ದುಬಾರಿ ಕಾರು ಖರೀದಿಸಿದ 'ಬ್ರಹ್ಮಗಂಟು' ನಟ ಭರತ್ ಬೋಪಣ್ಣ!
ಬಿಳಿ ಬಣ್ಣದ ಹುಂಡೈ ವೆರ್ನಾ ಕಾರು ಖರೀದಿಸಿದ ಕಿರುತೆರೆ ನಟ ಭರತ್ ಬೋಪಣ್ಣ. ಫೋಟೋ ಶೇರ್ ಮಾಡಿದ್ದಾರೆ.

ಬ್ರಹ್ಮಗಂಟು ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟ ಭರತ್ ಬೋಪಣ್ಣ ಹೊಸ ಕಾರು ಖರೀದಿಸಿದ್ದಾರೆ.

ಬಿಳಿ ಬಣ್ಣದ ಹುಂಡೈ ವರ್ನಾ ಕಾರಿನ ಒಡೆಯನಾಗಿದ್ದಾರೆ.
ಸುಮಾರು 11-16 ಲಕ್ಷ ಬೆಲೆ ಇರುವ ಈ ಕಾರನ್ನು ಖರೀದಿಸಿ, ಅದರ ಮುಂದೆ ಫೋಟೋ ಕ್ಲಿಕಿಸಿದ್ದಾರೆ.
ಕಾಮೆಂಟ್‌ಗಳ ಮೂಲಕ ಭರತ್‌ಗೆ ಶುಭಾಶಯಗಳು ಹರಿದು ಬರುತ್ತಿದೆ.
'ಗಿರಿಜಾ ಕಲ್ಯಾಣ',' ರಾಧಾ ರಮಣ','ಬ್ರಹ್ಮಗಂಟು','ಜೋತಿ' ಸೀರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 'ಡೆಮೋ ಪೀಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.