ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ನಟಿ ಅಶ್ವಿನಿ ಫಿಟ್ನೆಸ್ ಸೀಕ್ರೆಟ್. ಬೆಳಗ್ಗೆ ಬೇಗ ಎದ್ದರೆ ದಿನವಿಡೀ ಆಕ್ಟಿವ್ ಆಗಿರುತ್ತಾರೆ.....
ಜೀ ಕನ್ನಡ ವಾಹಿನಿಯ ಜನಪ್ರಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ಮಿಂಚುತ್ತಿದ್ದ ಅಶ್ವಿನಿ ಇದ್ದಕ್ಕಿದ್ದಂತೆ ಸಣ್ಣಗಾಗಿರುವುದು ನೆಟ್ಟಿಗರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ಈ ಚೆಲುವೆ ಜಿಮ್ ಮತ್ತು ಜುಂಬಾ ಡ್ಯಾನ್ಸ್ ಯಾವುದೂ ಮಾಡದೆ ಸಣ್ಣಗಾಗಿದ್ದಾರೆ. ತಮ್ಮ ದಿನಚರಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆರತಿ ಪಾತ್ರದಲ್ಲಿ ಮಿಂಚುವಾಗ ತೆಲುಗು ಧಾರಾವಾಹಿಯಲ್ಲಿ ನಾಗಿಣಿ ಪಾತ್ರಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅಗ ಸಣ್ಣ ಆಗಲೇ ಬೇಕು ಎನ್ನುವ ಕಂಡಿಷನ್ ಇರುತ್ತದೆ. ಅತಿ ಕಡಿಮೆ ಸಮಯದಲ್ಲಿ ಅಶ್ವಿನಿ ತೂಕ ಇಳಿಸಿಕೊಂಡಿದ್ದಾರೆ.
ಹೌದು! ಜಿಮ್‌ಗೆ ಹೋಗದೆ ಯಾವುದೇ ರೀತಿ ವರ್ಕೌಟ್ ಮಾಡದೆ ಅಶ್ವಿನಿ ಸಿಕ್ಕಾಪಟ್ಟೆ ಸಣ್ಣಗಾಗಿರುವುದು. ಗಟ್ಟಿಮೇಳ ಧಾರಾವಾಹಿ ಮಾಡುವ ಸಮಯದಲ್ಲಿ 60 ಕೆಜಿ ತೂಕವಿದ್ದರು. ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಎದ್ದೇಳುತ್ತಾರೆ. ಎದ್ದ ಕೂಡಲೇ ಮನೆಯಲ್ಲಿ ಒಂದಿಷ್ಟು ವ್ಯಾಯಾಮ ಮಾಡುತ್ತಾರೆ, ದೇಹದ ಬೊಜ್ಜನ್ನು ಕರಗಿಸುವಂತ ವ್ಯಾಯಾಮಗಳನ್ನು ಮಾಡುತ್ತಾರೆ. ದಿನ ಬೆಳಗ್ಗೆ ಬೇಗ ಏಳುವುದರಿಂದ ಆರೋಗ್ಯ ಚೆನ್ನಾಗಿರುತ್ತಾರೆ ಹಾಗೂ ದಿನವಿಡೀ ಆಕ್ಟಿವ್ ಆಗಿರುತ್ತಾರೆ.
'ದೊಡ್ಡಮನೆ ಸೊಸೆ'ಗೆ ಬಂಪರ್ ಅಫರ್; ಗಗನ ಕೈಯಲ್ಲಿ ಎರಡು ಸಿನಿಮಾ!
ಬೆಳಗ್ಗೆ ವ್ಯಾಯಾಮ ಮಾಡಿ 8 ಗಂಟೆಯ ಒಳಗೆ ರಾಗಿ ಮಾಲ್ಟ್ ಮಾಡಿಕೊಂಡು ಕುಡಿಯುತ್ತಾರೆ. ಮತ್ತೆ 10 ಗಂಟೆಗೆ ಒಳಗೆ ಸೌತೆಕಾಯಿ, ಕ್ಯಾರೆಟ್ ಮತ್ತು ಆ ಸೀಸನ್‌ನಲ್ಲಿ ಸಿಗುವ ಹಣ್ಣುಗಳನ್ನು ಸೇವಿಸುತ್ತಾರೆ. ಡಯಟ್ ಮಾಡುವ ಸಮಯದಲ್ಲಿ ಪದೇ ಪದೇ ಹೊಟ್ಟೆ ಹಸಿವಾದರೆ ಒಂದು ಮೊಟ್ಟೆಯನ್ನು ಬೇಯಿಸಿಕೊಂಡು ತಿನ್ನಬಹುದಂತೆ. ಮೊಟ್ಟೆಗೆ ಯಾವುದೇ ರೀತಿಯಲ್ಲಿ ಉಪ್ಪು ಖಾರ ಮತ್ತು ಪೆಪ್ಪರ್ ಸೇರಿಸಬಾರದು. ಇನ್ನು ಮಧ್ಯಾಹ್ನದ ಊಟಕ್ಕೆ ಬ್ರೌನ್ ರೈಸ್ ಮತ್ತು ಸೊಪ್ಪಿನ ಸಾರು ತಿನ್ನುತ್ತಾರೆ. ಊಟದಲ್ಲಿ ಹೆಚ್ಚಾಗಿ ತರಕಾರಿ, ಸೊಪ್ಪು ಇರಬೇಕು.
ನನಗೆ ವಯಸ್ಸಾಗಿಲ್ಲ, ಇದು ನನ್ನ 2ನೇ ಮದುವೆನೂ ಅಲ್ಲ; ನೆಟ್ಟಿಗರಿಗೆ 'ಗಟ್ಟಿಮೇಳ' ನಟಿ ಸ್ವಾತಿ ಕ್ಲಾರಿಟಿ
ನಟನೆ ಮಾತ್ರವಲ್ಲದೆ ಅಶ್ವಿನಿ ರಾಗಿ ಮಾಲ್ಟ್ ತಯಾರಿಸಿ ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಾರೆ. ಈ ರಾಗಿ ಮಾಲ್ಟ್ ಮಾಡುವುದು ಹೇಗೆ? ಇದರಿಂದ ಉಪಯೋಗಗಳು ಏನು? ಬಳಸಿದವರು ಏನು ಹೇಳುತ್ತಾರೆ ಎಂದು ಪ್ರತಿಯೊಂದರ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
