ಶೂಟಿಂಗ್ ನಡುವೆ ನಿದ್ರೆಗೆ ಜಾರಿದ ಸೀತಾ; ರಾಮ ಬೆಡ್‌ಶೀಟ್ ಕೊಡಪ್ಪ ಎಂದು ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸೀತಾ ವಿಡಿಯೋ. ನೆಮ್ಮದಿಯಾಗಿ ನಿದ್ರೆ ಮಾಡಲು ಬಿಡಿ ಎಂದ ನೆಟ್ಟಿಗರು....
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಮತ್ತು ಗಗನ್ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಸೀತಾ ಪಾತ್ರದಲ್ಲಿ ವೈಷ್ಣವಿ, ರಾಮ ಪಾತ್ರದಲ್ಲಿ ಗಗನ್. ಇನ್ನು ವೀಕ್ಷಕರ ಗಮನ ಸೆಳೆಯುತ್ತಿರುವುದು ಸಿಹಿ ಪುಟ್ಟ. S ಕ್ಯಾಪಿಟಲ್ ಹೇಳುವ ಶೈಲ್.
ತಿಂಗಳಿನಲ್ಲಿ ಸುಮಾರು 15 ದಿನ ನಾನ್ ಸ್ಟಾಪ್ ಚಿತ್ರೀಕರಣ ಮಾಡುವ ಈ ಸೆಲೆಬ್ರಿಟಿಗಳು ಶೂಟಿಂಗ್ ನಡುವೆ ಬ್ರೇಕ್ ಸಿಕ್ಕರೆ ನಿದ್ರೆ ಮಾಡುತ್ತಾರೆ.
ಹೀಗೆ ಒಂದು ದಿನ ಸೀತಾ ಶೂಟಿಂಗ್ ನಡುವೆ ನಿದ್ರೆ ಮಾಡುತ್ತಿರುತ್ತಾರೆ. ಸೆಟ್‌ನಲ್ಲಿರುವ ಯಾರೋ ಒಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ.
ಸೀತಾ ಮತ್ತು ರಾಮ ಕಾಂಬಿನೇಷನ್ ಅದ್ಭುತವಾಗಿದೆ ಎಂದು ವೀಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ ಸಿಹಿ ಸೂಪರ್.
ಅಗ್ನಿಸಾಕ್ಷಿ ಆದ್ಮೇಲೆ ವೈಷ್ಣವಿ ಬಿಗ್ ಬಾಸ್‌ನಲ್ಲಿ ಮಿಂಚಿದ್ದರು. ಇದಾದ ಮೇಲೆ ಯುಟ್ಯೂಬ್ ಚಾನೆಲ್‌ನಲ್ಲಿ ಬ್ಯುಸಿಯಾಗಿ ಬಿಟ್ಟರು ಈಗ ಸೀತಾ ರಾಮ ಮೂಲಕ ಕಿರುತೆರೆ ಕಮ್ ಬ್ಯಾಕ್ ಮಾಡಿದ್ದಾರೆ.