ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಕಾಮಿಡಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಚಿತ್ರರಂಗಕ್ಕೆ ಪ್ರತಿಭಾನ್ವಿತ  ಕಲಾವಿದರನ್ನು ಕೂಡುಗೆಯಾಗಿ ನೀಡಿದೆ.  ಅವರ ಪೈಕಿ ಸೀಸನ್‌ -1 ವಿನ್ನರ್ ಶಿವರಾಜ್‌ ಕೆ ಆರ್‌ ಪೇಟೆ ಹೆಚ್ಚು ಪ್ರಸಿದ್ಧರಾಗಿದ್ದಾರೆ.

ನಾನು ಹೀರೋ ಅಲ್ಲ, ಈ ಚಿತ್ರದ ಕೂಸು: ಶಿವರಾಜ್‌ ಕೆಆರ್‌ ಪೇಟೆ

ಶಿವರಾಜ್‌ ತಮ್ಮ ಹುಟ್ಟಿದ ಹಬ್ಬವನ್ನು ದೇಸಿ ಶೈಲಿಯಲ್ಲಿ ಆಚರಿಸಿಕೊಂಡಿದ್ದಾರೆ.  ಸದ್ಯಕ್ಕೆ ಅಕ್ಕ-ಭಾವನ ಜೊತೆ ಕೆ.ಆರ್‌. ನಗರದ ಮೇಲೂರಿನಲ್ಲಿರುವ ಶಿವರಾಜ್‌, ರಾಗಿ ಮುದ್ದಿಯನ್ನೇ ಕೇಕ್ ಶೈಲಿಯಲ್ಲಿ ತಯಾರಿಸಿ  ಕಟ್‌ ಮಾಡಿದ್ದಾರೆ. ಹಾಸ್ಯ ನಟನ ಈ ದೇಸಿ ಆಚರಣೆ ನಟ್ಟಿಗರ ಗಮನ ಸಳೆದಿದೆ. 

"

ಶಿವರಾಜ್‌ ಸದ್ಯಕ್ಕೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ 'ರಾಬರ್ಟ್‌' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಅಷ್ಟೇ ಅಲ್ಲದೆ ನಿಖಿಲ್‌ ಕುಮಾರಸ್ವಾಮಿ ಅವರ ಮುಂದಿನ ಚಿತ್ರ  (ಇನ್ನೂ ಹೆಸರು ಇಟ್ಟಿಲ್ಲ), ಬಂಪರ್‌ ಹಾಗೂ ಶ್ರೀಮುರಳಿ ಅಭಿನಯದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಶಿವರಾಜ್‌ ಬಾಳಲ್ಲಿ ಹೊಸತನ್ನು ತರಲಿ ಹಾಗೂ ಚಿತ್ರರಂಗದಲ್ಲಿ ಉತ್ತುಂಗಕ್ಕೇರಲಿ ಎಂಬುವುದು ಸುವರ್ಣನ್ಯೂಸ್.ಕಾಮ್ ಹಾರೈಕೆ.