ಜೀ ಕನ್ನಡ ವಾಹಿನಿಯಲ್ಲಿ ಇತಿಹಾಸ ಸೃಷ್ಟಿಸಿದ ಧಾರಾವಾಹಿ  'ಜೊತೆ ಜೊತೆಯಲಿ' ದಿನೇ ದಿನೇ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಕೊರೋನಾ ಲಾಕ್‌ಡೌನ್‌ ಕಾರಣದಿಂದ ಚಿತ್ರೀಕರಣವು ಸದ್ಯ ರದ್ದಾಗಿದ್ದು ಏಪ್ರಿಲ್‌ 2ರಿಂದ ಮೊದಲ ಸಂಚಿಕೆಯಿಂದ ಮರುಪ್ರಸಾರ ಮಾಡಲಾಗುತ್ತಿದೆ.  

ಮನೆಯಲ್ಲೇ ಲಾಕ್‌ಡೌನ್‌ ಆಗಿರುವ ಆರ್ಯವರ್ಧನ್‌ ತಮ್ಮ ಜೀವನದ ಸಿಹಿ ನೆನಪುಗಳನ್ನು ಮೆಲಕು ಹಾಕುತ್ತಾ ಹೊಸ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅನಿರುದ್ಧ್  ಅವರು ತಮ್ಮ ಮದುವೆ ಕಾರ್ಯಕ್ರಮದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ

ಹೌದು! ಮುಂಬೈನ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅನಿರುದ್ಧ್  ಬೆಂಗಳೂರಿನ ಕಂಪನಿಯೊಂದರಲ್ಲಿ ಇಂಟೀರಿಯರ್‌ ಡಿಸೈನರ್‌ ಆಗಿ ಕೆಲಸ ಆರಂಭಿಸುತ್ತಾರೆ ಅಷ್ಟೇ ಅಲ್ಲದೇ  ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ವಿಷ್ಣುವರ್ಧನ್‌ ಅವರ ಅಣ್ಣ ರವಿಕುಮಾರ್‌ ನಿರ್ದೇಶನದ  'ಹಯವದನ' ನಾಟಕದಲ್ಲಿ ಆನಿರುದ್ಧ್  ಅಭಿನಯಿಸುತ್ತಾರೆ.  ಈ ನಾಟಕ ನೋಡಲು ವಿಷ್ಣು  ದಾದಾ ಹೋದಾಗ ಪುತ್ರಿ ಕೀರ್ತಿ ಅವರನ್ನು ಕೂಡ ಜೊತೆಯಲ್ಲಿ  ಕರೆದುಕೊಂಡು ಹೋಗಿರುತ್ತಾರೆ, ಅನಿರುದ್ಧ್  ಅವರ ಅಭಿನಯವನ್ನು ಮೆಚ್ಚಿಕೊಂಡು ಶಂಕರ್‌ನಾಗ್‌ಗೆ ಹೋಲಿಸುತ್ತಾರೆ.

 

ಆನಂತರ ಕೀರ್ತಿ ಅವರಿಗೆ ಮದುವೆ ಮಾಡುವ ಸಮಯ ಬಂದಾಗ  ವಿಷ್ಣುವರ್ಧನ್‌ ಅವರು ಅನಿರುದ್ಧ್  ರನ್ನು ಅಳಿಯನಾಗಿ ಕುಟುಂಬಕ್ಕೆ ಬರ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡುತ್ತಾರೆ.ಈ ಸಮಯದಲ್ಲಿ ಅನಿರುದ್ಧ್ ತಮ್ಮ ಎರಡನೇ ಸಿನಿಮಾ ಶುರು ಮಾಡುತ್ತಿದ್ದರಂತೆ. ಆಗ ವಿಷ್ಣುದಾದ ಮದುವೆ ಬಗ್ಗೆ ಅನಿರುದ್ಧ ಬಳಿ ಕೇಳಿದಾಗ  'ನಾನು ಮಧ್ಯಮವರ್ಗದವನು ನಿಮ್ಮ ಮಗಳನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದೀರಾ ನನ್ನ ಜೊತೆ ಬದುಕೋದು ಅವರಿಗೆ ಕಷ್ಟವಾಗಬಹುದು' ಎಂದು ಹೇಳಿದಾಗ  ವಿಷ್ಣುವರ್ಧನ್‌ 'ನಾನು ಭಾರತಿ ಅವರನ್ನು ಮದುವೆಯಾದಾಗ  ಹೀಗೆ ಇದ್ದೆ, ನೀವು ಒಳ್ಳೆಯ ವ್ಯಕ್ತಿ ಜನರ ಕಣ್ಣು ಸುಳ್ಳು ಹೇಳೋದಿಲ್ಲ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಾ ಎಂಬ ನಂಬಿಕೆಯಿದೆ' ಎಂದು ಹೇಳಿದ್ದರಂತೆ.

ಕೌಟುಂಬಿಕ ಸಂಭ್ರಮಗಳ ಜೊತೆ ಜೊತೆಯಲಿ..!

ಅನಿರುದ್ಧ್  ಹಾಗೂ ಕೀರ್ತಿ ದಂಪತಿಗೆ ಜೇಷ್ಠವರ್ಧನ್‌ ಹಾಗೂ ಶ್ಲೋಕ ಎಂಬ ಮಕ್ಕಳಲಿದ್ದಾರೆ. ಇತ್ತೀಚಿಗೆ ಮಕ್ಕಳು ಡ್ಯಾನ್ಸ್  ಮಾಡಿರುವ ವಿಡಿಯೋವನ್ನು ಅನಿರುದ್ಧ್  ಶೇರ್ ಮಾಡಿಕೊಂಡಿದ್ದರು , ಆ ವಿಡಿಯರ ಸೋಷಿಯಲ್ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿತ್ತು.