Asianet Suvarna News Asianet Suvarna News

ಬದುಕೆಂಬ ಗಾಳಿಪಟಕ್ಕೆ ಅವನೇ ಸೂತ್ರ, ಎಷ್ಟು ವರ್ಣಿಸುವುದು ಅವನ ಪಾತ್ರ: ಅಪ್ಪನ ದಿನಕ್ಕೆ ಮನಮುಟ್ಟುವ ವಿಡಿಯೋ

ಜೂನ್​ 16 ವಿಶ್ವ ಅಪ್ಪನ ದಿನ. ಅಪ್ಪನ ಬಗ್ಗೆ ವರ್ಣಿಸುವ ಆತನ ಮಹತ್ವ ಸಾರುವ ಸೀರಿಯಲ್​ಗಳ ತುಣುಕುಗಳೊಂದಿಗೆ ಜೀ ವಾಹಿನಿ ವಿಶೇಷ ವಿಡಿಯೋ ರಿಲೀಸ್ ಮಾಡಿದೆ.

Zee Kannada has released a special video on World Fathers Day showing father role suc
Author
First Published Jun 16, 2024, 6:11 PM IST

ಇಂದು (ಜೂನ್​ 16) ವಿಶ್ವ ಅಪ್ಪನ ದಿನ ಆಚರಿಸಲಾಗುತ್ತಿದೆ. ಯಾಂತ್ರಿಕತೆಯ ಈ ಯುಗದಲ್ಲಿ   ಸಂಬಂಧಗಳನ್ನು ನೆನಪಿಸಿಕೊಳ್ಳುವಷ್ಟು ಸಮಯವೂ ಹಲವರಲ್ಲಿ ಇರುವುದಿಲ್ಲ. ಅದರಲ್ಲಿಯೂ ತಮ್ಮೆಲ್ಲ ಕಷ್ಟಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಜೀವನ ಮುಡುಪಿಡುವ ಅಪ್ಪ-ಅಮ್ಮ ಬಗ್ಗೆಯೂ ಕೇರ್​ ಮಾಡುವವರೇ ಇಲ್ಲ. ಇದಕ್ಕಾಗಿಯೇ ಅಮ್ಮನಿಗೊಂದು ದಿನ, ಅಪ್ಪನಿಗೆ ಒಂದು ದಿನ ಎಂದು ಪಾಶ್ಚಿಮಾತ್ಯರು ಮಾಡಿಕೊಂಡಿರುವ ಈ ದಿನಾಚರಣೆ ಸಂಬಂಧಗಳೇ  ಮುಖ್ಯವಾಗಿರುವ ಭಾರತದಲ್ಲಿ ಇಂದಿನ ಕಾಲಕ್ಕೆ ಪ್ರಸ್ತುತ ಎನಿಸುತ್ತಿದೆ. ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ಈ ವರ್ಷ ಜೂನ್​ 16ಕ್ಕೆ ಬಂದಿದೆ. ವಿಶ್ವಾದ್ಯಂತ ಬೇರೆ ಬೇರೆ ದಿನಗಳನ್ನು ಈ ದಿನವನ್ನು ಆಚರಿಸಲಾಗುತ್ತದೆ.  ತೈವಾನ್‌ನಲ್ಲಿ ಆಗಸ್ಟ್‌ 8 ರಂದು ಅಪ್ಪಂದಿರ ದಿನ ಆಚರಿಸಿದರೆ, ಕ್ರೊಯೇಷಿಯಾ, ಇಟಲಿ, ಪೋರ್ಚುಗಲ್ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ ಮಾರ್ಚ್ 19 ರಂದು ಫಾದರ್ಸ್‌ ಡೇ ಆಚರಿಸಲಾಗುತ್ತದೆ. ಥಾಯ್ಲೆಂಡ್‌ನಲ್ಲಿ ಡಿಸೆಂಬರ್‌ 5 ರಂದು ಮಾಜಿ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. 

ಪ್ರತಿ ದಿನವೂ ಅಪ್ಪ-ಅಮ್ಮನ ದಿನವೇ ಆದರೂ ಅವರು ನೀಡಿರುವ ಕೊಡುಗೆ, ಅವರ ತ್ಯಾಗ ಸ್ಮರಿಸುವುದಕ್ಕಾಗಿ ಈ ಒಂದು ದಿನ ವಿಶೇಷ ಎನಿಸಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವಾರು ಸೆಲೆಬ್ರಿಟಿಗಳು ಸೇರಿ ಬಹುತೇಕ ಮಂದಿ ಸೋಷಿಯಲ್​ ಮೀಡಿಯಾಗಳಲ್ಲಿ ಅಪ್ಪನ ಬಗ್ಗೆ ವಿವಿಧ ರೀತಿಯ ವರ್ಣನೆಗಳನ್ನು ಮಾಡಿ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಸಂಬಂಧಗಳಿಗೆ ಬೆಲೆ ಕೊಡುವ ಭಾರತದಲ್ಲಿ ಒಂದು ದಿನವನ್ನು ಈ ರೀತಿ ಆಡಂಬರದಿಂದ ಆಚರಿಸುವುದು ವಿಚಿತ್ರ ಎನಿಸಿದರೂ, ಇಲ್ಲು ಕೂಡ ಅದೆಷ್ಟೋ ಮನೆಯಲ್ಲಿ ಈ ಬಾಂಧವ್ಯವೇ ಇಲ್ಲವಾಗಿದೆ. ಅದಕ್ಕೆ ಸಾಕ್ಷಿಯಾಗಿ ನಿಂತಿರುವುದು ಮೂಲೆ ಮೂಲೆಗಳಲ್ಲಿ ತಲೆ ಎತ್ತುತ್ತಿರುವ ವೃದ್ಧಾಶ್ರಮಗಳು. ಇದರ ನಡುವೆಯೇ ಅಪ್ಪನ ದಿನ ಹಾಸ್ಯಾಸ್ಪದ ಎನ್ನಿಸುವುದು ನಿಜವಾದರೂ, ಈ ಒಂದು ದಿನವಾದರೂ ತಮ್ಮ ಅಪ್ಪನ ಬಗ್ಗೆ ನೆನಪಿಸಿಕೊಳ್ಳಲಿ ಎನ್ನುವ ಕಾರಣಕ್ಕೆ ಈ ದಿನ ಒಂದು ಕಾರಣವೂ ಆಗಬಹುದು ಎನ್ನುವುದು ಬಹುತೇಕರ ಅಭಿಪ್ರಾಯ.

ಸಮರ್ಥ್​ ಅಭಿನಯಕ್ಕೆ ಕಣ್ಣೀರಾದ ಅಭಿಮಾನಿಗಳು: ಕಣ್ಣಲ್ಲೇ ಮೋಡಿ ಮಾಡುವ ನಟನಿಗೆ ಮನಸೋತ ಫ್ಯಾನ್ಸ್​

ಅಪ್ಪನ ದಿನ ಹುಟ್ಟಿದ ಬಗ್ಗೆ ಹಲವಾರು ಕಥೆಗಳಿವೆ. ಒಂದೊಂದು ದಿನಕ್ಕೆ ಒಂದೊಂದು ರೀತಿಯ ಮಹತ್ವವಿದ್ದು, ಅದು ಆರಂಭಿಸಿರುವುದು ಹೇಗೆ, ಯಾವಾಗ ಎನ್ನುವುದು ತಿಳಿಯುವುದು ಕಷ್ಟವೇ. ಆದರೂ ತಮ್ಮದೇ ಆದ ರೀತಿಯಲ್ಲಿ ಈ ದಿನವನ್ನು ಅರ್ಥೈಸುವುದು ನಡೆದೇ ಇರುತ್ತದೆ. 1907ರಲ್ಲಿ ಪಶ್ಚಿಮ ವರ್ಜೀನಿಯಾದ ಮೊನೊಂಗಾಹ್‌ನಲ್ಲಿ ಗಣಿಗಾರಿಕೆ ದುರಂತವೊಂದು ನಡೆಯುತ್ತದೆ. ಈ ಸಂದರ್ಭ ಅಲ್ಲಿ ಕೆಲಸ ಮಾಡುತ್ತಿದ್ದ 361 ಜನ ಗಂಡಸರು ಸಾವನ್ನಪ್ಪುತ್ತಾರೆ. ಅವರಲ್ಲಿ 250 ಅಪ್ಪಂದರಿದ್ದರು. ಅವರ ಸಾವು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಅನಾಥರನ್ನಾಗಿ ಮಾಡಿತು. ಈ ಘೋರ ದುರಂತದ ನೆನಪಿಗಾಗಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಕಾರಣ ಏನೇ ಇದ್ದರೂ ಇಂಥದ್ದೊಂದು ದಿನ ಇಂದಿನ ಅಗತ್ಯವಾಗಿದೆ.

ಇದೀಗ ಜೀ ಕನ್ನಡ ವಾಹಿನಿ ಅಪ್ಪನ ದಿನದಂದು ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಹಲವು ಸೀರಿಯಲ್​ಗಳಲ್ಲಿ ಅಪ್ಪ ಮತ್ತು ಮಕ್ಕಳ ಬಾಂಧವ್ಯವನ್ನು ತೋರಿಸುವ ದೃಶ್ಯಗಳನ್ನು ತೋರಿಸಿ ಅಪ್ಪನ ಬಗೆಗಿನ ಕಾಳಜಿಯನ್ನು ಹೇಳಲಾಗಿದೆ. ಇಂದು ಸೀರಿಯಲ್​ಗಳು ಬಹುತೇಕದ ಮನಸ್ಸಿಗೆ ನಾಟುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಪ್ರಯತ್ನವನ್ನು ಜೀ ವಾಹಿನಿ ಮಾಡಲಾಗಿದೆ. ಸೀತಾರಾಮ, ಅಮೃತಧಾರೆ, ಲಕ್ಷ್ಮಿ ನಿವಾಸ ಸೇರಿದಂತೆ ಹಲವು ಸೀರಿಯಲ್​ಗಳಲ್ಲಿ ಅಪ್ಪ-ಮಕ್ಕಳ ಸಂಬಂಧವನ್ನು ಇಲ್ಲಿ ತೋರಿಸಲಾಗಿದೆ. ಬದುಕೆಂಬ ಗಾಳಿಪಟಕ್ಕೆ ಅವನೇ ಸೂತ್ರ, ಎಷ್ಟೆಂದು ವರ್ಣಿಸುವುದು ಅವನ ಪಾತ್ರ..‌! ಎಂದು ಶೀರ್ಷಿಕೆ ಇದಕ್ಕೆ ನೀಡಲಾಗಿದೆ. 
ಮಹಾನಟಿ ಫೈನಲ್​ಗೂ ಮುನ್ನವೇ ವಿನ್ನರ್​ ಘೋಷಿಸಿದ ಅಭಿಮಾನಿಗಳು! ಅಬ್ಬಬ್ಬಾ ಎಂಥ ಪ್ರತಿಭೆ...

Latest Videos
Follow Us:
Download App:
  • android
  • ios