Karunada Ratna: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ ಚಂದನವನದ ಗೌರವ!

ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಅದ್ಭುತ ವ್ಯಕ್ತಿತ್ವ, ಸರಳತೆ ಹಾಗೂ ವಿನಯವಂತಿಕೆಯಿಂದ ಎಲ್ಲರಿಗೂ ಪ್ರಿಯವಾಗಿದ್ದರು. ಮುಗ್ಧ ನಗುವಿನಿಂದ ಕನ್ನಡಿಗರ ಹೃದಯದಲ್ಲಿ ರಾರಾಜಿಸುತ್ತಿರುವ ಕರ್ನಾಟಕದ ಈ ಅಮೂಲ್ಯ ರತ್ನ ಎಂದೆಂದಿಗೂ ಅಮರರಾಗಿರುತ್ತಾರೆ. 

Zee Kannada channel honoring Puneeth Rajkumar through Karunada Ratna program gvd

ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ತಮ್ಮ ಅದ್ಭುತ ವ್ಯಕ್ತಿತ್ವ, ಸರಳತೆ ಹಾಗೂ ವಿನಯವಂತಿಕೆಯಿಂದ ಎಲ್ಲರಿಗೂ ಪ್ರಿಯವಾಗಿದ್ದರು. ಮುಗ್ಧ ನಗುವಿನಿಂದ ಕನ್ನಡಿಗರ ಹೃದಯದಲ್ಲಿ ರಾರಾಜಿಸುತ್ತಿರುವ ಕರ್ನಾಟಕದ ಈ ಅಮೂಲ್ಯ ರತ್ನ ಎಂದೆಂದಿಗೂ ಅಮರರಾಗಿರುತ್ತಾರೆ. ಪುನೀತ್ ಅವರು ಸದ್ದಿಲ್ಲದೇ ಮಾಡಿರುವ ಸಮಾಜ ಸೇವೆಯ ಬಗ್ಗೆ ತಿಳಿದ ಕನ್ನಡಿಗರು ಭಾವುಕರಾಗಿದ್ದಾರೆ.  46 ವರ್ಷ ಸಿನಿಮಾರಂಗದಲ್ಲಿಯೇ ಕಳೆದ ಪುನೀತ್ ಅವರ ಸಾಧನೆ, ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದ ನಟ. ಅಪ್ಪನಷ್ಟೇ ಸಾಧನೆ ಮಾಡಿ ಎತ್ತರಕ್ಕೆ ಬೆಳೆದು ಕಣ್ಮರೆಯಾದ ಕನ್ನಡಿಗರ ಪಾಲಿನ ಕರ್ನಾಟಕ ರತ್ನನ ಅಮೋಘ ಸಿನಿ ಪಯಣವನ್ನು ಜೀ ಕನ್ನಡ ವಾಹಿನಿ (Zee Kannada) ಅತ್ಯಂತ ಗೌರವದಿಂದ ಸೆಲೆಬ್ರೆಟ್ ಮಾಡಿದೆ. ಈ ಜರ್ನಿಯಲ್ಲಿ ಶಿವರಾಜ್‌ಕುಮಾರ್ (Shiva Rajkumar), ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಹಾಗೂ ಅವರ ಕುಟುಂಬದ ಅನೇಕರು ಉಪಸ್ಥಿತರಿದ್ದರು. 'ಕರುನಾಡ ರತ್ನ' (Karunada Ratna) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಾಜ್‌ಕುಮಾರ್ (Dr.Rajkumar) ಕುಟುಂಬವಷ್ಟೇ ಅಲ್ಲದೇ ಚಿತ್ರರಂಗದ ಗಣ್ಯರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. 

Puneeth Rajkumar: ಲಕ್ಕಿಮ್ಯಾನ್ ಚಿತ್ರದ ಅಪ್ಪು ವಿಡಿಯೋ ಝಲಕ್ ಹಂಚಿಕೊಂಡ ಡಾರ್ಲಿಂಗ್​ ಕೃಷ್ಣ

ಈ ವೇಳೆ ವೇದಿಕೆ ಮೇಲೆ ಶಿವರಾಜ್‌ಕುಮಾರ್  ಬಾಲನಟನಾಗಿ ಅಪ್ಪು ನಟಿಸಿ, ಹಾಡಿದ್ದ  'ಬಾನ ದಾರಿಯಲ್ಲಿ..' ಹಾಡನ್ನು ಹಾಡಿದ್ದಷ್ಟೇ ಅಲ್ಲದೆ ಪುನೀತ್ ಇಷ್ಟ ಪಟ್ಟು ಹಾಡುತ್ತಿದ್ದ ಬಾಬಿ ಸಿನಿಮಾದ 'ಮೇ ಶಾಯರ್ ತೋ ನಹಿ' ಹಾಡನ್ನು ಕೂಡ ಹಾಡಿದ್ದಾರೆ. ಅಪ್ಪುಗಾಗಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ (V.Ravichandran) ಅವರು ರಚಿಸಿದ ಹಾಡು ಪ್ರೀತಿಯ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಜೀವನದ ಮೌಲ್ಯಗಳು, ಸಾಧನೆ, ಅಪೂರ್ವ ಸಂದೇಶದ ಜೊತೆಗೆ ಅವರ ಅಮೂಲ್ಯ ನೆನಪುಗಳನ್ನು 'ಕರುನಾಡ ರತ್ನ' ಕಾರ್ಯಕ್ರಮ ಅನಾವರಣಗೊಳಿಸಲಿದೆ. ಆ ಹಾಡನ್ನು ದೊಡ್ಮನೆ ಕುಟುಂಬದ ಸಮ್ಮುಖದಲ್ಲೇ ಹಾಡಿ, ಹೆಜ್ಜೆ ಹಾಕಲಾಗಿದೆ. 

ನಾದಬ್ರಹ್ಮ ಹಂಸಲೇಖ (Hamsalekha) ಕೂಡ ಈ ಕಾರ್ಯಕ್ರಮಕ್ಕಾಗಿ ಒಂದು ಟ್ಯೂನ್ ಹಾಕಿ ಸಾಹಿತ್ಯ ರಚಿಸಿದ್ದರು ಆ ಹಾಡಿಗೂ 'ಕರುನಾಡ ರತ್ನ' ವೇದಿಕೆ ಸಾಕ್ಷಿಯಾಗಿದೆ. ಸರಿಗಮಪ ಪ್ರತಿಭೆ ಕಂಬದ ರಂಗಯ್ಯ ಮಹಾಗುರು ಹಂಸಲೇಖ ಅವರು ಸಂಯೋಜಿಸಿದ ಟ್ಯೂನ್‌ಗೆ ಧ್ವನಿಯಾಗಿದ್ದಾರೆ. ಇದು ಈ ಕಾರ್ಯಕ್ರಮದ ಹೈಲೈಟ್‌ಗಳಲ್ಲೊಂದು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜರ್ನಿಯನ್ನು ಅದ್ದೂರಿಯಾಗಿ, ಅವರ ನೆನಪುಗಳನ್ನು ಶ್ರೀಮಂತವಾಗಿಸಲು ಜೀ ಕನ್ನಡ ವಾಹಿನಿ, ವರುಣ್ ಸ್ಟುಡಿಯೋಸ್ (Varun Studios) ಹಾಗೂ ಜಿಕೆಜಿಎಸ್ ಟ್ರಸ್ಟ್ (GKGS Trust) ಸಾಕಷ್ಟು ಶ್ರಮವಹಿಸಿದೆ. ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಇದೇ ಡಿಸೆಂಬರ್ 19, ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

Madhagaja: ಅಪ್ಪು ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸಿ ಎಂದ ಶ್ರೀಮುರಳಿ

ಇನ್ನು ಪುನೀತ್ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ (Ashwini Puneeth Rajkumar) ಅವರು ನಿರ್ಮಾಣ ಮಾಡಿರುವ ಈ ಸಾಕ್ಷ್ಯ ಚಿತ್ರವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios