ಆಂಕರ್ ಅನುಶ್ರೀ ಇಷ್ಟು ದಿನ ಮದುವೆ ಬೇಡ ಎನ್ನಲು ಕಾರಣವೇ ನಟ ಅರುಣ್ ಸಾಗರ್; ವಿಡಿಯೋ ವೈರಲ್!
ಅನುಶ್ರೀ ಇಷ್ಟು ದಿನ ಮದುವೆಯಾಗದೆ ಸಿಂಗಲ್ ಆಗಿರಲು ಕಾರಣವೇ ಅರುಣ್ ಸಾಗರ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ......
ಕನ್ನಡ ಕಿರುತೆರೆಯ ಪಟ ಪಟ ಮಾತಿನ ಮಲ್ಲಿ, ದಿ ಬೆಸ್ಟ್ ನಿರೂಪಕಿ ಅನುಶ್ರೀ ಅವರಿಗೆ ಪ್ರತಿಯೊಬ್ಬರು ಕೇಳುವುದು ಒಂದೇ ಪ್ರಶ್ನೆ..ಮೇಡಂ ನಿಮ್ಮ ಮದುವೆ ಯಾವಾಗ ಅಂತ. ಇತ್ತೀಚಿನ ದಿನಗಳಲ್ಲಿ ಅನುಶ್ರೀ ಅವರನ್ನು ಮದುವೆಯಾದರೂ, ಇವರನ್ನು ಮದುವೆಯಾದರು, ಇಷ್ಟು ಮಕ್ಕಳಿದ್ದಾರೆ, ಗಂಡ ಮನೆ ಯಾವಗುವು, ಹುಡುಗ ಯಾರು ಹೀಗೆ ಏನ್ ಏನೋ ವಿಡಿಯೋಗಳು ಸುದ್ದಿಗಳು ಕ್ರಿಯೇಟ್ ಮಾಡಿರುತ್ತಾರೆ. ಅರಂಭದಲ್ಲಿ ತುಂಬಾನೇ ಸೀರಿಯಲ್ ಆಗಿ ಸ್ವೀಕರಿಸಿದ ಅನು ಕೊಂಚ ಗರಂ ಆಗಿದ್ದರು ದಿನದಿಂದ ದಿನಕ್ಎ ಹೆಚ್ಚಾಗುತ್ತಿದ್ದರಂತೆ ಕೂಲ್ ಆಗಿ ಸ್ವೀಕರಿಸಿಬಿಟ್ಟರು.
ಅಯ್ಯೋ ಮದುವೆ ಅಂದ್ರೆ ನನಗೆ ಚೂರು ಇಷ್ಟವಿಲ್ಲ ಆದರೆ ಯೂಟ್ಯೂಬ್ ಚಾನೆಲ್‌ಗಳು ನನಗೆ ದಿನಕ್ಕೊಂದು ಮದುವೆ ಮಾಡಿಸಿಬಿಡುತ್ತಾರೆ, ಯಾರೋ ಗೊತ್ತಿಲ್ಲದ ವ್ಯಕ್ತಿ ಜೊತೆ ಮದುವೆಯಾಗಿ ಮಗುನೂ ಆಗಿದೆ ಎಂದು ಆಗಾಗ ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಳ್ಳುತ್ತಾರೆ. ಆದರೆ ಇದಕ್ಕೆ ನಿಜವಾದರ ಕಾರಣ ಎನು ಎಂದು ಅಭಿಮಾನಿಗಳು ಹುಡುಕಿದಾಗ ಸಿಕ್ಕ ಉತ್ತರವೇ ನಟ ಅರುಣ್ ಸಾಗರ್. ಸ್ವತಃ ಅನುಶ್ರೀ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಯೂಟ್ಯೂಬ್‌ನಿಂದ ತಿಂಗಳಿಗೆ 40 ಲಕ್ಷ ಸಂಪಾದನೆ; 31 ವರ್ಷದ ಪ್ರಜಕ್ತಾಳ ವಾರ್ಷಿಕ ಆದಾಯ ಎಷ್ಟು?
'ನನ್ನ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಲು ಅರುಣ್ ಸಾಗರ್ ಅಣ್ಣ ನನಗೆ ಒಮ್ಮೆ ಕರೆ ಮಾಡಿದ್ದರು. ಆಗ ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟಿ ನಿನ್ನ ಜೀವನದ ಎಲ್ಲಾ ಕನಸುಗಳು ನನಸಾಗಲಿ. ಬೇಗ ಮದುವೆಯಾಗಿ ಒಂದು ಒಳ್ಳೆಯ ಜೀವನವನ್ನು ಕಂಡುಕೋ ಎಂದು ಹೇಳಿದರು. ಆದರೆ ಇದೇ ಸಮಯದಲ್ಲಿ ಮಾತು ಮೊಟಕುಗೊಳಿಸುವ ಮುನ್ನ ಇಷ್ಟವಿದ್ದರೆ ಮಾತ್ರ ಎಂದು ಒಂದು ಪಂಚ್ ಲೈನ್ ಸೇರಿಸಿದ್ದರು...ನೀನು ಎಲ್ಲರ ಹಾಗಲ್ಲ, ಸ್ಪಲ್ಪ ನನ್ನ ಹಾಗೆ ಅಂದರೆ ಎಲ್ಲಾ ಕಡೆ ಇರ್ತೀಯಾ. ನಿನ್ನಂಥ ಹುಡುಗಿಗೆ ಮದುವೆಯಾಗಲು ಒಬ್ಬ ಗಂಡು, ಗಂಡ, ಬಾಯ್‌ಫ್ರೆಂಡ್ ಅಥವಾ ಪ್ರೇಮಿ ಇವರು ಯಾರು ಆಗಿರಬಾದು ಬದಲಿಗೆ ನಿನಗೆ ಒಬ್ಬ ಗೆಳೆಯ ಸಿಗಬೇಕಯ ಮದುವೆ ಆಗೋಲೆ ಎಂದು ಅರುಣ್ ಸಾಗರ್ ಹೇಳಿದ್ದರು' ಎಂದು ಅನುಶ್ರೀ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.