ಭಾರತದಲ್ಲಿ ಪ್ರತಿ ವರ್ಷವೂ 2 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಅದರಲ್ಲೂ ತುಮಕೂರು ಹೆದ್ದಾರಿಯಲ್ಲಿ ಇತ್ತೀಚಿಗೆ ನಡೆದ ಬಸ್‌ ಅಪಘಾತ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ. ಒಂದು ತಿಂಗಳು ನಡೆಯುವ ಕಾರ್ಯಕ್ರಮ ಇದಾಗಿದ್ದು, ಫೆ.17ರಂದು ರಕ್ಷ್ ಭಾಗಿಯಾಗಿದ್ದರು.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಶೇ.70 ರಷ್ಟು ಯುವಜನಾಂಗ; ಬೆಚ್ಚಿ ಬೀಳಿಸುತ್ತಿದೆ ವರದಿ! 

ರಕ್ಷ್ ಫೋಸ್ಟ್:
'ಪ್ರತಿ ವರ್ಷ 1.50 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದರಿಂದ ಅನೇಕ ಕುಟುಂಬಗಳು ಆರ್ಥಿಕ ಹಾಗೂ ಭಾವನಾತ್ಮಕ ತೊಂದರೆಗಳಿಗೆ ಒಳಗಾಗುತ್ತಾರೆ. ಅಪಘಾತದಿಂದ ಕೈ ಕಾಲುಗಳು ಕಳೆದುಕೊಂಡರೆ, ತುಂಬಾನೇ ಕಷ್ಟವಾಗುತ್ತದೆ. ಹೀಗಾಗಿ ರಸ್ತೆ ಸುರಕ್ಷಿತವಾಗಿಸುವ ಅನಿವಾರ್ಯತೆ ಇದೆ.  ಈ ಸುರಕ್ಷಿತೆ ಕಾರ್ಯಕ್ರಮದಲ್ಲಿ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಕೈ ಜೋಡಿಸಬೇಕು. ಸುರಕ್ಷಿತ ರಸ್ತೆಗಳು ಅಗತ್ಯ ಎತ್ತಿ ತೋರಿಸುವ ಸಲುವಾಗಿ ಪ್ರತಿ ವರ್ಷ ದೇಶಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ,' ಎಂದು ರಕ್ಷ್‌ ಬರೆದುಕೊಂಡಿದ್ದಾರೆ.

ತುಮಕೂರಿನ ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತೆ ಕುರಿತು ಈ ಬಾರಿ ಒಂದು ತಿಂಗಳು ಕಾರ್ಯಕ್ರಮ ಮಾಡಲಾಗುತ್ತದೆ. ಈ ವಿಚಾರದ ಬಗ್ಗೆ ರಕ್ಷ್ ಖಾಸಗಿ ಚಾನೆಲ್‌ವೊಂದರ ವರದಿಯೊಂದರ ಜೊತೆ ಮಾತನಾಡಿದ್ದಾರೆ. 'ಸಾಮಾಜಿಕ ಕೆಲಸವಾದ್ದರಿಂದ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. 2000ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಕೆಲವರು ನಮ್ಮನ್ನು ನೋಡಲು ಬಂದಿದ್ದರು. ಅದರಲ್ಲಿ ಒಂದಿಬ್ಬರು ತಲೆ ಸುತ್ತಿ ಬಿದ್ದರು. ಬಿಸಿಲನ್ನೂ ಲೆಕ್ಕಿಸದೇ ಜನರು ನಮ್ಮನ್ನು ನಿಂತು ನೋಡಿದರು. ಇದು ನನಗೆ ಭಾವನಾತ್ಮಕವಾಗಿ ಕನೆಕ್ಟ್ ಆಯ್ತು,' ಎಂದು ಹೇಳಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Rakksh (@rakkshofficial)