ಜೊತೆ ಜೊತೆಯಲಿ ಧಾರಾವಾಹಿ ನೋಡುತ್ತಿದ್ದರೆ, ಎಂಥವರಿಗೂ ತಮ್ಮ ಕಾಲೇಜ್‌ ದಿನಗಳು, ಪ್ರೇಮದ ಕ್ಷಣಗಳು ಜ್ಞಾಪಕ ಬರುತ್ತವೆ. ವಯಸ್ಸಿನಲ್ಲಿ ಕೊಂಚ ಅಂತರವಿರಬಹುದು, ಆದರೆ ಭಾವನೆಗಳು ಒಂದೇ ಅಲ್ವಾ? ಮಗಳ ಹುಟ್ಟು ಹಬ್ಬ ತಂದೆ-ತಾಯಿ ಬಾಳಲ್ಲಿ ಸಂಭ್ರಮದ ದಿನ. ಮಗಳು ಏನೇ ಕೇಳಿದರೂ, ಏನೇ ಮಾಡಿದರೂ ಬೈಯ್ಯದೇ ಒಪ್ಪಿಕೊಳ್ಳುತ್ತಾರೆ. ಇದೇ ಅವಕಾಶವನ್ನು ಅನು ತನ್ನ ಪ್ರೀತಿ ಪ್ರಸ್ತಾಪ ಮಾಡಲು ಮುಂದಾಗುತ್ತಾಳೆ. ಆದರೆ ಅಲ್ಲಿ ನಡೆದದ್ದೇ ಬೇರೆ...

'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಆರ್ಯವರ್ಧನ್? 

ಅನು ಸಿರಿಮನೆ ಹುಟ್ಟುಹಬ್ಬದ ದಿನ ತಮ್ಮ ಪ್ರೀತಿ ಬಗ್ಗೆ ಪೋಷಕರಿಗೆ ಹೇಳಿ, ಮದುವೆಗೆ ಒಪ್ಪಿಸಬೇಕೆಂದು ಹೇಳಿ ಆರ್ಯ 'ರಾಜನಂದಿನಿ' ಸೀರೆಯನ್ನು ಉಡುಗೊರೆಯಾಗಿ ನೀಡುತ್ತಾನೆ. ಸಂಜೆ ಅದೇ ಸೀರೆ ಅಟ್ಟು ಅಲಂಕಾರಿಸಿಕೊಂಡು, ಅನು ಆರ್ಯನ ಹಾದಿಗೆ ಕಾಯುತ್ತಿರುತ್ತಾಳೆ. ಆದರೆ ಸುಬ್ಬು ಅಂಗಡಿ ಮಾಲೀಕ ಸರ್ಪ್ರೈಸ್‌ ಆಗಿ ಹುಡುಗನನ್ನು ನೋಡುವ ಸಂಬಂಧ ಸಿದ್ಧ ಪಡಿಸುತ್ತಾರೆ. ಇವೆಲ್ಲ ತಿಳಿಯದ ಅನು ಆರ್ಯನೇ ಬಂದ ಎಂದು ತಿಳಿದು ಕೊಳ್ಳತ್ತಾಳೆ. ಆದರೆ ಕುಟುಂಬ ಕಲಹಗಳಿಂದ ಆರ್ಯ ಅನು ನೋಡಲು ತಡವಾಗಿ ಬರುತ್ತಾನೆ. ಅಷ್ಟರಲ್ಲಿ ಅನು ನೋಡಲು ಬೇರೆಯೇ ಸಂಬಂಧವೇ ಬರುತ್ತದೆ.

ಅನು ನೋಡಲು ಅಗ್ನಿಸಾಕ್ಷಿ ವಿಜಯ್ ಸೂರ್ಯ ಬರುತ್ತಾನೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಫ್ಯಾನ್ ಪೇಜ್‌ಗಳಲ್ಲಿ ಚರ್ಚೆ ಹೆಚ್ಚಾಗಿತ್ತು. ಆದರೆ ಅಂದಿನ ಸಂಚಿಕೆಯಲ್ಲಿ ಪೋಷಕರು ಮಾತ್ರ ಕಾಣಿಸಿಕೊಂಡಿದ್ದರು. ಮೊದಲೇ ಆತಂಕದಲ್ಲಿದ್ದ ಆರ್ಯ, ಅನು ಮನೆ ತಲುಪಿದ ನಂತರ ಈ ಸಂಬಂಧದ ಬಗ್ಗೆ ತಿಳಿದುಕೊಳ್ಳುತಾನೆ. ಇನ್ನೇನು ಪ್ರೀತಿ ವಿಚಾರ ಹೇಳಬೇಕು ಎನ್ನುವಷ್ಟರಲ್ಲಿ ಆರ್ಯಗೆ ಅತ್ತಿಗೆಯಿಂದ ಕರೆ ಬರುತ್ತದೆ. ಅನು ಹುಟ್ಟು ಹಬ್ಬದ ದಿನ ಪ್ರೀತಿ ಹೇಳಿಕೊಳ್ಳಬೇಕು ಎಂದು ಮಾಡಿದ್ದ ಪ್ಲಾನ್ ಫ್ಲಾಪ್ ಆಗುತ್ತದೆ.

'ಜೊತೆ ಜೊತೆಯಲಿ' ಆರ್ಯವರ್ಧನ್ ಒಂದು ದಿನದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ಆದರೆ ಈಗಲೂ ಅನು ಬಾಳಲ್ಲಿ ಮತ್ತೊಮ್ಮ ಹುಡುಗ ಎಂಟ್ರಿ ಆಗುತ್ತಾನೆ, ಅದು ವಿಜಯ್ ಸೂರ್ಯನೇ ಆಗಿರುತ್ತಾನೆ ಎಂಬುದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜೊತೆ ಜೊತೆಯಲ್ಲಿ ಧಾರಾವಾಹಿಗೆ ವಿಜಯ್ ಸೂರ್ಯ ಎಂಟ್ರಿ ಕೊಡುತ್ತಿರುವುದು ಅಭಿಮಾನಗಳಿಗೆ ಮತ್ತಷ್ಟು ಥ್ರಿಲ್ ಹೆಚ್ಚಾಗುವಂತೆ ಮಾಡಿದೆ.