ಎರಡನೇ ಪತ್ನಿ ಎಂಬ ಹಣೆಪಟ್ಟಿ, ಬಿಗ್ ಬಾಸ್ ಮನೆಯಲ್ಲಿ ಮಲ್ಲಿಕ್ ಮಡದಿಯರ ಇಂಟರೆಸ್ಟಿಂಗ್ ಬಾತ್
ಅರ್ಮಾನ್ ಮಲ್ಲಿಕ್ ಹಾಗೂ ಇಬ್ಬರು ಪತ್ನಿಯರು ಬಿಗ್ ಬಾಸ್ ಒಟಿಟಿಯಲ್ಲಿ ಸುದ್ದಿ ಮಾಡ್ತಿದ್ದಾರೆ. ತಮ್ಮ ಹಳೆ ದಿನಗಳನ್ನು ನೆನೆಪು ಮಾಡಿಕೊಳ್ತಿರುವ ಅವರು, ಎರಡನೇ ಮದುವೆ ನಂತ್ರ ಏನಲ್ಲ ಆಯ್ತು ಎಂಬುದನ್ನು ಹೇಳಿದ್ದಾರೆ.
ಪ್ರಸಿದ್ಧ ಯುಟ್ಯೂಬರ್ ಹಾಗೂ ನಟ ಅರ್ಮಾನ್ ಮಲ್ಲಿಕ್ (Youtuber and Actor Arman Mallik) ತನ್ನ ಇಬ್ಬರು ಪತ್ನಿಯರಾದ ಪಾಯಲ್ ಹಾಗೂ ಕೃತಿಕಾ ಜೊತೆ ಬಿಗ್ ಬಾಸ್ ಒಟಿಟಿ 3 ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಮಾನ್ ಮಲ್ಲಿಕ್ ಇಬ್ಬರು ಪತ್ನಿಯರು ಬಿಗ್ ಬಾಸ್ ಮನೆಯಲ್ಲಿ ತಮ್ಮಿಬ್ಬರ ಸಂಬಂಧ ಹಾಗೂ ಮದುವೆಗೆ ಸಂಬಂಧಿಸಿದ ವಿಷ್ಯಗಳ ಬಗ್ಗೆ ಮಾತನಾಡೋದನ್ನು ನೀವು ನೋಡ್ಬಹುದು. ಲೇಟೆಸ್ಟ್ ಎಪಿಸೋಡ್ ನಲ್ಲಿ ಅರ್ಮಾನ್ ಮಲ್ಲಿಕ್ ಪತ್ನಿಯರಿಬ್ಬರು, ಅರ್ಮಾನ್ ಎರಡನೇ ಮದುವೆ ಆದ ಸಮಯದಲ್ಲಿ ಮನೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ.
ಪತಿಯನ್ನು ಹಂಚಿಕೊಳ್ಳಲು ಯಾವೊಬ್ಬ ಮಹಿಳೆ ಕೂಡ ಇಷ್ಟಪಡೋದಿಲ್ಲ. ಪ್ರೀತಿ (Love) ಯ ಪತಿ ತನ್ನ ಸ್ನೇಹಿತೆ (Friend) ಯನ್ನು ಮದುವೆ ಆಗ್ತಾನೆ ಅಂದ್ರೂ ಅದನ್ನು ಸಹಿಸೋದು ಕಷ್ಟ. ಪತಿಯ ಪ್ರೀತಿಯನ್ನು ಬೇರೆಯವರಿಗೆ ನೀಡೋದು ಸುಲಭದ ಕೆಲಸವಲ್ಲ. ಪತಿ ಇನ್ನೊಂದು ಮದುವೆಯಾಗಿದ್ದಾನೆ ಎಂದಾಗ ಎಲ್ಲರಿಗೂ ಶಾಕ್ ಆಗುತ್ತೆ. ನೋವು, ಹತಾಷೆಕಾಡುತ್ತೆ. ದಿನ ಕಳೆದಂತೆ ಅವರು ಆ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ನಡೆಸ್ತಾರಾದ್ರೂ ಮನಸ್ಸಿನಲ್ಲೊಂದು ನೋವು ಇದ್ದೇ ಇರುತ್ತೆ. ಪತಿ ಎರಡನೇ ಮದುವೆ (Marriage) ಯಾದ ಸುದ್ದಿ ಕೇಳ್ತಿದ್ದಂತೆ ವಿಚ್ಛೇದನ ನೀಡೋರ ಸಂಖ್ಯೆಯೇ ಹೆಚ್ಚು. ಅಪರೂಪಕ್ಕೆ ಕೆಲವರು ಪತಿಯ ಇನ್ನೊಂದು ಪತ್ನಿ ಜೊತೆ ಹೊಂದಿಕೊಂಡು ಬಾಳ್ವೆ ನಡೆಸ್ತಾರೆ. ಅದ್ರಲ್ಲಿ ಅರ್ಮಾನ್ ಮಲ್ಲಿಕ್ ಪತ್ನಿಯರು ಸೇರಿದ್ದಾರೆ.
ಇಬ್ಬರು ಪತ್ನಿಯರೊಂದಿಗೆ ಬಿಗ್‌ಬಾಸ್ ಮನೆಗೆ ಬಂದ ಅರ್ಮಾನ್ ಮಲೀಕ್ ಯಾರು? ಏನು ಈತನ ಕಹಾನಿ?
ಬಿಗ್ ಬಾಸ್ ಒಟಿಟಿಯಲ್ಲಿ ಸನಾ, ಅರ್ಮಾನ್ – ಕೃತಿಕಾ ಮದುವೆ ವಿಷ್ಯ ಕೇಳಿ ಮೊದಲಿಗೆ ನಿಮಗೆ ಏನನ್ನಿಸಿತು ಎಂದು ಪಾಯಲ್ ಗೆ ಪ್ರಶ್ನೆ ಕೇಳ್ತಾರೆ. ಇದಕ್ಕೆ ಉತ್ತರಿಸಿದ ಪಾಯಲ್, ಆರಂಭದಲ್ಲಿ ನನಗೆ ಏನಾಗ್ತಿದೆ ಅನ್ನೋದೇ ಅರ್ಥವಾಗಿಲ್ಲ ಎಂದಿದ್ದಾರೆ. ಮಧ್ಯ ಮಾತನಾಡಿದ ಕೃತಿಕಾ, ನಾನು ಪಾಯಲ್ ಸ್ಥಾನದಲ್ಲಿದ್ರೆ ನನಗೂ ಬೇಸರವಾಗ್ತಿತ್ತು ಅಂದ್ರು. ಈ ಸಂಬಂಧವನ್ನು ಮುರಿದುಕೊಳ್ಳುವ ಪ್ರಯತ್ನ ಕೂಡ ನಾನು ಮಾಡಿದ್ದೆ. ನನ್ನಿಂದ ಸುಂದರ ಕುಟುಂಬ ಹಾಳಾಗಿದೆ ಎನ್ನುವ ನೋವಿತ್ತು ಎಂದು ಕೃತಿಕಾ ಹೇಳಿದ್ದನ್ನು ನೀವು ಕೇಳ್ಬಹುದು.
ಇಬ್ಬರು ಶತ್ರುಗಳಾಗಿದ್ದ ಸಮಯ ಅದು : ಅರ್ಮಾನ್ ಮಲ್ಲಿಕ್ ಕೃತಿಕಾರನ್ನು ಮದುವೆಯಾದ ವಿಷ್ಯ ಗೊತ್ತಾದ್ಮೇಲೆ ಇಬ್ಬರು ಸ್ನೇಹಿತೆಯರು ಶತ್ರುಗಳಾಗಿದ್ದರಂತೆ. ಒಬ್ಬರನ್ನೊಬ್ಬರು ನೋಡಿಕೊಳ್ಳೋದು, ಮಾತನಾಡೋದು ನಿಂತಿತ್ತಂತೆ. ಫೋನ್ ಮಾಡಿದ್ರೂ ಪರಸ್ಪರ ಬೈದುಕೊಳ್ತಿದ್ದರಂತೆ. ನಿಧಾನವಾಗಿ ಪರಿಸ್ಥಿತಿ ಸರಿ ಹೋಯ್ತು ಎನ್ನುತ್ತಾರೆ ಕೃತಿಕಾ. ಹಾಗಂತ ಈಗ್ಲೂ ನಾವಿಬ್ಬರು ಪರಸ್ಪರ ಪ್ರೀತಿ ಮಾಡ್ತೇವೆ ಎಂದಲ್ಲ. ನಮ್ಮಿಬ್ಬರ ಬಾಂಡ್ ನಾವೇ ಕ್ರಿಯೇಟ್ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಇವರು.
ದಾರಿ ತಪ್ಪಿಸುವ ಪ್ರಯತ್ನ ಮಾಡ್ತಿದ್ದ ಜನರು : ಪಾಯಲ್ ಮತ್ತೆ ಕೃತಿಕಾ ಈ ವಿಷ್ಯ ಕೂಡ ಮಾತನಾಡಿದ್ದಾರೆ. ಜನರು ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದರಂತೆ. ಒಬ್ಬರ ಬಳಿ ಒಂದು ಹೇಳಿದ್ರೆ ಇನ್ನೊಬ್ಬರ ಬಳಿ ಇನ್ನೊಂದು ವಿಷ್ಯ ಹೇಳ್ತಿದ್ದರಂತೆ. ಆತ ಆಕೆಯ ಪತಿ, ನಿನ್ನನ್ನು ಸದಾ ಆಟ ಆಡಿಸ್ತಾಳೆ ನೋಡು, ನಿನಗೆ ಯಾವಾಗ್ಲೂ ಎರಡನೇ ಪತ್ನಿ ಪಟ್ಟ ಇರುತ್ತೆ ಎಂದು ಜನರು ಕೃತಿಕಾ ಬಳಿ ಹೇಳ್ತಿದ್ದರಂತೆ. ಇನ್ನು ಪಾಯಲ್ ಬಳಿ ಬಂದು ಮತ್ತೇನೇನೋ ಹೇಳ್ತಿದ್ದರಂತೆ.
ಹೆಂಡತಿ ಸ್ನೇಹಿತೆಯನ್ನೇ ಮದುವೆಯಾದ ಯೂಟ್ಯೂಬರ್; ಖಾತೆಯಲ್ಲಿ ಕೋಟಿ ಕೋಟಿ ಹಣ ಹೇಗೆ ಬಂತು?
ಈಗ ಇಬ್ಬರು ಪತ್ನಿಯರು ಖುಷಿಯಾಗಿದ್ದಾರೆ. ಅರ್ಮಾನ್ ಮಲ್ಲಿಕ್ ನಮ್ಮ ಬಳಿ ಜಗಳ ಮಾಡ್ತಾರೆ. ಆದ್ರೆ ನಾವೆಂದೂ ಪರಸ್ಪರ ಜಗಳ ಮಾಡ್ಕೊಂಡಿಲ್ಲ ಎನ್ನುತ್ತಾರೆ ಪಾಯಲ್, ಕೃತಿಕಾ. ಅರ್ಮಾನ್ ಮಲ್ಲಿಕ್ ಹಾಗೂ ಇಬ್ಬರು ಪತ್ನಿಯರು ಯುಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಯುಟ್ಯೂಬ್ ಚಾನೆಲ್ ಮೂಲಕ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡೋರಲ್ಲಿ ಅರ್ಮಾನ್ ಮಲ್ಲಿಕ್ ಸೇರಿದ್ದಾರೆ.