ಕನ್ನಡ ಕಿರುತೆರೆ ಮಾಧ್ಯಮದ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ದಿನೇ ದಿನೇ ವಿಭಿನ್ನವಾದ ರೀತಿಯಲ್ಲಿ ವೀಕ್ಷಕರನ್ನು ಆಕರ್ಷಿಸುತ್ತಿದೆ. ಪ್ರತಿಯೊಬ್ಬ ಪ್ರಾತ್ರಧಾರಿಗೂ ಪ್ರಮುಖ್ಯತೆ ನೀಡಲಾಗಿದ್ದು ಎಲ್ಲರೂ ಮನೆ ಮಾತಾಗಿದ್ದಾರೆ.

'ಗಟ್ಟಿಮೇಳ' ಧಾರಾವಾಹಿಯ ಆದ್ಯಾ ನಿಜಕ್ಕೂ ಸಿನಿಮಾ ನಟಿನಾ?

ಪ್ರಸಾರವಾದ ದಿನದಿಂದಲ್ಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿರುವ ಗಟ್ಟಿಮೇಳ ಧಾರಾವಾಹಿಯ ಕೇಂದ್ರ ಬಿಂದುವೇ ನಾಯಕಿ ಅಮೂಲ್ಯ, ನಟ ವೇದಾಂತ ಹಾಗೂ ಅಕ್ಕ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿರುವ ಆದ್ಯಾ.

 

 
 
 
 
 
 
 
 
 
 
 
 
 

Reeeeeell pregnancy feels 🤭 PC: @swathihv_official mommy :)

A post shared by Parvathi (Anvitha Sagar) 👼 (@anvithasagar) on Nov 3, 2020 at 6:55am PST

ಅರೇ ಧಾರಾವಾಹಿಯಲ್ಲಿ ಆದ್ಯಾ ಗರ್ಭಿಣಿಯಾಗಿರುತ್ತಾರೆ. ಕುಟುಂಬಸ್ಥರ ಪ್ರೀತಿ ಹಾಗೂ ಆರೈಕೆ ಹೆಚ್ಚಿದೆ. ವಾವ್! ಇದ್ರೆ ಈ ತರ ಕುಟುಂಬ ಪಡೆಯಬೇಕೆಂದು ವೀಕ್ಷಕರೂ ಬಯಸುತ್ತಾರೆ. ಆದರೆ ಆದ್ಯಾ ಅಲಿಯಾಸ್ ಅನ್ವಿತಾ  ಶೇರ್ ಮಾಡಿಕೊಂಡಿರುವ ಫೋಟೋ ಅನುಮಾನ ಉಂಟು ಮಾಡಿದೆ.

ಕಿರುತೆರೆಯಲ್ಲಿ 'ಗಟ್ಟಿಮೇಳ' ಬಾರಿಸುತ್ತಿರುವ ಮಲೆನಾಡಿನ ಚೆಲುವೆ ಅನ್ವಿತಾ! 

ಚಿತ್ರೀಕರಣದ ವೇಳೆ ಕ್ಲಿಕ್ ಮಾಡಿದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಅನ್ವಿತಾ 'ರೀಲ್ ಪ್ರೆಗ್ನೆನ್ಸಿ' ಎಂದು ಬರೆದುಕೊಂಡಿದ್ದರು ಕೆಲ ನೆಟ್ಟಿಗರು ಅದು ರಿಯಲ್‌ ಎಂದು ನಂಬಿದ್ದಾರೆ. 'ಮೇಡಂ ನೀವು ಮದುವೆನೇ ಆಗಿಲ್ಲ ಆಗಲೇ ಮಗುನಾ' ಎಂದು ಕೆಲವರು ಪ್ರಶ್ನಿಸಿದರೆ ಇನ್ನೂ ಕೆಲವರು 'ನೀವು ಸಂತೂರ್ ಮಮ್ಮಿ. ನಾನು ಆಂಟಿ ಆಗಿ ನಿಮ್ಮ ಮಗು ಜೊತೆ ಆಟವಾಡುವುದಕ್ಕೆ ಕಾಯುತ್ತಿರುವೆ' ಎಂದು ಕೆಲವರು ಕಾಲು ಎಳೆದಿದ್ದಾರೆ.