ಬೆಂಗಳೂರಿನ ಹೂಡಿಯಲ್ಲಿ ಟ್ರಾನ್ಸೆಂಡ್ ಗ್ರೂಪ್ ತನ್ನ ಹೊಸ ಶಿಕ್ಷಣ ಸಂಸ್ಥೆಯನ್ನು ಆರಂಭಿಸುತ್ತಿದ್ದು, ಹಲವು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಹೂಡಿ ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಈ ಕ್ಯಾಂಪಸ್‌ನಲ್ಲಿ ಪಿಯು ಮತ್ತು ಪದವಿ ಕಾಲೇಜುಗಳಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬೇಕಾಗಿದ್ದಾರೆ. ಪದವಿ ವಿಭಾಗದಲ್ಲಿ ಬಿ.ಕಾಂ, ಬಿಬಿಎ, ಬಿಸಿಎ ಹಾಗೂ ಪಿಯುಸಿ ವಿಭಾಗದಲ್ಲಿ ವಾಣಿಜ್ಯ ವಿಷಯಗಳು, ಕಂಪ್ಯೂಟರ್ ಸೈನ್ಸ್, ಇಂಗ್ಲೀಷ್, ಕನ್ನಡ, ಹಿಂದಿ ಸೇರಿದಂತೆ ಹಲವು ವಿಷಯಗಳಿಗೆ ಉಪನ್ಯಾಸಕರ ಅವಶ್ಯಕತೆಯಿದೆ. ಆಸಕ್ತರು "ಹೂಡಿ ಕ್ಯಾಂಪಸ್‌ಗಾಗಿ" ಎಂದು ವಿಷಯ ಸಾಲಿನಲ್ಲಿ ಉಲ್ಲೇಖಿಸಿ hr@transcendgroup.org ಗೆ ರೆಸ್ಯೂಮ್ ಕಳುಹಿಸಬಹುದು.

ಬೆಂಗಳೂರು (ಜ.6): ಟ್ರಾನ್ಸೆಂಡ್ ಗ್ರೂಪ್ ಸಂಸ್ಥೆ ವೈಟ್‌ಫೀಲ್ಡ್ ಬಳಿಯ ಹೂಡಿಯಲ್ಲಿ ಹೊಸದಾಗಿ ತನ್ನ ಶಿಕ್ಷಣ ಸಂಸ್ಥೆಯನ್ನು ತೆರೆಯುತ್ತಿದ್ದು, ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. 

ವೈಟ್‌ಫೀಲ್ಡ್ ಬಳಿ ಹೊಸ ಕ್ಯಾಂಪಸ್ ಹೂಡಿ ಮೆಟ್ರೋ ನಿಲ್ದಾಣದಿಂದ ಕೇವಲ 3 ನಿಮಿಷಗಳ ಕಾಲ್ನಡಿಗೆ ದೂರದಲ್ಲಿದ್ದು, ಪಿಯು ಮತ್ತು ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣವನ್ನು ರೂಪಿಸುವ ಉತ್ಸಾಹಭರಿತ ಮತ್ತು ಕ್ರಿಯಾತ್ಮಕ ವ್ಯಕ್ತಿಗಳನ್ನು ಹುಡುಕಲಾಗುತ್ತಿದೆ.

IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ 68 ಹುದ್ದೆಗಳಿಗೆ ಅರ್ಜಿ ಆಹ್ವಾನ

ಲಭ್ಯವಿರುವ ಹುದ್ದೆಗಳು:
ನಿರ್ವಾಹಕ ಸಿಬ್ಬಂದಿ
ಬೋಧನಾ ವಿಭಾಗ:
ಪದವಿ ಕಾಲೇಜಿಗೆ:
ಬಿ.ಕಾಂ ವಿಷಯಗಳು
BBA ವಿಷಯಗಳು
BCA ವಿಷಯಗಳು

SBI SCO ನೇಮಕಾತಿ 2025: 150 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಿಯು ಕಾಲೇಜಿಗೆ [ವಾಣಿಜ್ಯ ವಿಭಾಗ]:
ಲೆಕ್ಕಶಾಸ್ತ್ರ (Accountancy)
ವ್ಯವಹಾರ ಅಧ್ಯಯನಗಳು (Business Studies)
ಮೂಲಗಣಿತ (Basic Mathematics)
ಸ೦ಖ್ಯಾ ಶಾಸೃ (statistics)
ಕಂಪ್ಯೂಟರ್ ಸೈನ್ಸ್
ಇಂಗ್ಲೀಷ್
ಕನ್ನಡ, ಹಿಂದಿ
ಸಂಸ್ಕೃತ, ಫ್ರೆಂಚ್

ಆಸಕ್ತ ಅಭ್ಯರ್ಥಿಗಳು hr@transcendgroup.org ಗೆ ಇಮೇಲ್ ಮೂಲಕ ಸ್ವವಿವರಗಳನ್ನು ಕಳುಹಿಸಿ. ನಿಮ್ಮ ರೆಸ್ಯೂಮ್‌ ಕಳುಹಿಸುವಾಗ ವಿಷಯ ಸಾಲಿನಲ್ಲಿ "ಹೂಡಿ ಕ್ಯಾಂಪಸ್‌ಗಾಗಿ" ಎಂದು ನಮೂದಿಸುವುದು ಅಗತ್ಯವಾಗಿದೆ.