- Home
- Entertainment
- TV Talk
- ಮಗಳಿಂದ ರಾಖಿ ಕಟ್ಟಿಸಿಕೊಂಡ ನಟ, ನಿರೂಪಕ ಜೈ ಭಾನುಶಾಲಿ... ಟೀಕೆಗಳಿಗೆ ಡೋಂಟ್ ಕೇರ್ ಎಂದ ನಟ
ಮಗಳಿಂದ ರಾಖಿ ಕಟ್ಟಿಸಿಕೊಂಡ ನಟ, ನಿರೂಪಕ ಜೈ ಭಾನುಶಾಲಿ... ಟೀಕೆಗಳಿಗೆ ಡೋಂಟ್ ಕೇರ್ ಎಂದ ನಟ
ರಕ್ಷಾ ಬಂಧನದ ಶುಭ ಗಳಿಗೆಯಲ್ಲಿ ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟೋದು ಸಂಪ್ರದಾಯ, ಆದರೆ ನಟ, ನಿರೂಪಕ ಜೈ ಭಾನುಶಾಲಿ ಕೈಗೆ ಮಗಳು ರಾಖಿ ಕಟ್ಟಿದ್ದು ಟೀಕೆಗಳಿಗೆ ನಟ ಡೋಂಟ್ ಕೇರ್ ಎಂದಿದ್ದಾರೆ.

ಆಗಸ್ಟ್ 19ರಂದು ದೇಶಾದ್ಯಂತ ಜನರು ಸಹೋದರ -ಸಹೋದರಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನವನ್ನು ವಿಜೃಂಭಣೆಯಿಂದ ಆಚರಿಸಿದ್ದು, ಸೆಲೆಬ್ರಿಟಿಗಳು ಸಹ ರಕ್ಷಾ ಬಂಧನದ (Raksha Bandhan) ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದರು.
ಬಾಲಿವುಡ್ ಮತ್ತು ಹಿಂದಿ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ, ನಿರೂಪಕ ಜೈ ಭಾನುಶಾಲಿ (Jai Bhanushali) ಕೂಡ ರಕ್ಷಾ ಬಂಧನದ ಮುದ್ದಾದ ವಿಡಿಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟ ಜೈ ಭಾನುಶಾಲಿ ಕೈಗೆ ಅವರ ಪುತ್ರಿ ಪುಟಾಣಿ ತಾರಾ (Tara Bhanushali) ರಾಖಿ ಕಟ್ಟಿ ಆರತಿ ಮಾಡಿದ್ದು, ಸಿಹಿ ಕೂಡ ತಿನ್ನಿಸಿ ಸಂಭ್ರಮಿಸಿದ್ದಾರೆ. ಈ ಮುದ್ದಾದ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ನಟ, ಕಳೆದ ವರ್ಷ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ರಕ್ಷಾಬಂಧನದ ಕುರಿತು ಬರೆದ ಜೈ, ಕಳೆದ ವರ್ಷ ಮಗಳು ನನ್ನ ಕೈಗೆ ರಾಖಿ ಕಟ್ಟುವ ಫೋಟೊ ಹಂಚಿಕೊಂಡಾಗ, ಜನರು ಇದನ್ನ ಪ್ರಶ್ನಿಸಿದ್ದರು. ಇದು ಸರಿಯಲ್ಲ, ಸಹೋದರ ಸಹೋದರಿ ರಾಖಿ ಕಟ್ಟಬೇಕು ಎಂದು ಜನರು ಟೀಕೆ ಮಾಡಿದ್ದರು ಎಂದಿರುವ ನಟ, ತಾನು ಟೀಕೆಗಳಿಗೆ ಕೇರ್ ಮಾಡದೇ ಆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ನನ್ನ ಮಗುವಿನ ಜೊತೆ ನಾನಿದ್ದಾಗ, ಆಕೆಯಲ್ಲಿ ನನಗೆ ಒಬ್ಬ ಸಹೋದರಿ, ತಾಯಿ, ಮಗಳು ಎಲ್ಲವೂ ಕಾಣಿಸುತ್ತಾಳೆ, ಹಾಗಾಗಿ ರಾಖಿ ಕಟ್ಟುವ ಈ ಸಂಪ್ರದಾಯವನ್ನು ನಾನು ಎಲ್ಲಾ ವರ್ಷವೂ ಮುಂದುವರೆಸಿಕೊಂಡು ಬರೋದಾಗಿ ಹೇಳಿದ್ದಾರೆ.
ಜೈ ವಿಡಿಯೋಗೆ ಹೆಚ್ಚಿನ ಅಭಿಮಾನಿಗಳು ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ತಪ್ಪೇನಿಲ್ಲ. ನಾವು ಸಹ ಬಾಲ್ಯದಿಂದ ಇಲ್ಲಿವರೆಗೆ ಅಪ್ಪನ ಕೈಗೆ, ಮಾವನ ಕೈಗೆ ರಕ್ಷಾ ಬಂಧನ ಕಟ್ಟಿಕೊಂಡು ಬಂದಿದ್ದೇವೆ, ಅವರು ನಮ್ಮನ್ನು ರಕ್ಷಣೆ ಮಾಡ್ತಾರೆ ಅಂದ ಮೇಲೆ ರಾಖಿ ಕಟ್ಟಿದ್ರೆ ತಪ್ಪೇನಿಲ್ಲ ಎಂದಿದ್ದಾರೆ.