Asianet Suvarna News Asianet Suvarna News

ಗರ್ಭಪಾತ ಆಗಿದ್ದೇ ಗೊತ್ತಾಗಿಲ್ಲ ಮುದ್ದೆ ರೀತಿಯಲ್ಲಿ ಮಗು ಬಂದು ಬಿಡ್ತು: ನಯನಾ ಕಣ್ಣೀರು

ಕಾಮಿಡಿ ಕಿಲಾಡಿಗಳು ನಯನಾ ಮೊದಲ ಸಲ ಪೇರೆಂಟಿಂಗ್ ಮತ್ತು ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. 
 

Zee Kannada Comedy Kiladigalu Nayana talks about pregnancy and parenting vcs
Author
First Published May 20, 2024, 3:55 PM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಸದ್ಯ ಮದರ್‌ಹುಡ್‌ ಎಂಜಾಯ್ ಮಾಡುತ್ತಿದ್ದಾರೆ. ಪ್ರೆಗ್ನೆನ್ಸಿ ಸಮಯದಲ್ಲಿ ಎಷ್ಟು ಕಷ್ಟ ಆಯ್ತು? ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ನಯನಾ ಹಂಚಿಕೊಂಡಿದ್ದಾರೆ.  

'ಮದುವೆಯಾದ ಒಂದು ವರ್ಷದಲ್ಲಿ ನಾವು ಫಿಕ್ಸ್‌ ಅಗಿದ್ವಿ, ನನಗೆ ನೀನೇ ಮಗು ನಿನನಗೆ ನಾನೇ ಮಗು ಎಂದು. ನಮ್ಮನ್ನು ನಾವು ಚೆನ್ನಾಗಿ ನೋಡಿಕೊಂಡು ನಮ್ಮ ನಡುವೆ ಇರುವ ಗೊಂದಲಗಳನ್ನು ದೂರ ಮಾಡಿಕೊಳ್ಳೋಣ ಎಂದು ನಿರ್ಧಾರ ಮಾಡಲಾಗಿತ್ತು. ಎಲ್ಲಿ ನನ್ನನ್ನು ಮದುವೆ ಮಾಡಿಕೊಂಡರೆ ನನ್ನ ವೃತ್ತಿ ಬದುಕು ನಿಂತುಬಿಡುತ್ತದೆ ಎಂದು ಶರತ್ ಹೆದರಿಬಿಟ್ಟಿದ್ದರು. ಮದುವೆಗೂ ನನ್ನ ವೈಯಕ್ತಿಕ ಜೀವನಕ್ಕೂ ವ್ಯತ್ಯಾಸವಿದೆ. ಮದುವೆ ಆದ ಮೇಲೆ ಆಫರ್‌ಗಳು ಹೆಚ್ಚಾಗಿತ್ತು. 22ನೇ ವಯಸ್ಸಿಗೆ ಮದುವೆ ಮಾಡಿಕೊಂಡೆ ಅದಾದ ಮೇಲೆ ನನ್ನ ಲಕ್ ಬದಲಾಗಿತ್ತು. ಸ್ವತಃ ನನ್ನ ಗಂಡ ಸಿಟ್‌ಗೆ ಡ್ರಾಪ್ ಮಾಡುತ್ತಿದ್ದರು ನನ್ನ ಜೊತೆ ಇರುತ್ತಿದ್ದರು' ಆರ್‌ಜೆ ರಾಜೇಶ್‌ ಯುಟ್ಯೂಬ್ ಚಾನೆಲ್‌ನಲ್ಲಿ ನಯನಾ ಮಾತನಾಡಿದ್ದಾರೆ.  

ಎರಡು ಅಬಾರ್ಷನ್ ಆಗಿತ್ತು, ಸಾಯೋ ನಿರ್ಧಾರ ಮಾಡಿ ಮಾತ್ರೆ ನುಂಗಿದರೂ ಮಗಳು ಬದುಕಿಬಿಟ್ಟಳು: ನಯನಾ

'ಜೀವನ ಚೆನ್ನಾಗಿ ನಡೆಯುತ್ತಿದೆ ಅಂದ್ಮೇಲೆ ಮಗು ಮಾಡಿಕೊಳ್ಳೋಣ ಎಂದು ತೀರ್ಮಾನ ಮಾಡಿದ್ವಿ. ನಾವು ಮಾಡಿಕೊಂಡಿದ್ದ ಸೇವಿಂಗ್‌ಗಳನ್ನು ಕೊರೋನಾ ಸಮಯದಲ್ಲಿ ಖರ್ಚಾಯ್ತು. ನನಗೆ ಕೊರೋನಾ ಪಾಸಿಟಿವ್ ಆಗಿತ್ತು ಆಗ ಪ್ರೆಗ್ನೆಂಟ್‌ ಆಗಿದ್ದೆ. ನನಗೆ ಇದ್ದ ಸಮಸ್ಯೆ ಮಗು ಮೇಲೆ ಪರಿಣಾಮ ಬೀರಬಾರದು ಎಂದು ತೆಗೆಸಿಬಿಟ್ಟೆ. ಅದಾದ ಮೇಲೆ ಮತ್ತೆ ಜೀವನವನ್ನು ಜೀರೋಯಿಂದ ಆರಂಭಿಸಿದೆವು. ಆ ಮೇಲೆ ಮತ್ತೆ ಮಗು ಮಾಡಿಕೊಳ್ಳುವ ಮನಸ್ಸಿ ಮಾಡಿ ಮತ್ತೆ ಪ್ಲ್ಯಾನ್ ಮಾಡಿದೆ. ಪ್ರೆಗ್ನೆನ್ಸಿ ಸಮಯದಲ್ಲಿ ನನ್ನ ಗಂಡನ ಜವಾಬ್ದಾರಿ ಹೆಚ್ಚಾಗಿತ್ತು ಅಲ್ಲದೆ ಮ್ಯಾನೇಜರ್‌ ಆಗಿ ಪ್ರಮೋಟ್‌ ಆಗಿಬಿಟ್ಟರು ಆಗ ನನಗೆ ಸಮಯ ಕೊಡಲಿಲ್ಲ. ರಾತ್ರಿ ಅಳುತ್ತಾ ನಿದ್ರೆ ಮಾಡುತ್ತಿದ್ದೆ' ಎಂದು ನಯನಾ ಹೇಳಿದ್ದಾರೆ. 

ಹೆಣ್ಣು ಮಗುವಿಗೆ ಜನ್ಮ ನೀಡಿದ ನಯನಾ; ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆ ಎಂದ ನೆಟ್ಟಿಗರು!

'ನನಗೆ ಅರೋಗ್ಯ ಸಮಸ್ಯೆಗಳು ಇತ್ತು. ಜೋರಾಗಿ ಕಿರುಚಿ ಮಾತನಾಡಿದಾಗ ನನ್ನ ಇಡೀ ದೇಹ numb ಆಗಿಬಿಡುತ್ತಿತ್ತು. ಗರ್ಭಿಣಿ ಆಗಿದ್ದಾಗ ನಿನ್ನ ಮಗುವಿಗೂ ಈ ಸಮಸ್ಯೆ ಬರುತ್ತದೆ ಎನ್ನುತ್ತಿದ್ದರು.ನನಗೆ ಗೊತ್ತಿಲ್ಲದೆ ಗರ್ಭಪಾತ ಆಯ್ತು, ಮುದ್ದೆ ರೀತಿಯಲ್ಲಿ ಹೊರಗೆ ಬಂದು ಬಿಟ್ಟಿದೆ. ಆ ಘಟನೆಯನ್ನು ನೆನಪು ಮಾಡಿಕೊಳ್ಳುವುದಕ್ಕೂ ಇಷ್ಟವಿಲ್ಲ. ಈಗ ಹುಟ್ಟಿರುವ ಮಗು ಬೇಡ ಎಂದು ತೀರ್ಮಾನ ಮಾಡಿಕೊಂಡಿದ್ದೆ ಆಗ ಮಾತ್ರೆಗಳನ್ನು ನುಗಿಬಿಟ್ಟಿದ್ದೆ. ಒಬ್ಬ ಮನುಷ್ಯ ಎಷ್ಟು ಅಂತ ಹೊಡೆತ ತಿನ್ನುತ್ತಾನೆ? ಎಷ್ಟು ತಾಳ್ಮೆ ಇರುತ್ತೆ? ಆಸ್ಪತೆಗೆ ಹೋದ ಮೇಲೆ ನಿನ್ನ ಮಗು ಹಾರ್ಟ್‌ ಬೀಟ್‌ ಚೆನ್ನಾಗಿದೆ ಅಂದುಬಿಟ್ಟರು...ಆಗ ನಾನು ಮಗಳಿಗೆ ಬದುಕಬೇಕು ಎಂದು ತೀರ್ಮಾನ ಮಾಡಿದೆ' ಎಂದಿದ್ದಾರೆ ನಯನಾ. 

Latest Videos
Follow Us:
Download App:
  • android
  • ios