ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚಿದ ಧಾರಾವಾಹಿ 'ಜೊತೆ ಜೊತೆಯಲಿ' ಶುರುವಾಗಿ ಒಂದು ವರ್ಷವಾಗುತ್ತದೆ. ಆರ್ಯ ಯಾವಾಗ ಅನುಗೆ ಪ್ರಪೋಸ್‌ ಮಾಡುತ್ತಾರೆ ಎಂದು ಪ್ರತಿದಿನ ರಾತ್ರಿ ಟಿವಿ ಮುಂದೆ ಕುಳಿತ ವೀಕ್ಷಕರಿಗೆ ಯಕ್ಷ ಪ್ರಶ್ನೆಯಾಗಿತ್ತು. ಆದರೀಗ ಅದಕ್ಕೆ ಸಮಯ ಕೂಡಿ ಬಂದಿದೆ.

ಬಿಡುವಿನಲಿ 'ಜೊತೆ ಜೊತೆಯಲಿ' ವಿಜಯಲಕ್ಷ್ಮೀ ಸಿಂಗ್ ಏನು ಮಾಡುತ್ತಾರೆ?

ಹೌದು! ಜೊತೆ ಜೊತೆಯಲಿ ಪ್ರೇಮೋತ್ಸವದಲ್ಲಿ ಆರ್ಯವರ್ಧನ್‌ ಅನುಗೆ ಸರ್ಪ್ರೈಸ್‌ ಅರೆಂಜ್ ಮಾಡಿಕೊಂಡಿದ್ದಾರೆ. ಅದೆಷ್ಟೊ ತಿಂಗಳುಗಳಿಂದ ಅನು ತಲೆಯಲ್ಲಿ ಗೊಂದಲ ಉಂಟು ಮಾಡಿದ್ದ  ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ಬಂದಿದೆ. ಇಡೀ ಮನೆಯನ್ನು  ಗುಲಾಬಿ ಹೂವಿನಿಂದ ಅಲಂಕರಿಸಿ, ಅನು ಬರುವ ಮುನ್ನ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಳ್ಳುತ್ತಿರುವ ಅರ್ಯನನ್ನು ನೋಡಿದರೆ ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಸುಹಾಸಿನಿ ಅವರಿಗೆ  ಪ್ರಪೋಸ್ ಮಾಡಲು ಚಡಪಡಿಸುವ ಸನ್ನಿವೇಶ ನೆನಪಾಗುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಅನು ಸಿರಿಮನೆ 'ಜೊತೆ ಜೊತೆಯಲಿ'ರೋ ಬೆಸ್ಟ್‌ಫ್ರೆಂಡ್‌ ರಮ್ಯಾ ಯಾರು ಗೊತ್ತಾ?

 

ಈಗಾಗಲೇ ರಿಲೀಸ್ ಮಾಡಲಾಗಿರುವ ಪ್ರೋಮೋದಲ್ಲಿ ಅನು ಮತ್ತು ಆರ್ಯ ಚಾಪರ್‌ನಲ್ಲಿ ಆಕಾಶದ ಎತ್ತರಕ್ಕೆ ಹಾರುತ್ತಾರೆ. ಅಲ್ಲೇ ಪ್ರಪೋಸ್ ಮಾಡುತ್ತಾರೆ? ಆರ್ಯ ಹೇಗೆ ತಮ್ಮ ಪ್ರೇಮ ನೀವೇದನೆ ಮಾಡುತ್ತಾರೆ  ಅದಕ್ಕೆ ಅನು ಏನು ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. 

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು

ಸಾಲ್ಟ್‌ ಆಂಡ್‌ ಪೆಪರ್‌ ಲುಕ್ ನಲ್ಲಿ ಆರ್ಯವರ್ಧನ್‌ ಪಿಂಕ್ ಶರ್ಟ್‌ ಹಾಗೂ ವೈಟ್‌ ಸೂಟ್‌ ಧರಿಸಿದ್ದರೆ ಬಾರ್ಬಿ ಡಾಲ್‌ ತರ ಅನು ಪೀಚ್‌ ಸೆಲ್ವಾರ್‌ ಧರಿಸಿದ್ದಾರೆ. ಇಬ್ಬರ ಡಿಫರೆಂಟ್‌ ಲುಕ್‌ನನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಅಂತು ಇಂತು ಬೇಂಡೆ ಅಲ್ಲ ಅಲ್ಲ ಜೇಂಡೆ ಸರ್‌ ಕೊಟ್ಟ ಧೈರ್ಯದಿಂದ ಆರ್ಯ ಪ್ರೀತಿಗೆ ಒಂದು ತಿರುವು ಸಿಗುತ್ತಿದೆ ಅಂತಾರೆ ಜೊತೆಜೊತೆಯಲಿ ವೀಕ್ಷಕರು .