ಕಿರುತೆರೆ ವೀಕ್ಷಕರಿಗಾಗಿ ಮೂರು ಗಂಟೆಗಳ ಕಾಲ ನಾನ್ ಸ್ಟಾಪ್ ಮನೋರಂಜನೆ ನೀಡಿದ ಜೀ ಕನ್ನಡ ಡಿಕೆಡಿ ತಂಡ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮೊದಲ ಬಾರಿಗೆ ವೀಕ್ಷಕರಿಗೆಂದು ನಾನ್ ಸ್ಟಾಪ್ ಮೂರು ಗಂಟೆಗಳ ಕಾಲ ಮನೋರಂಜನೆ ನೀಡಿದೆ. ಇಲ್ಲಿ ಡ್ಯಾನ್ಸರ್‌ಗಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿರುವ ಪ್ರತಿಯೊಬ್ಬ ಡ್ಯಾನ್ಸ್‌ ಮಾಸ್ಟರ್‌ಗಳನ್ನು ಕರೆದು ಗೌರವಿಸಲಾಗಿದೆ. 

ಸೆಪ್ಟೆಂಬರ್ 5ರಂದು ರಾತ್ರಿ 7.30ರಿಂದ 10.30ರ ವರೆಗೂ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಮಾಡಲಾಗಿದ್ದು ಕೋರಿಯೋಗ್ರಾಫರ್ ಚಿನ್ನಿ ಮಾಸ್ಟರ್, ನಟಿ ರಕ್ಷಿತಾ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ವಿಜಯ್ ರಾಘವೇಂದ್ರ ಕಾರ್ಯಕ್ರಮದ ತೀರ್ಪುಗಾರಗಾಗಿ ಕಾಣಿಸಿಕೊಂಡಿದ್ದಾರೆ. ಅನುಶ್ರೀ ನಿರೂಪಣೆ ಮಾಡುವ ಈ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಳ್ಳುತ್ತದೆ. 

ವಿದೇಶದಲ್ಲಿ ನಡಿಯಬೇಕಿತ್ತಂತೆ ಅನು- ಆರ್ಯವರ್ಧನ್ ಮದುವೆ; ಶೀಘ್ರದಲ್ಲಿ ರಾಜನಂದಿನಿ ಎಂಟ್ರಿ!

ಕಾರ್ಯಕ್ರಮದ ವೇದಿಕೆಯ ಮೇಲೆ ಚಿನ್ನಿ ಮಾಸ್ಟರ್‌ಗೆ ಮಹಾ ಗೌರವಾರ್ಪಣೆ ಮಾಡಿದ್ದಾರೆ. ' ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನನ್ನ ಜೀವನದಲ್ಲಿ ದೊಡ್ಡ ತಿರುವು ನೀಡಿದೆ. ಈ ಕಾರ್ಯಕ್ರಮದಲ್ಲಿ ನನಗೆ ಮತ್ತೆ ABCDಯಿಂದ ಪಾಠ ಶುರುವಾಗುತ್ತಿದೆ. ಇಲ್ಲಿ ಬಂದ ಮೇಲೆ ಇಷ್ಟೇ ಡ್ಯಾನ್ಸ್ ಅಲ್ಲ ಇನ್ನೂ ಅಪ್‌ಗ್ರೇಡ್‌ ಆಗಿರುವ ಡ್ಯಾನ್ಸ್ ತುಂಬಾ ಇದೆ ಎಂದು ಈ ಮಕ್ಕಳನ್ನು ನೋಡಿದ ಮೇಲೆ ಅರ್ಥ ಆಯ್ತು. ಮೊದಲು ನಾವು ಸಿನಿಮಾದಲ್ಲಿ ಏನು ತೋರಿಸುತ್ತೇವೆ ಅದೇ ಡ್ಯಾನ್ಸ್ ಅಂದುಕೊಳ್ಳುತ್ತಿದ್ದೆವು. ಆದರೆ ನಾನು ಇಲ್ಲಿ ಬಂದು ಕುಳಿತ ಮೇಲೆ ಅರ್ಥ ಆಯ್ತು ನಾನು ಮಾಡೋದು ಡ್ಯಾನ್‌ ಅಲ್ಲ ಇವರನ್ನು ನೋಡಿ ಕಲಿಯುತ್ತಿರುದೇ ಡ್ಯಾನ್ಸ್‌ ಎಂದು ಗೊತ್ತಾಗಿದ್ದು' ಎಂದು ಚಿನ್ನಿ ಮಾಸ್ಟರ್ ಮಾತನಾಡಿದ್ದಾರೆ.

View post on Instagram