ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಲ್ಲಿ ಕುತೂಹಲದ ಜೊತೆಗೆ ಗೊಂದಲ ಕೂಡ ಸೃಷ್ಟಿಸಿದೆ. ಆರ್ಯವರ್ಧನ್ ಸಂಜಯ್ ಪಾಟೀಲ್ ಆಗಿ ಬದಲಾಗುವುದು, ಅನುಗೆ ಆರ್ಯ ಬೇಕಾ ಅಥವಾ ಸಂಜಯ್ ಪಾಟೀಲ್ ಬೇಕಾ? ಝೇಂಡೆ ಅರ್ಯಗೆ ಸಹಾಯ ಮಾಡ್ತಿದ್ದಾನಾ, ಇಲ್ವವೋ ಎಂಬುದರ ಬಗ್ಗೆ ಸ್ಪಷ್ಟ ಕ್ಲಾರಿಟಿ ಸಿಕ್ತಾ ಇಲ್ಲ....

'ಜೊತೆ ಜೊತೆಯಲಿ' ರಾಜನಂದಿನಿ ಪಾತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಹಾಟ್‌ ನಟಿ? 

ಅರ್ಯವರ್ಧನ್ ಆಗಾಗ ಸಂಜಯ್ ಪಾಟೀಲ್ ಆಗಿ ಬದಲಾಗುವುದು ಝೇಂಡೆಗೆ ಮಾತ್ರ ಗೊತ್ತಿರುವ ವಿಚಾರ. ಗುಡ್‌ ನೈಟ್‌ ಹೇಳಿ ಆರ್ಯವರ್ಧನ್‌ ಬೆಡ್‌ರೂಮ್‌ಗೆ ಹೋದರೆ, ಮಧ್ಯ ರಾತ್ರಿ ಸಂಜಯ್ ಪಾಟೀಲ್‌ ಆಗಿ ಹೊರ ಬರುತ್ತಾರೆ. ಇದನ್ನು ಸೂಕ್ಷವಾಗಿ ಗಮನಿಸಿದ ಮಾನ್ಸಿ, ಸತ್ಯ ಹೇಳಿದರೂ ಮನೆಯಲ್ಲಿ ಯಾರು ನಂಬುತ್ತಿಲ್ಲ. ಸಂಜಯ್ ಪಾಟೀಲ್ ಯಾರು? ಅವರ ತಾಯಿ ಯಾರು? ಹೆಂಡತಿಗೆ ಏನಾಗಿದೆ? ಆರ್ಯವರ್ಧನ್ ಆಗಿ ಬದಲಾಗಲು ಕಾರಣ ಏನೆಂದು ಪತ್ತೆ ಹಚ್ಚಲು ಅನು ಸೌದತ್ತಿ ಕಡೆ ಹೊರಟಿದ್ದಾಳೆ. 

ಒಂದೊಂದೇ ಸತ್ಯ ಹೊರ ಬರುತ್ತಿದ್ದಂತೆ, ಅರ್ಯವರ್ಧ ಪತ್ನಿ ಬಗ್ಗೆ ಒಂದೆರಡು ತಿಂಗಳಲ್ಲಿ ವೀಕ್ಷಕರಿಗೆ ಪರಿಚಯ ಮಾಡಿಕೊಡುವುದರ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಹೇಳಿದ್ದರು. 'ನಿನ್ನಿಂದಲೇ' ನಟಿ ಎರಿಕಾ ಫರ್ನಾಂಡಿಸ್ ಬರಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡಿತ್ತು. ಆನಂತರದ ದಿನಗಳಲ್ಲಿ ಕೇಳಿ ಬಂದಿದ್ದು 'ರಾಧಾ ರಮಣ' ಹಾಗೂ 'ಗಾಂಧಾರಿ' ಖ್ಯಾತಿಯ ಕಾವ್ಯಾ ಗೌಡ ಹೆಸರು. ವೀಕ್ಷಕರು ಕೂಡ ಕಾವ್ಯಾನೇ ನಮ್ಮ ರಾಜನಂದಿನಿ ಎಂದು ಭಾವಿಸಿದ್ದರು. ಆದರೆ ಈಗ ಮತ್ತೊಂದು ಹೊಸ ಹೆಸರು ಹರಿದಾಡುತ್ತಿದೆ. ಅವರೇ ಕವಿತಾ ಗೌಡ.

'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಿನ್ನು ಅಲಿಯಾಸ್ ಕವಿತಾ ಗೌಡ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇತ್ತೀಚಿಗೆ ಚಂದನ್ ಕುಮಾರ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕವಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಕೆಲವರಿಗೆ ಕವಿತಾನೇ ರಾಜನಂದಿನಿ ಆಗಬೇಕು, ಇನ್ನು ಕೆಲವರಿಗೆ ಕಾವ್ಯ ರಾಜನಂದಿನಿ ಆಗಬೇಕು. 

ರಾಜನಂದಿನಿ ಪಾತ್ರಕ್ಕೆ ಯಾರು ಸೂಕ್ತ ಎಂಬುದನ್ನು ನಾವು ಪರದೆ ಮೇಲೆ ಕಂಡ ಬಳಿಕವೇ ನಿರ್ಧಾರ ಮಾಡಬೇಕು ಎನ್ನುತ್ತಾರೆ 'ಜೊತೆ ಜೊತೆಯಲಿ' ಧಾರಾವಾಹಿಯ ಪ್ರೇಮಿಗಳು....