ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಧಾರಾವಾಹಿ 'ಜೊತೆ ಜೊತೆಯಲಿ'ಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಬದುಕಿನ ಮರೆಯಲಾಗದ ಘಟನೆಯೊಂದರ ಬಗ್ಗೆ ಹೇಳಿ ಕೊಂಡಿದ್ದಾರೆ. 

ಹೊಸ 'ಸಿನಿ ಮನೆ' ಸೇರುವ ಬಗ್ಗೆ ಅನು ಸಿರಿಮನೆ ಮಾತು..!

ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ನಟಿ ಮೇಘಾ ಶೆಟ್ಟಿ ನಟ ಧನಂಜಯ್ ಅವರಿಂದ ಪ್ರಶಸ್ತಿ ಪಡೆದರು. ನಂತರ ಮಾತನಾಡಿ, ತಮ್ಮ ಸ್ವಂತ ಅಣ್ಣನನ್ನು ನೆನೆದು ಕಣ್ಣೀರಿಟಿದ್ದಾರೆ. ಎಂದೂ ಮರೆಯಲಾಗದ ಘಟನೆ ಬಗ್ಗೆ ನೋವು ಹೇಳಿ ಕೊಂಡಿದ್ದಾರೆ. 

ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು ಅಣ್ಣನನ್ನು ನಟಿ ಮೇಘನಾ ಶೆಟ್ಟಿ. ಡಾಕ್ಟರ್ ರಾಜ್‌ಕುಮಾರ್‌ ಸಾವಿನ ದಿನ ಪಾರ್ಥಿವ ಶರೀರವನ್ನು ನೋಡಲು ಅವರ ಅಣ್ಣನೂ ಎಲ್ಲ ಅಭಿಮಾನಿಗಳಂತೆಯೇ ಹೋಗಿದ್ದರಂತೆ. ಆ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ತುಂಬಿಕೊಂಡಿದ್ದ ಕಾರಣ ಪೊಲೀಸರು ನಿಯಂತ್ರಿಸಲು ಗೋಲಿಬಾರ್ ಮಾಡಬೇಕಾಯಿತು. ಆದರೆ ವಿಧಿಯ ಆಟವೇ ಬೇರೆ ಇತ್ತು. ಆ ದಿನ ಗೋಲಿಬಾರಿನಿಂದ ಮೇಘಾ ಶೆಟ್ಟಿ ಅವರ ಅಣ್ಣ, ಸ್ಥಳದಲ್ಲಿಯೇ ಕೊನೆಯುಸಿರೆಳೆದರು ಎಂದು ನೋವು ಹಂಚಿ ಕೊಂಡಿದ್ದಾರೆ. 

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು 

ಸಿನಿಮಾ, ರಂಗಭೂಮಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಇಂದು ಮೇಘಾ ಶೆಟ್ಟಿ ಅವರ ತುಂಬಾನೇ ಸಂತೋಷವಾಗಿದ್ದರಂತೆ. ಅಣ್ಣನ ಸ್ಥಾನ ನೀಗಿಸಲು ಮೇಘಾ ಶೂಟಿಂಗ್‌ ಸೆಟ್‌ನಲ್ಲಿ ಪ್ರತಿಯೊಬ್ಬರನ್ನೂ ಅಣ್ಣ ಎಂದೇ ಮಾತನಾಡಿಸುತ್ತಾರಂತೆ.

ಒಟ್ಟಿನಲ್ಲಿ ದುಃಖ ಎನ್ನುವುದು ಮರಕ್ಕಲ್ಲ, ಮನುಷ್ಯನಿಗೇ ಬರುವುದು. ಪ್ರತಿಯೊಬ್ಬರೂ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ನೋವನ್ನು ಅನುಭವಿಸಿರುತ್ತಾರೆ.