ಆರ್ಯವರ್ಧನ್‌- ಅನು ಸಿರಿಮನೆ ಹೆಸರು ಕೇಳಿದರೆ ಸಾಕು, ಇದು ಜೊತೆ ಜೊತೆಯಲಿ ಧಾರಾವಾಹಿ ಎಂದು ಪುಟ್ಟ ಮಗು ಕೂಡ ಹೇಳುತ್ತದೆ. ರಾತ್ರಿ 8.30 ಆದರೆ ಸಾಕು ಮಿಸ್ ಮಾಡದೇ ಟಿವಿ ಮುಂದೆ ಕೂತು ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಿಸುವ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕಾದಿದೆ.

ಅನು ಸಿರಿಮನೆ ಬಾಳಿಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ವಿಜಯ್ ಸೂರ್ಯ; ಏನಿದು ಟ್ವಿಸ್ಟ್‌? 

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅನಿರುದ್ಧ ಜೊತೆ ಜೊತೆಯಲಿ ಟೈಟಲ್ ಟ್ರ್ಯಾಕ್ 11 ತಿಂಗಳಲ್ಲಿ ಯುಟ್ಯೂಬ್‌ನಲ್ಲಿ 2 ಕೋಟಿ ವೀಕ್ಷಣೆ ಪಡೆದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ 1 ಕೋಟಿ ವೀಕ್ಷಣೆ ಪಡೆದಾಗಲೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. 

"

ನೆಟ್ಟಿಗರ ಕಮೆಂಟ್:
ತಂದೆ ಮಗಳ ಸಂಬಂಧ, ಅನು ಆರ್ಯ ಪ್ರೀತಿ, ಮಿಡಲ್ ಕ್ಲಾಸ್‌ ಜೀವನ ಎಲ್ಲವನ್ನೂ ವೀಕ್ಷಕರಿಗೆ ನಿಜ ಜೀವನದ ಘಟನೆ ರೀತಿಯಲ್ಲಿ ಕನಿಕ್ಟ್ ಆಗುತ್ತಿದೆ ಈ ಧಾರಾವಾಹಿಯ ಕಥೆ. ಈ ಲವ್ ಆ್ಯಂಥಮ್‌ಗೆ 2 ಕೋಟಿ ವೀಕ್ಷಣೆ ಪಡೆದಿರುವ ಕಾರಣ 'ನನ್ನ ಜೆಜೆ ನಮ್ಮ ಹೆಮ್ಮೆ',  'ಜೊತೆ ಜೊತೆಯಲಿ ಧಾರಾವಾಹಿಗೆ ಇರುವ ಪವರ್ ಇದು' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

'ಜೊತೆ ಜೊತೆಯಲಿ' ಸುಬ್ರಹ್ಮಣ್ಯ ಸಿರಿಮನೆ ದುಬಾರಿ ಮೊಬೈಲ್ ಕಳವು; ಪೊಲೀಸರಿಗೆ ದೂರು! 

ಧಾರಾವಾಹಿ ಅಪ್ಡೇಟ್:
ಅರ್ಯವರ್ಧನ್‌ ಮತ್ತು ಅನು ಪ್ರೀತಿ ಪ್ರಸ್ತಾಪ ಮಾಡದ ಕಾರಣ ಸುಬ್ಬು ಸಿರಿಮನೆ ಮಗಳಿಗೆ ಒಂದೊಳ್ಳೆ ಸಂಬಂಧದ ಹುಡುಕಾಟದಲ್ಲಿದ್ದಾರೆ. ಸ್ಪೆಷಲ್‌ ಎಂಟ್ರಿಯಾಗಿ ಸುಧಾರಾಣಿ ಹಾಗೂ ಅಗ್ನಿಸಾಕ್ಷಿ ನಟ ವಿಜಯ್ ಸೂರ್ಯ ಅನು ಬಾಳಿಗೆ ಹೊಸ ಟ್ವಿಸ್ಟ್‌ ತರಲಿದ್ದಾರೆ. ಆದರೆ ಇದೇ ಸಮಯಕ್ಕೆ ಹೃದಯಘಾತದಿಂದ ಸುಬ್ಬು ಆಸ್ಪತ್ರೆಗೆ ದಾಖಲಾಗುತ್ತಾರೆ. ಅನು ತಂದೆ ನೋಡಲು ಬರುತ್ತಾಳಾ? ತಂದೆ ತೋರಿಸಿದ ಹುಡುಗನನ್ನು ಮದುವೆಯಾಗುತ್ತಾಳಾ ಎಂದು ಕಾದು ನೋಡಬೇಕಿದೆ.