ಅಕಿ ಸುಖ ಕಂಡಾಳ, ಚಟಕ್ಕೆ ಪ್ರೀತಿ ಪ್ರೇಮ ಮಾಡ್ಬೇಡಿ: ಪತ್ನಿ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಸಂಜು ಬಸಯ್ಯ
ಜೋಡಿ ನಂ.1ನಲ್ಲಿ ಮಿಂಚುತ್ತಿರುವ ಸಂಜು ಬಸಯ್ಯ ಮತ್ತು ಪತ್ನಿ ಪಲ್ಲವಿ. ಸಂಜು ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...
ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಜೋಡಿ ನಂ 1 ಸೀಸನ್ 2 ರಿಯಾಲಿಟಿ ಶೋನಲ್ಲಿ ಈ ವರ್ಷ ಕಾಮಿಡಿ ಕಿಲಾಡಿಗಳ ಸ್ಪರ್ಧಿ ಸಂಜು ಬಸಯ್ಯ ಭಾಗಿಯಾಗಿದ್ದಾರೆ. ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು ಬಸಯ್ಯ ಮತ್ತು ಪಲ್ಲವಿ ಜೋಡಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ಸಂಜು ಕಣ್ಣೀರಿಟ್ಟ ವಿಡಿಯೋ ಸಖತ್ ವೈರಲ್ ಆಗಿದೆ.
'ಬಹಳಷ್ಟು ಜನ ನನ್ನನ್ನು ಹೀಯಾಳಿಸಿ ಅವಮಾನ ಮಾಡಿದ್ದರು ಇದರಿಂದ ಪಲ್ಲವಿ ನನಗೆ ಸಂಗಾತಿಯಾಗಿ ಸಿಗುತ್ತಾಳೆ ಅನ್ನೋ ನಂಬಿಕೆ ನನಗಿರಲಿಲ್ಲ. ರೈತರು ಇಂದು ದುಡಿದು ನಾಳೆ ತಿನ್ನಬೇಕು ಅನ್ನೋ ಕೆಲಸದಲ್ಲಿ ಇದ್ದವರಿಗೆ ಹುಡುಗಿಯರು ಸಿಗುತ್ತಿಲ್ಲ ಇನ್ನು ನನಗೆ ಯಾರು ಹೆಣ್ಣು ಕಡುತ್ತಾರೆ ಎಂದು ಯೋಚನೆ ಮಾಡುತ್ತಿರುವಾಗ ಅನೇಕರು ನನ್ನನ್ನು ಹೀಯಾಳಿಸಿದ್ದರು. ಇಂದು ನಾನು ಬದುಕಿ ವೇದಿಕೆ ಮೇಲೆ ನಿಂತಿದ್ದೀನಿ ದುಡಿಯುತ್ತಿರುವೆ ಜೀವನ ಮಾಡುತ್ತಿರುವೆ ಅಂದ್ರೆ ಅದಕ್ಕೆ ನನ್ನ ತಂದೆ ಹಾಗೂ ಪತ್ನಿ ಪಲ್ಲವಿ ಕಾರಣ' ಎಂದು ಸಂಜು ಮಾತನಾಡಿದ್ದಾರೆ.
ಈ ಕನಸು ಹುಟ್ಟಿದ್ದು ಚಿರುನಿಂದ, ಈಗ ಕನಸು ನನಸಾಗಿದೆ: ಮೇಘನಾ ರಾಜ್
'ನಾನು ಕಲೆ ಕ್ಷೇತ್ರಕ್ಕೆ ಕಾಲಿಟ್ಟಗ ಅನೇಕರು ನನ್ನ ತಂದೆಗೂ ಅವಮಾನ ಮಾಡಿದ್ದರು ನಿಮ್ಮ ಮಗ ಗಿಡ್ಡ ಇದ್ದಾನೆ ಅವನಿಂದ ನೀನು ದುಡಿಮೆ ಮಾಡಿಸಿ ಹಣ ತಿನ್ನುತ್ತಿರುವೆ ಎಂದು. ನಾನು 7ನೇ ವರ್ಷದಿಂದ ಆರ್ಕೇಸ್ಟ್ರ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿ ದುಡಿಯಲು ಅರಂಭಿಸಿದೆ. ಅಲ್ಲಿಂದ ಅವಮಾನ ಆರಂಭವಾಗಿತ್ತು. ಪಲ್ಲವಿಯನ್ನು ಪ್ರೀತಿಸುತ್ತಿರುವಾಗ ಅನೇಕರು ಸೂಪರ್ ಜೋಡಿ ಹಾಗೆ ಹೀಗೆ ಎನ್ನುತ್ತಿದ್ದರು ಆದರೆ ಹಿಂದೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವಳು ಹಾಗೆ ಹೀಗೆ ಸುಖ ಕಂಡಾಳ ಎಂದು ಎಲ್ಲ ರೀತಿ ಮಾತನಾಡುತ್ತಿದ್ದರು. ಆಕೆ ನನ್ನ ಅರ್ಥ ಮಾಡಿಕೊಂಡಿದ್ದಾರೆ ನಾನು ಆಕೆ ಅರ್ಥ ಮಾಡಿಕೊಂಡಿದ್ದೀನಿ ಪ್ರೀತಿ ಪ್ರೇಮಾ ಚಟಕ್ಕೆ ಮಾಡಬೇಡಿ ಮನಸ್ಸಿನಿಂದ ಪ್ರೀತಿ ಮಾಡಿ' ಎಂದು ಸಂಜು ಮಾತನಾಡಿದ್ದಾರೆ.
ಶೂಟಿಂಗ್ ನಡುವೆ ನಿದ್ರೆಗೆ ಜಾರಿದ ಸೀತಾ; ರಾಮ ಬೆಡ್‌ಶೀಟ್ ಕೊಡಪ್ಪ ಎಂದು ಕಾಲೆಳೆದ ನೆಟ್ಟಿಗರು
'ಯಾಕೆ ಅವನನ್ನು ಲವ್ ಮಾಡುತ್ತೀಯಾ? ಅವನಿಂದ ನಿನಗೆ ಏನು ಸಿಗುತ್ತದೆ ಅವನ ಬಳಿ ಏನಿದೆ ಎಂದು ಅನೇಕರು ನಮ್ಮ ಹಿಂದೆ ಮಾತನಾಡುತ್ತಿದ್ದರು. ಸಂಜು ಕೂಡ ಬೇಡ ನಿನ್ನ ಜೀವನ ಚೆನ್ನಾಗಿರಲಿ ನನ್ನನ್ನು ಬಿಟ್ಟು ಬಿಡು ಎಂದರು. ನಿನ್ನನ್ನು ನಾನು ಅರ್ಥ ಮಾಡಿಕೊಂಡಿದ್ದೀನಿ ಮಂದಿ ಮಾತು ಯಾಕೆ ಕೇಳಬೇಕು ಎಂದು ಹೇಳಿದೆ. 2019ರಲ್ಲಿ ಒಂದು ಆರ್ಕೆಸ್ಟ್ರದಲ್ಲಿ ಮೊದಲು ಭೇಟಿ ಮಾಡಿದ್ದು...ಕಾರ್ಯಕ್ರಮಕ್ಕೆ ಸಣ್ಣ ಹುಡುಗ ಅಂದುಕೊಂಡೆ ಆದರೆ ಅವರು ನನಗಿಂತ 6 ತಿಂಗಳ ದೊಡ್ಡವರು. ಅದೇ ವರ್ಷ ನನಗೆ ಪ್ರಪೋಸ್ ಮಾಡಿದ್ದರು ನಾನು ಮೊದಲು ಬೇಡ ನೀನು ಹಣ ಮಾಡಿದ್ದೀರಿ ಕಾಮಿಡಿ ಕಿಲಾಡಿಗಳು ಕಾಲಿಡುತ್ತಿದ್ದೀರಿ ನಿಮ್ಮಿಂದ ನಾನು ಬಣ್ಣದ ಪ್ರಪಂಚಕ್ಕೆ ಬಂದು ಆಫರ್ ಪಡೆದೆ ಎನ್ನುವ ಮಾತುಗಳು ಕೇಳಿಸಿಕೊಳ್ಳುವುದು ಬೇಡ ಎನ್ನುತ್ತಿದ್ದೆ. ಒಪ್ಪಿಕೊಂಡು ಮೂರೇ ದಿನಕ್ಕೆ ಬ್ರೇಕಪ್ ಮಾಡಿಕೊಂಡ್ವಿ ಆದರೆ ಬಿಟ್ಟಿರಲು ಆಗಲಿಲ್ಲ. ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡ್ವಿ. ನಾನು ಸಿನಿಮಾದಲ್ಲಿ ಮಾಡಬೇಕು ಅನ್ನೋದು ತಾಯಿ ಆಸೆ ಆಗಿತ್ತು ಈಗ ಸಂಜು ಮೂಲಕ ಆ ಆಸೆ ಈಡೇರುತ್ತಿದೆ ಅವರಿಗೆ ಹೆಮ್ಮೆ ಇದೆ' ಎಂದಿದ್ದಾರೆ ಸಂಜು.