ಲಾಕ್‌ಡೌನ್‌ನಲ್ಲಿ ನಟ ಭರತ್ ಬೊಪ್ಪಣ್ಣ ಫಿಟ್ನೆಸ್‌ ಹೇಗೆ ಕಾಪಾಡಿಕೊಂಡರು ಗೊತ್ತಾ? ಹೊಸ ಕಾರಿನ ನಂತರ ಮನೆಗೆ ಬಂತು ಸೈಕಲ್.

ಕೊರೋನಾ ಲಾಕ್‌ಡೌನ್‌ ವೇಳೆ ನಟ-ನಟಿಯರು ತಮ್ಮ ಫಿಟ್ನೆಸ್‌ ಮಂಟೈನ್ ಮಾಡುವುದರಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಶೂಟಿಂಗ್ ಇಲ್ಲದ ಕಾರಣ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಫಿಟ್ನೆಸ್, ಸ್ಕಿನ್ ಕೇರ್, ಕೋವಿಡ್19 ಕೇರ್ ಎಂದೆಲ್ಲಾ ಟಿಪ್ಸ್ ನೀಡುತ್ತಿದ್ದರು. ಈ ವೇಳೆ ಭರತ್ ಫಿಟ್ನೆಸ್ ಕಾಪಾಡಿಕೊಳ್ಳಲು ಸೈಕಲ್ ಖರೀದಿಸಿರುವುದರ ಬಗ್ಗೆ ಹಂಚಿಕೊಂಡಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಭರತ್ ಬಿಳಿ ಬಣ್ಣದ ಹುಂಡೈ ವೆನ್ಯು ಖರೀದಿಸಿದ್ದರು. ಈಗ ಕಪ್ಪು ಬಣ್ಣ ಸೈಕಲ್‌ನ ಫಿಟ್ನೆಸ್‌ ಸಲುವಾಗಿ ಬರ ಮಾಡಿಕೊಂಡಿದ್ದಾರೆ. ಸಣ್ಣ ಆಗಲು ಯಾವ ರೀತಿ ವರ್ಕೌಟ್ ಮಾಡಬೇಕು, ಬಾಡಿ ಬಿಲ್ಡ್ ಮಾಡುವುದಕ್ಕೆ ಎಷ್ಟು ಪ್ರೋಟಿನ್ ಬಳಸಬೇಕು ಮತ್ತು ಡ್ಯಾನ್ಸ್ ಮಾಡಿದರೆ ಏನು ಉಪಯೋಗ ಎಂದೆಲ್ಲಾ ಹಂಚಿಕೊಳ್ಳುತ್ತಾರೆ. 

ದುಬಾರಿ ಕಾರು ಖರೀದಿಸಿದ 'ಬ್ರಹ್ಮಗಂಟು' ನಟ ಭರತ್ ಬೋಪಣ್ಣ! 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಭರತ್ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್‌ ಗೀತಾ, ಭರತ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಧಾರಾವಾಹಿ ಶೀಘ್ರದಲ್ಲಿಯೇ ಅಂತ್ಯ ಕಾಣಲಿದೆ. ಆದರೆ ತಂಡದಿಂದ ಯಾವುದೇ ಖಚಿತ ಮಾಹಿತಿ ಹೊರ ಬಂದಿಲ್ಲ.

View post on Instagram