Asianet Suvarna News Asianet Suvarna News

ಬಿಡುವಿನಲಿ 'ಜೊತೆ ಜೊತೆಯಲಿ' ವಿಜಯಲಕ್ಷ್ಮೀ ಸಿಂಗ್ ಏನು ಮಾಡುತ್ತಾರೆ?

ಕನ್ನಡ ಚಿತ್ರರಂಗದಲ್ಲಿ ತಲೆಮಾರುಗಳ ಇತಿಹಾಸ ಹೊಂದಿರುವ ಕುಟುಂಬಗಳಲ್ಲಿ ಕೆಲವು ಮಾತ್ರ ಇಂದಿಗೂ ಸಕ್ರಿಯವಾಗಿವೆ. ಅವುಗಳಲ್ಲಿ ಹಿರಿಯ ನಿರ್ದೇಶಕ,  ನಿರ್ಮಾಪಕರಾಗಿದ್ದ ಶಂಕರ್ ಸಿಂಗ್ ಕುಟುಂಬವೂ ಒಂದು. ಶಂಕರ್ ಸಿಂಗ್ ಪುತ್ರಿಯಾದ ವಿಜಯಲಕ್ಷ್ಮೀ ಸಿಂಗ್ ಅವರು ಬಾಲನಟಿಯಾಗಿ, ಸಿನಿಮಾ ನಾಯಕಿಯಾಗಿ ಮತ್ತು ನಿರ್ದೇಶಕಿಯಾಗಿ ಗುರುತಿಸಲ್ಪಟ್ಟವರು. ಆದರೆ `ಜೊತೆ ಜೊತೆಯಲಿ' ಎನ್ನುವ ಒಂದು ಧಾರಾವಾಹಿಯ ಮೂಲಕ ಕಿರುತೆರೆ ನಟಿಯಾಗಿಯೂ ಜನಪ್ರೀತಿ ಪಡೆದಿದ್ದಾರೆ. ಧಾರಾವಾಹಿ, ಸಿನಿಮಾ ಮತ್ತು ಲಾಕ್ಡೌನ್ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮನಸು ತೆರೆದು ಹಂಚಿಕೊಂಡ ಒಂದಷ್ಟು ವಿಚಾರಗಳು ಇಲ್ಲಿವೆ.
 

Actress Director Vijayalakshmi singh exclusive Interview
Author
Bengaluru, First Published Jul 24, 2020, 5:04 PM IST

ಕನ್ನಡ ಚಿತ್ರರಂಗದಲ್ಲಿ ತಲೆಮಾರುಗಳ ಇತಿಹಾಸ ಹೊಂದಿರುವ ಕುಟುಂಬಗಳಲ್ಲಿ ಕೆಲವು ಮಾತ್ರ ಇಂದಿಗೂ ಸಕ್ರಿಯವಾಗಿವೆ. ಅವುಗಳಲ್ಲಿ ಹಿರಿಯ ನಿರ್ದೇಶಕ,  ನಿರ್ಮಾಪಕರಾಗಿದ್ದ ಶಂಕರ್ ಸಿಂಗ್ ಕುಟುಂಬವೂ ಒಂದು. ಶಂಕರ್ ಸಿಂಗ್ ಪುತ್ರಿಯಾದ ವಿಜಯಲಕ್ಷ್ಮೀ ಸಿಂಗ್ ಅವರು ಬಾಲನಟಿಯಾಗಿ, ಸಿನಿಮಾ ನಾಯಕಿಯಾಗಿ ಮತ್ತು ನಿರ್ದೇಶಕಿಯಾಗಿ ಗುರುತಿಸಲ್ಪಟ್ಟವರು. ಆದರೆ `ಜೊತೆ ಜೊತೆಯಲಿ' ಎನ್ನುವ ಒಂದು ಧಾರಾವಾಹಿಯ ಮೂಲಕ ಕಿರುತೆರೆ ನಟಿಯಾಗಿಯೂ ಜನಪ್ರೀತಿ ಪಡೆದಿದ್ದಾರೆ. ಧಾರಾವಾಹಿ ಮತ್ತು ಲಾಕ್ಡೌನ್ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮನಸು ತೆರೆದು ಹಂಚಿಕೊಂಡ ಒಂದಷ್ಟು ವಿಚಾರಗಳು ಇಲ್ಲಿವೆ.

ಶಶಿಕರ ಪಾತೂರು

ಲಾಕ್ಡೌನ್ ಮೂಲಕ ಮನೆ ಸೇರಿಕೊಂಡ ಅನುಭವ ಹೇಗಿತ್ತು?

ಕೊರೊನಾದ ಒಂದು ಪಾಸಿಟಿವ್ ಸೈಡ್ ಮನೆಯ ಸದಸ್ಯರು ಆತ್ಮೀಯರಾಗುವಂತೆ ಮಾಡಿದ್ದು! ಉದಾಹರಣೆಗೆ ನಮ್ಮನೆಯಲ್ಲಿ ಮೂರು ಜನರೇಶನ್ನವರು ಇದ್ದೇವೆ. ಮೊದಲೆಲ್ಲ ನಮ್ಮಮ್ಮ ತಮ್ಮ ಹಳೆಯ ನೆನಪುಗಳನ್ನೆಲ್ಲ ಹೇಳುವಾಗ  ನನ್ನ ಮಕ್ಕಳಿಗೆ ಕುಳಿತು ಕೇಳುವ ವ್ಯವಧಾನವೇ ಇರಲಿಲ್ಲ. ಲಾಕ್ಡೌನ್ ಶುರುವಾದ ಬಳಿಕ ಬೇರೆಲ್ಲೂ ಹೋಗಲು ಸಾಧ್ಯವಾಗದೆ, ಅಮ್ಮನ ಮುಂದೆ ಕುಳಿತು ಅವರ ಅನುಭವದ ಮಾತು ಕೇಳಿದರು. ಕೇಳುತ್ತಾ ಹೋದಂತೆ ಅವರಿಗೆ ತಾವು ಎಷ್ಟೆಲ್ಲ ವಿಚಾರಗಳನ್ನು ಅರಿತೇ ಇರಲಿಲ್ಲವಲ್ಲ ಎನ್ನುವ ರಿಯಲೈಸೇಶನ್ ಆಗಿದೆ. ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿ ಪಡುವುದನ್ನು ಕಲಿತಿದ್ದಾರೆ. ನಾನು ವರ್ಷಾರಂಭದಲ್ಲಿ ಏನೇನೋ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ನಮ್ಮ ಕೈಲಿ ಏನೇನೂ ಇಲ್ಲ ಎನ್ನುವ ವಾಸ್ತವದ ಅರಿವಾಯಿತು. ಮೊದಲು ಯಾವುದಕ್ಕೂ ಟೈಮ್ ಇರಲಿಲ್ಲ. ಲೈಫ್ ರೇಸ್ ತರಹ ಇತ್ತು. ನಾನೆಲ್ಲೋ, ಜಗದೀಶ್ ಎಲ್ಲೋ ಇರುತ್ತಿದ್ದೆವು. ಮನೆಗೆ ಬಂದಾಗಲೂ ಮಕ್ಕಳು ರೆಗ್ಯಲುರಾಗಿ ಸಿಗ್ತಿರಲಿಲ್ಲ. ಕೆಲವೊಮ್ಮೆ ಬರೇ ಫೋನ್ ಮಾತುಕತೆಗೆ ಸೀಮಿತವಾಗಬೇಕಿತ್ತು. ಹೀಗೆ ಒಂಥರಾ ಕನೆಕ್ಟಿವಿಟಿಯೇ ಕಳೆದುಕೊಂಡಂತಾಗಿತ್ತು. ಒಟ್ಟಿಗೆ ಊಟ ಮಾಡೋದು ಎಲ್ಲವೂ ಹೊರಟು ಹೋಗಿತ್ತು. ಈಗ ಎಲ್ಲವೂ ವಾಪಾಸು ಬಂತು. ನಾನು ಯಾವುದೋ ಪುಸ್ತಕ ಓದುವುದು, ಅದು ಚೆನ್ನಾಗಿದ್ರೆ ಅದನ್ನು ಜಗದೀಶ್ ಗೆ ರೆಫರ್ ಮಾಡುವುದು, ಅವರು ಓದುವುದು, ಅಂತ್ಯಾಕ್ಷರಿ ಆಡೋದು, ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರೂ ಸೇರಿಕೊಂಡು ಮನೆಯೆಲ್ಲ ಕ್ಲೀನ್ ಮಾಡಿದ್ವಿ. ಒಟ್ಟಿನಲ್ಲಿ ನಮ್ಮ ನಮ್ಮ ಕೆಲಸಗಳಿಗೆ ತುಂಬ ಟೈಮ್ ಇದೆ ಅನಿಸಿದೆ. 

'ಕೋತಿಗಳು ಸಾರ್ ಕೋತಿಗಳು' ಚಿತ್ರದ ಈ ಪುಟ್ಟ ಹುಡಗಿ ಈಗ ಫುಲ್ ಹಾಟ್ ಬೆಡಗಿ...!

ಆದರೆ ಎಲ್ಲರಿಗಿಂತ ಮೊದಲು ನೀವೇ ವೃತ್ತಿ ಕ್ಷೇತ್ರಕ್ಕೆ ಮರಳಿದ್ದೀರಿ.. ಅಲ್ವಾ? 

ಹೌದು. ಆದರೆ ಅದು `ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಕಾರಣ ಸಾಧ್ಯವಾಯಿತು. ಲಾಕ್ಡೌನ್ ಎರಡನೇ ಸ್ಟೇಜಲ್ಲಿ ಮನೆ ಕೂಡ ಬೋರಾಗಿತ್ತು. ಯಾವುದರ ಬಗ್ಗೆಯೂ ಖಚಿತತೆ ಇರದೆ ಆತಂಕ ಶುರುವಾಗಿತ್ತು. ಆದರೆ ಈ ಹಂತದಲ್ಲಿ ಎಲ್ಲವನ್ನು ಅದರ ಪಾಡಿಗೆ ಬಿಟ್ಟುಕೊಂಡು ಸುಮ್ಮನಿದ್ದೆ. ಯಾವಾಗ ಬೇಕಾದರೂ ಏಳಬಹುದು, ಯಾವಾಗ ಬೇಕಾದರೂ ಮಲಗಬಹುದು ಎನ್ನುವಷ್ಟು ಲೈಫ್ ಡಿಸಾರ್ಡರ್ ಆಗಿತ್ತು. ಏಳುವಾಗ ಅರ್ಧ ಗಂಟೆ ತಡವಾದ್ರೂ ತೊಂದರೆ ಏನಿಲ್ಲ ಎನ್ನುವಂತಾಗಿತ್ತು. ಆದರೆ `ಜೊತೆ ಜೊತೆಯಲಿ' ಮಾಡುವಾಗ ಕಿರುತೆರೆಯ ಸಮಸ್ಯೆಗಳ ಬಗ್ಗೆ ಅನುಭವವಾಯಿತು. ಯಾಕೆಂದರೆ ಇದು ನನ್ನ ಮೊದಲ ಧಾರಾವಾಹಿ. ನಾಯಕ ಆರ್ಯವರ್ಧನ್ ತಾಯಿಯ ಪಾತ್ರ ನನ್ನದು. ಅವರಿಗೆ ದಿನವೂ ಶೂಟ್ ಮಾಡಿ ಕಳುಹಿಸಬೇಕಾದ ಅನಿವಾರ್ಯತೆ ಇತ್ತು. ಲಾಕ್ಡೌನ್ ಬಳಿಕ  ನಡೆದ 20 ದಿನಗಳ ನಿರಂತರ ಚಿತ್ರೀಕರಣದಲ್ಲಿ ನಾನು ಕೂಡ ಭಾಗಿಯಾದೆ. ಇದೀಗ ದಿನವೂ ಹೊಸ ಹೊಸ ಸಂಚಿಕೆಗಳು ಬರುತ್ತಿವೆ. ಆರ್ಯವರ್ಧನ್ ಕಚೇರಿಯಲ್ಲಿ ನನ್ನ ಮತ್ತು ನಾಯಕಿಯ ಭೇಟಿಯ ಸಂಚಿಕೆಗಾಗಿ ಜನಗಳು ತಿಂಗಳಿನಿಂದ ಕಾಯುತ್ತಿದ್ದರು. ಪರಿಚಿತರಂತೂ ನನಗೆ ಮೆಸೇಜ್ ಮಾಡಿ ಕೇಳೋರು ಮುಂದೇನಾಗುತ್ತೆ ಅಂತ. ಹಾಗೆ ನಾನು ಕೂಡ ಉತ್ಸಾಹದಿಂದಲೇ ಶೂಟಿಂಗಲ್ಲಿ ಪಾಲ್ಗೊಂಡಿದ್ದೇನೆ. 

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು

ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗಳೇನೂ ಆಗಿಲ್ಲ ತಾನೇ?

ನಾನು ಒಳ್ಳೆಯ ಯುನಿಟ್ ನಲ್ಲಿದ್ದೇನೆ. ಇಲ್ಲಿ ಎಲ್ಲವೂ ತುಂಬ ವ್ಯವಸ್ಥಿತವಾಗಿವೆ. ಐದೈದು ಬಾರಿ ಬಂದು ಟೆಂಪೊರೇಚರ್ ಚೆಕ್ ಮಾಡ್ತಾರೆ. ಬೆಳಿಗ್ಗೆ ಮಾಡಿದ್ರಲ್ಲಪ್ಪ ಅಂದರೆ, ಇಲ್ಲ ಮೇಡಂ ಚಾನೆಲ್ ಗೆ ಕಳಿಸಬೇಕು ಅಂತಾರೆ. ಬೆಳಿಗ್ಗೆಯೊಮ್ಮೆ, ಹನ್ನೆರಡು ಗಂಟೆಗೊಮ್ಮೆ, ಎರಡು ಗಂಟೆಗೊಮ್ಮೆ ಹೀಗೆ ಐದು ಬಾರಿ ಆರೋಗ್ಯ ತಪಾಸಣೆ ನಡೆಯುತ್ತದೆ. ಅದೇ ರೀತಿ  ಸ್ಯಾನಿಟೈಸ್ ಮಾಡಿ, ವಾತಾವರಣ ಕ್ಲೀನಾಗಿಟ್ಟಿರುತ್ತಾರೆ. ನಾವು ಕೂಡ ಅಲರ್ಟಾಗಿಯೇ ಇರುತ್ತೇವೆ. ಹದಿನೆಂಟರಿಂದ ಇಪ್ಪತ್ತರಷ್ಟು ಜನ ಒಬ್ಬೊಬ್ಬರು ಮೂರು ಮೂರು ಕೆಲಸ ಮಾಡಿಕೊಳ್ತಾ ಕಡಿಮೆ ಜನರು ಇರಬೇಕಾದ ನಿಯಮವನ್ನು ಕೂಡ ಪಾಲನೆ ಮಾಡಲಾಗುತ್ತಿದೆ. ಅದರಾಚೆ ನಾನು ಜಾಸ್ತಿ ಯೋಚಿಸುವುದಿಲ್ಲ. ಯಾಕೆಂದರೆ ಒಂದು ಸಲ ಆ ಬಗ್ಗೆ ಯೋಚಿಸಿದರೆ ಆತಂಕ ಮೂಡಿ ಪಾತ್ರವನ್ನು ನಿಭಾಯಿಸುವುದೇ ಕಷ್ಟವಾಗಿ ಬಿಡಬಹುದು. ನಾನು ಮೇಕಪ್ ಹಾಕಿರುವ ಕಾರಣ ಕಲಾವಿದೆಯಾಗಿ ಮಾಸ್ಕ್ ಹಾಕುವಂತಿಲ್ಲ.  ಗ್ಲೌಸ್ ಹಾಕುವಂತಿಲ್ಲ. ಅದನ್ನೇ ಆಳವಾಗಿ ಯೋಚಿಸಿ ಕುಳಿತರೆ ನಟಿಸುವಂತಿಲ್ಲ. ಅದಕ್ಕೆ ನಾನು ಯೋಚಿಸಲ್ಲ. ಕೇರ್ ಆಗಿರುತ್ತೇನೆ. ಮುಂಜಾಗ್ರತೆ ಬಿಟ್ಟು ಏನನ್ನೂ ಮಾಡುವುದು ನಮ್ಮ ಕೈಲಿಲ್ಲ. ಯಾಕೆಂದರೆ ಸುಮ್ಮನೆ ಮನೆಯಲ್ಲೇ ಕುಳಿತವರಿಗೂ ಕೊರೊನಾ ಸೋಂಕು ಬಂದ ಉದಾಹರಣೆ ನಮ್ಮೆದುರೇ ಇದೆ. ಒಟ್ಟಿನಲ್ಲಿ ಇರುವಷ್ಟು ಕಾಲ ನಮ್ಮಿಂದಾಗುವಷ್ಟು ಕೆಲಸ ಮಾಡುವುದಷ್ಟೇ ನಮ್ಮ ಕೈಯ್ಯಲ್ಲಿರೋದು.

Follow Us:
Download App:
  • android
  • ios