗಳಿಂದಲೂ ಆಫರ್ಸ್‌:

ಪುಟ್ಟ ಗೌರಿ ಧಾರಾವಾಹಿ ಖ್ಯಾತಿಯ  'ಅಜ್ಜಮ್ಮ' ಚಂದ್ರಕಲಾ ಮೋಹನ್ ಇವರ ಜೀವನದ ರೋಲ್ ಮಾಡೆಲ್. ಈಗಾಗಲೇ ಕನ್ನಡ ಮಾತ್ರವಲ್ಲದೇ ತೆಲುಗುನಿಂದಲೂ ಈಕೆಗೆ ಆಫರ್‌ಗಳು ಬಂದಿವೆ. ಆದರೆ ಮೊದಲು ನಟನೆಯ ಆಳವನ್ನು ಅರಿತು ತದನಂತರ ಮುಂದಿನ ಹೆಜ್ಜೆಯನ್ನು ಇಡಬೇಕೆನ್ನುವುದು ಇವರ ಕನಸು.ತುಳುನಾಡಿನವರಾಗಿರುವ ಇವರಿಗೆ ತುಳುವಿನ ಅರವಿಂದ್ ಬೋಳಾರ್ ಜೊತೆ ಅಭಿನಯಿಸಬೇಕೆಂಬ ಬಯಕೆ.