ರಸ್ತೆ ಸುರಕ್ಷತಾ ಕಾರ್ಯಕ್ರಮಗಳು, ಕಠಿಣ ಟ್ರಾಫಿಕ್ ನಿಯಮ, ಪೊಲೀಸರ ಹದ್ದಿನ ಕಣ್ಣು, ಸಿಸಿಟಿವಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಲ್ಲ. ಇದೀಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರವವರ ಕುರಿತ ಅಂಕಿ ಅಂಶ ಆತಂಕ ಸೃಷ್ಟಿಸುತ್ತಿದೆ.
ಬೆಂಗಳೂರು(ಫೆ.16): ದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳಲ್ಲಿ ಶೇಕಡಾ 70 ರಷ್ಟು ಯುವಜನಾಂಗದವರಾಗಿರುವುದು ಬಹಳ ವಿಷಾಧನೀಯ ಸಂಗತಿಯಾಗಿದ್ದು, ಸೂಕ್ತ ಜಾಗೃತಿಯನ್ನು ಮೂಡಿಸುವ ಮೂಲಕ ಇದನ್ನ ತಡೆಗಟ್ಟಬೇಕಾಗಿದೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಹೇಳಿದರು.
ಹೆಬ್ಬಾಳ ಫ್ಲೈ ಓವರ್ ಬಳಿ ಸರಣಿ ಅಪಘಾತ; ಫುಲ್ ಟ್ರಾಫಿಕ್ ಜಾಮ್!
ಮೈಸೂರು ರಸ್ತೆಯಲ್ಲಿರುವ ಅರವಿಂದ್ ಲಿಮಿಟೆಡ್ ನ ಮಿಲ್ ನ ಆವರಣದಲ್ಲಿ ಇಂದು ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವತಿಯಿಂದ 32 ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸ್ತೆ ಅಪಘಾತಗಳ ಪರಿಣಾಮದಿಂದ ಅವರ ಕುಟುಂಬದವರು ಜೀವನ ಪೂರ್ತಿ ತೊಂದರೆಯನ್ನು ಅನುಭವಿಸುತ್ತಾರೆ. ತಾವು ತೀವ್ರ ನೋವನ್ನು ಅನುಭವಿಸುವುದಕ್ಕಿಂತ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಅಪಘಾತಗಳು ಆಗುವುದನ್ನು ತಡೆಗಟ್ಟಬೇಕು ಎಂದು ಹೇಳಿದರು.
ಸಿಎಂ ನಿವಾಸದ ಮುಂದೆ ಜಾಗ್ವಾರ್ ಕಾರು ಅಪಘಾತ; ವಾಹನ ಪುಡಿ ಪುಡಿ!
ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಶೇಕಡಾ 70 ರಷ್ಟು ಯುವಜನಾಂಗದವರಾಗಿದ್ದಾರೆ. ಇದು ಬಹಳ ಆಘಾತಕಾರಿ ಅಂಶವಾಗಿದೆ. ಕುಟುಂಬದ ಯುವ ಸದಸ್ಯರನ್ನು ಕಳೆದುಕೊಂಡು ಜನರು ಜೀವನಪೂರ್ತಿ ತೊಂಧರೆಯನ್ನು ಅನುಭವಿಸುತ್ತಾರೆ. ಈ ಹಿನ್ನಲೆಯಲ್ಲಿ ಜನರು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್ ಟಿ ಓ ಕೆ.ಎಸ್ ಸೌಂದರ್ಯ, ಸಹಾಯಕ ಆರ್ ಟಿ ಓ ರಾಜಣ್ಣ ಹೆಚ್, ಅರವಿಂದ್ ಲಿಮಿಟೆಡ್ ಸಿ ಓ ಓ ಪ್ರಕಾಶ್ ಪೊನ್ನುಸ್ವಾಮಿ ಭಾಗವಹಿಸಿದ್ದರು. ಜಾಗೃತಿ ಗೀತೆಗಳು, ಬೀದಿ ನಾಟಕಗಳ ಮೂಲಕ ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 16, 2021, 5:44 PM IST