ಕಥೆ, ಸಂಭಾಷಣೆ ಬರೆಯುವವರಿಗೆ ಒಳ್ಳೆ ಅವಕಾಶ, ಜೀ ಕನ್ನಡ ನಡೆಸ್ತಿದೆ ರೈಟರ್ ಆಡಿಷನ್
ಕಥೆ, ಸಂಭಾಷಣೆ ಬರೆಯೋಕೆ ಬರುತ್ತೆ ಆದ್ರೆ ಅವಕಾಶ ಸಿಗ್ತಿಲ್ಲ ಅಂತ ಕೊರಗೋದು ಬಿಟ್ಬಿಡಿ. ನಿಮ್ಮ ಬರವಣಿಗೆ ಪರೀಕ್ಷೆಗೆ ಸಿದ್ಧರಾಗಿ. ಜೀ ಕನ್ನಡ ನಿಮ್ಮ ಮನೆ ಬಾಗಿಲಿಗೆ ಬಂದು ರೈಟರ್ ಟೆಸ್ಟ್ ಮಾಡ್ತಿದೆ.
ಬರವಣಿಗೆ (Writing) ಒಂದು ಕಲೆ. ಕೆಲವರು ಸುದ್ದಿ ಬರೆಯೋದ್ರಲ್ಲಿ ಕೌಶಲ್ಯ ಹೊಂದಿದ್ರೆ ಮತ್ತೆ ಕೆಲವರು ಕಥೆ (story), ಕಾದಂಬರಿ, ಸಂಭಾಷಣೆ ಬರೆಯುವ ಅದ್ಭುತ ಪ್ರತಿಭೆ ಹೊಂದಿರುತ್ತಾರೆ. ಸಿನಿಮಾ, ಸೀರಿಯಲ್ (Serial) ನೋಡುವ ಸಮಯದಲ್ಲಿ ಅದೆಂಥ ಸಂಭಾಷಣೆ ಬರೆದಿದ್ದಾರೆ, ಈ ಜಾಗದಲ್ಲಿ ನಾನಿದ್ರೆ ಅದ್ರ ಕಥೆಯೇ ಬೇರೆ ಇತ್ತು ಎಂದು ಮನೆಯಲ್ಲೇ ಕುಳಿತು ಕೈ ಹಿಸುಕಿಕೊಳ್ಳುವವರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಸಣ್ಣ ಎಳೆಯನ್ನು ದೊಡ್ಡ ಕಾದಂಬರಿಯಾಗಿ ನಮ್ಮ ಮುಂದಿಡುವ ಕಥೆಗಾರರು ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆಯಾದ್ರೂ ಅವರನ್ನು ಗುರುತಿಸಿ, ಅವರಿಗೊಂದು ಅವಕಾಶ ನೀಡುವ ಪ್ರಯತ್ನ ಬಹಳ ಅಪರೂಪಕ್ಕೆ ಆಗಿದೆ. ಅಂಥವರಿಗೆ ಈಗ ಜೀ ಕನ್ನಡ (Zee Kannada) ಒಳ್ಳೆ ಅವಕಾಶ ನೀಡ್ತಿದೆ. ಬರವಣಿಗೆಯಲ್ಲಿ ನೀವು ಆಸಕ್ತಿ ಇದ್ದು, ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನಿಮ್ಮ ಬರವಣಿಗೆಗೆ ಇದೆ ಎಂದಾದ್ರೆ ತೆರೆ ಹಿಂದೆ ಮಿಂಚಲು ನಿಮಗೊಂದು ಅವಕಾಶವಿದೆ. ಜೀ ಕನ್ನಡ ಕಥೆಗಾರರು, ಸಂಭಾಷಣಾಗಾರರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ತಿದೆ. ಕನ್ನಡ ಓದಿ, ಬರೆಯಬಲ್ಲ ಪ್ರತಿಯೊಬ್ಬರಿಗೂ ಇದ್ರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆ ಮಾಹಿತಿ ನೀಡಿದೆ.
ಜೀ ಕನ್ನಡ, ಕಥೆಗಾರರನ್ನು ಹುಡುಕಿಕೊಂಡು ಜಿಲ್ಲೆ ಜಿಲ್ಲೆ ಸುತ್ತುತ್ತಿದೆ. ಈಗಾಗಲೇ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಜೀ ಕನ್ನಡ ಹಂಚಿಕೊಂಡಿದೆ. ಕಥೆ ಬರೆಯೋ ಕೌಶಲ್ಯ, ಸಂಭಾಷಣೆ ಬರೆಯೋ ಟ್ಯಾಲೆಂಟ್ ನಿಮಗಿದ್ರೆ, ನಿಮಗಿಲ್ಲಿದೆ ಅವಕಾಶದ ಹೆಬ್ಬಾಗಿಲು ಎಂದು ಶೀರ್ಷಿಕೆ ಹಾಕಲಾಗಿದ್ದು, ಎಂದು ಆಡಿಷನ್ ನಡೆಯಲಿದೆ ಎಂಬ ವಿವರವನ್ನು ಪೋಸ್ಟ್ ನಲ್ಲಿ ನೀಡಲಾಗಿದೆ.
ಕಾಮನೆಯ ಜೇನಿಗೆ, ಕವಣೆ ಬೀಸಿದ ರಮಣಿ ಭೂಮಿಕಾ, ಸೌಂದರ್ಯ ಸಮರಕ್ಕೆ ಹುಡುಗರು ಫಿದಾ!
ಜೀ ಕನ್ನಡದ ಕಥೆಗಾರ, ಸಂಭಾಷಣೆಗಾರರ ಆಡಿಷನ್ ಇದೇ ಜನವರಿ 11ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಅದ್ಯ ದಾವಣಗೆರೆ, ಶಿವಮೊಗ್ಗ, ಮಂಗಳೂರಿನಲ್ಲಿ ಈ ಆಡಿಷನ್ ಆಯೋಚಿಸಲಾಗಿದೆ. ಬರವಣಿಗೆ ಟೆಸ್ಟ್ ನೀಡಲು ನೀವು ಬೆಂಗಳೂರಿಗೆ ಬರಬೇಕಾಗಿಲ್ಲ. ನೀವಿದ್ದ ಜಾಗಕ್ಕೆ ಚಾನೆಲ್ ತಂಡ ಬರುವ ಕಾರಣ ನೀವು ನಿಮ್ಮ ಪ್ರತಿಭೆಯನ್ನು ಖರ್ಚಿಲ್ಲದೆ ತೋರಿಸಬಹುದು. ಇದು ಜೀ ಕನ್ನಡ ರೈಟರ್ ಆಡಿಷನ್ ಆಗಿದ್ದು, ಬರವಣಿಗೆ ಬಲ್ಲವರು ಇದರ ಸದುಪಯೋಗಪಡಿಸಿಕೊಳ್ಳಬಹುದು.
ಸಾಮಾನ್ಯವಾಗಿ ಎಲ್ಲ ಎಂಟರ್ಟೈನ್ಮೆಂಟ್ ಚಾನೆಲ್ ಗಳು ಈಗಾಗಲೇ ಸಂಭಾಷಣೆ, ಕಥೆ ಬರೆದಿರುವ ಹಿರಿಯ ಬರಹಗಾರರಿಗೆ ಅವಕಾಶ ನೀಡುತ್ತದೆ. ಹೊಸಬರನ್ನು ಹುಡುಕುವ ಪ್ರಯತ್ನಕ್ಕೆ ಹೋಗೋದು ಕಡಿಮೆ. ಆದ್ರೆ ಜೀ ಕನ್ನಡ ಹೊಸ ಪ್ರತಿಭೆ ಹುಡುಕಾಟ ನಡೆಸ್ತಾ ಊರೂರಿಗೆ ಹೋಗ್ತಿರೋದು ವಿಶೇಷ. ಬಹಳಷ್ಟು ಜನರಿಗೆ ಜೀವ ನೀಡಿದ ಚಾನೆಲ್ ಇದು ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಅದೇ ಹಳೆ ಕಥೆ, ಹಳೆ ಸಂಭಾಷಣೆ ಕೇಳಿ ಬೇಸರವಾಗಿದೆ. ಇನ್ಮುಂದಿನ ಸೀರಿಯಲ್ ನಲ್ಲಿ ಹೊಸತನ ತುಂಬಿರಲಿ ಎಂದು ಬಳಕೆದಾರರು ಹಾರೈಸಿದ್ದಾರೆ.
ಶಿಕ್ಷಕರಾಗಬೇಕೇ? ಹೂಡಿಯಲ್ಲಿ ಆರಂಭವಾಗಲಿರುವ ಟ್ರಾನ್ಸೆಂಡ್ ಕಾಲೇಜಿನಲ್ಲಿ ಹಲವು ಹುದ್ದೆಗಳಿವೆ!
ಜೀ ಕನ್ನಡ ಇನ್ಸ್ಟಾ ಪೋಸ್ಟ್ ನಲ್ಲಿ ಒಂದಿಷ್ಟು ಬರಹಗಾರರು ಮಾತನಾಡೋದನ್ನು ನೀವು ಕಾಣ್ಬಹುದು. ರೈಟರ್ಸ್ ಆಡಿಷನ್ ಇದೇ ಮೊದಲು, ರೈಟರ್ಸ್ಗೆ ಇದು ಒಳ್ಳೆ ಅವಕಾಶ ನೀಡ್ತಿದೆ, ಜೀ ಯಾವಾಗ್ಲೂ ಹೊಸತನ್ನು ಮಾಡುತ್ತೆ, ಹೊಸತನದ ರೈಟರ್ಸ್ ಹುಡುಕೋದು ಬಹಳ ಕಷ್ಟ ಹೀಗೆ ಮೈಕ್ ಹಿಡಿದ ರೈಟರ್ಸ್ ತಮ್ಮ ಅಭಿಪ್ರಾಯವನ್ನು ಚಾನೆಲ್ ಮುಂದೆ ಹಂಚಿಕೊಂಡಿದ್ದಾರೆ.